ಮುಂಬೈನ ಮತದಾನ ಕೇಂದ್ರದ ಬಳಿ ಡಮ್ಮಿ ಇವಿಎಂ ಅಳವಡಿಸಿದ ಆರೋಪದ ಮೇಲೆ ಮುಂಬೈ ಪೊಲೀಸರು ಶಿವಸೇನೆ (ಯುಬಿಟಿ- ಉದ್ಧವ್ ಠಾಕ್ರೆ ಬಣ) ಮೂವರು ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಮತ ಹಾಕುವುದು ಹೇಗೆ ಎಂದು ತಿಳಿಯದ ಜನರಿಗೆ ಮಾಹಿತಿ ನೀಡುವ ಕಾರ್ಯವನ್ನು ಮಾಡಲಾಗಿದೆ ಎಂದು ಶಿವಸೇನೆ ನಾಯಕರುಗಳು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಮಹಾರಾಷ್ಟ್ರ ಚುನಾವಣೆ : ಮಹಾ ವಿಕಾಸ್ ಅಘಾಡಿಯ ಐಕಾನ್ ಉದ್ಧವ್ ಠಾಕ್ರೆ!
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಶಿವಸೇನೆ (ಯುಬಿಟಿ) ನಾಯಕ ಸುನೀಲ್ ರಾವುತ್, “ಮತ ಹಾಕುವುದು ಹೇಗೆ ಎಂದು ತಿಳಿಯದ ಜನರಿಗೆ ಮಾಹಿತಿ ನೀಡಲು ಡಮ್ಮಿ ಇವಿಎಂ ಅನ್ನು ಮತದಾನ ಕೇಂದ್ರದಿಂದ 100 ಮೀಟರ್ ದೂರದಲ್ಲಿ ಇಡಲಾಗಿತ್ತು” ಎಂದು ತಿಳಿಸಿದ್ದಾರೆ.
#WATCH | On Mumbai Police detaining 3 workers from Shiv Sena (UBT) for allegedly installing dummy EVMs near the polling station in Mumbai, Shiv Sena (UBT) leader Sunil Raut says “Dummy EVM was kept more than 100 metres away from the polling station, for the people who do not know… pic.twitter.com/w5mEuXq0x4
— ANI (@ANI) May 20, 2024
“ಡಮ್ಮಿ ಇವಿಎಂ ಇರಿಸಿದ ಕಾರಣ ನಮ್ಮ ಮೂವರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ನಮ್ಮ ಕಾರ್ಯಕರ್ತರನ್ನು ಬಿಡುಗಡೆ ಮಾಡುವಂತೆ ನಾವು ಪೊಲೀಸರಲ್ಲಿ ಮನವಿ ಮಾಡುತ್ತೇವೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಶಿವಸೇನೆ, ಎನ್ಸಿಪಿ ನಾಯಕರ ಮೇಲೆ ಇಡಿ ಕಣ್ಣು; ಉದ್ಧವ್ ಠಾಕ್ರೆ ಪಕ್ಷದಿಂದ ಎನ್ಡಿಎಗೆ ಜಂಪ್!
“ಈ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿ ಸೋಲುತ್ತಾರೆ ಎಂಬುದು ಬಿಜೆಪಿಗೆ ಈಗಾಗಲೇ ಖಚಿತವಾಗಿದೆ. ಆದ್ದರಿಂದಾಗಿ ಪೊಲೀಸರನ್ನು ಬಳಸಿಕೊಂಡು ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ” ಎಂದು ಆರೋಪಿಸಿದ ಸುನೀಲ್ ರಾವುತ್, “ಆದರೆ ಶಿವಸೇನೆ (ಯುಬಿಟಿ) ಇದಕ್ಕೆಲ್ಲ ಹೆದರುವುದಿಲ್ಲ” ಎಂದಿದ್ದಾರೆ.