ನೂರಾರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಲೈಂಗಿಕ ಹಗರಣದ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಪಾಸ್‌ಪೋರ್ಟ್ ರದ್ದು ಮಾಡುವಂತೆ ಕೋರಿ ಕೇಂದ್ರ ವಿದೇಶಾಂಗ ವ್ಯವಹಾರ ಸಚಿವಾಲಯಕ್ಕೆ ಎಸ್ಐಟಿ ಪತ್ರ ಬರೆದಿದೆ.
ಹಗರಣ ಹೊರಬರುತ್ತಿದ್ದಂತೆ ವಿದೇಶಕ್ಕೆ ಪರಾರಿಯಾಗಿರುವ ಪ್ರಜ್ವಲ್, ವಿಚಾರಣೆಗೆ ಹಾಜರಾಗುವಂತೆ ಹಲವಾರು ನೋಟಿಸ್ ನೀಡಿದರೂ, ಬೆಂಗಳೂರಿಗೆ ಬಂದಿಲ್ಲ. ಆತನ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದ್ದರೂ, ಆತನನ್ನು ಬಂಧಿಸಲಾಗಿಲ್ಲ.
ಆತನ ಬಂಧನಕ್ಕೆ ನಾನಾ ತಂತ್ರ ರೂಪಿಸಿರುವ ಎಸ್‌ಐಟಿ ಈಗಾಗಲೇ ಆತನ ಬ್ಯಾಂಕ್ ಖಾತೆಗಳನ್ನು ನಿರ್ಬಂಧಿಸಿದೆ. ಅಲ್ಲದೆ, ನ್ಯಾಯಾಲಯದಿಂಧ ಅರೆಸ್ಟ್ ವಾರಂಟ್ ಪಡೆದಿದೆ. ಇದೀಗ, ಆತನ ಪಾಸ್‌ಪೋರ್ಟ್ ರದ್ದು ಕೋರಿ ಕೇಂದ್ರಕ್ಕೆ ಪತ್ರ ಬರೆದಿದೆ ಎಂದು ತಿಳಿದುಬಂದಿದೆ.