ಪಾಳೇಗಾರಿಕೆ ರಾಜಕಾರಣದ ಪೋಷಣೆಗೆ ಹೆಸರಾದ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರೈತ ಶೋಷಣೆ ಮಿತಿಮೀರುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಕಿಡಿಕಾರಿದ್ದಾರೆ.
ಈ ಕುರಿತು ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಿರುವ ಅವರು, “ಸಚಿವ ಸತೀಶ್ ಜಾರಕಿಹೊಳಿ ಅವರು ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರ ವ್ಯಾಪ್ತಿಯ ಇಸ್ಲಾಂಪುರ ಗ್ರಾಮದ ರೈತ ತನ್ನ ಕೃಷಿ ಚಟುವಟಿಕೆಯ ಸಲುವಾಗಿ ಮಾಡಿಕೊಂಡಿದ್ದ ಖಾಸಗಿ ಸಾಲ ತೀರಿಸಲಾಗದೇ ಸಾಲಕೊಟ್ಟವರಿಂದ ಪತ್ನಿ, ಪುತ್ರನನ್ನು ನಿಷೇಧಿತ ಜೀತ ಪದ್ಧತಿ ಹಾಗೂ ಅಕ್ರಮ ಗೃಹ ಬಂಧನದ ಶಿಕ್ಷೆ ಅನುಭವಿಸುವ, ಅಪಮಾನ ಹಾಗೂ ಅಸಹಾಯಕ ಪರಿಸ್ಥಿತಿಯಿಂದ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ” ಎಂದಿದ್ದಾರೆ.
“ಕಾಂಗ್ರೆಸ್ ಸರ್ಕಾರದ ಆಡಳಿತ ಕಾಲದಲ್ಲಿ ಈ ರಾಜ್ಯದ ಜನತೆ ಇನ್ನೂ ಏನೇನು ಅನುಭವಿಸಬೇಕೋ? ತಿಳಿಯದಾಗಿದೆ. ಗೂಂಡಾಗಳು, ಮೀಟರ್ ಬಡ್ಡಿ ದಂಧೆಕೋರರು, ಕೊಲೆಗಡುಕರಿಗೆ ಈ ಸರ್ಕಾರದ ಆಡಳಿತ ವ್ಯವಸ್ಥೆ ‘ನೆರಳಿನ ಭಾಗ್ಯ’ ಕಲ್ಪಿಸಿಕೊಡುತ್ತಿದೆ” ಎಂದು ಟೀಕಿಸಿದ್ದಾರೆ.
“ಈ ಸರ್ಕಾರಕ್ಕೆ ನೈತಿಕತೆಯಿದ್ದರೆ ಕೂಡಲೇ ಯಮಕನಮರಡಿ ರೈತನ ಆತ್ಮಹತ್ಯೆ ಪ್ರಕರಣದ ಕುರಿತು ಕಠಿಣ ಕ್ರಮ ಜರುಗಿಸಿ ಮುಂದೆಂದೂ ಇಂತಹ ಹೀನ ಘಟನೆಗಳು ರಾಜ್ಯದಲ್ಲಿ ತಲೆ ಎತ್ತದಂತೆ ಎಚ್ಚರಿಕೆ ವಹಿಸಲಿ, ರೈತ ಸಮೂಹಕ್ಕೆ ಆತ್ಮಸ್ಥೈರ್ಯ ತುಂಬುವ ಕಾರ್ಯಕ್ರಮ ರೂಪಿಸಲಿ, ಮೃತ ರೈತನ ಕುಟುಂಬಕ್ಕೆ ಸೂಕ್ತ ಆರ್ಥಿಕ ನೆರವು ಹಾಗೂ ಭದ್ರತೆ ಒದಗಿಸಲಿ” ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.
ಪಾಳೇಗಾರಿಕೆ ರಾಜಕಾರಣದ ಪೋಷಣೆಗೆ ಹೆಸರಾದ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರೈತ ಶೋಷಣೆ ಮಿತಿಮೀರುತ್ತಿದೆ, ಸಚಿವ @JarkiholiSatish ಅವರು ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರ ವ್ಯಾಪ್ತಿಯ ಇಸ್ಲಾಂಪುರ ಗ್ರಾಮದ ರೈತ ತನ್ನ ಕೃಷಿ ಚಟುವಟಿಕೆಯ ಸಲುವಾಗಿ ಮಾಡಿಕೊಂಡಿದ್ದ ಖಾಸಗಿ ಸಾಲ ತೀರಿಸಲಾಗದೇ ಸಾಲಕೊಟ್ಟವರಿಂದ ಪತ್ನಿ, ಪುತ್ರನನ್ನು ನಿಷೇಧಿತ… pic.twitter.com/qIFzwPjQ6l
— Vijayendra Yediyurappa (Modi Ka Parivar) (@BYVijayendra) May 21, 2024
