ಕಳೆದ ವರ್ಷ ಸೆ.30ರಂದು ನಾವು ಬೆಂಗಳೂರಿನಲ್ಲಿ ಚರ್ಚೆ ನಡೆಸಿದ್ದಾಗ ನಮಗೆ ಗೊತ್ತಿತ್ತು. ಈ ಚುನಾವಣೆ ಬಿಜೆಪಿ ವರ್ಸಸ್ ಕಾಂಗ್ರೆಸ್ ಚುನಾವಣೆ ಅಲ್ಲ. ಇದು ರಾಜಕೀಯ ಪಕ್ಷಗಳ ವಿರುದ್ಧ ಜನರ ಕೆಲಸ ನಡೆಯುವ ಸಂಧರ್ಭ ಎಂಬುದು ಸ್ಪಷ್ಟವಾಗಿತ್ತು. ಗಾಜಿಯಾಬಾದ್ ಮತ್ತು ನೋಯ್ಡಾಗಳಲ್ಲಿ ಬಿಜೆಪಿ ಸೋಲು ಖಚಿತವೆಂಬ ವಾತಾವರಣವಿತ್ತು. ಅಂದರೆ, ಜನರು ಅರಿತಿದ್ದಾರೆ ಮತ್ತು ಹೋರಾಡುತ್ತಿದ್ದಾರೆ ಎಂಬುದನ್ನು ಸೂಚಿಸಿತ್ತು. ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಹೋರಾಟ ನಡೆಸಬೇಕಿದ್ದ ರೀತಿಯಲ್ಲಿ ಹೋರಾಟ ನಡೆಸಲಿಲ್ಲ. ಆ ಹೋರಾಟವನ್ನು ಜನರು, ನಾಗರಿಕ ಸಂಘಟನೆಗಳು ಮಾಡಿದ್ದಾರೆ – ಮಾಡುತ್ತಿದ್ದಾರೆ. ಈಗ ಅನಿಸುವಂತೆ ಎನ್ಡಿಎ ಸೋಲುತ್ತಿದೆ ಎಂದು ಚುನಾವಣಾ ವಿಶ್ಲೇಷಕ, ‘ಇಂಡಿಯಾ ಎಗೈನ್ಸ್ಟ್ ಹೇಟ್’ ಅಭಿಯಾನದ ನದೀಂ ಖಾನ್ ಹೇಳಿದರು.
ಬೆಂಗಳೂರಿನಲ್ಲಿ ‘ಜನರ ಇಚ್ಛೆಯೇ ಜನತಂತ್ರದ ಫಲಿತವಾಗಬೇಕು’ ಎಂಬ ಹೆಸರನಲ್ಲಿ ನಡೆದ ಉನ್ನತ ಮಟ್ಟದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. “ಈ ಚುನಾವಣೆಯಲ್ಲಿ 1.7 ಕೋಟಿ ಅಂಚೆ ಮತಗಳಿವೆ. ಇದರಲ್ಲಿ ಎಷ್ಟು ತಲುಪಿವೆ. ಅದರ ಪ್ರೋಸೆಸಿಂಗ್ ಹೇಗಾಗುತ್ತಿದೆ ಯಾರಿಗೂ ಗೊತ್ತಿಲ್ಲ. ದೆಹಲಿಯಲ್ಲಿ 1.7 ಮತ ಅಂಚೆ ಮತಗಳಿವೆ. ಈ ಅಂಚೆ ಮತ ಪಡೆಯಲು ಚುನಾವಣಾ ಆಯೋಗದ ಅಧಿಕಾರಿಗಳು ಹೋಗಿದ್ದಾಗ, ಅವರೊಂದಿಗೆ ಬಿಜೆಪಿಗರು ಹೋಗಿದ್ದರು ಎಂಬುದನ್ನು ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಅಂದರೆ, ಮತದಾನ ಹೇಗೆ ನಡೆಯುತ್ತಿದೆ” ಎಂದು ಪ್ರಶ್ನಿಸಿದರು.
“ಸಿಟಿಜನ್ಸ್ ವಿಜಿಲೆನ್ಸ್ ಗ್ರೂಪ್ಗಳನ್ನು ಕಟ್ಟಿಕೊಂಡು ಈ ಎಲ್ಲದರ ಮೇಲೆ ಕಣ್ಣಿಡಲು ದೇಶಾದ್ಯಂತ ಕರೆ ಕೊಡಬೇಕು. ಕೇಂದ್ರೀಯವಾಘಿ ಒಂದು ಸಹಾಯವಾಣಿ ನೀಡಬೇಕು. ದೇಶಾದ್ಯಂತ ಕ್ಷೇತ್ರಗಳ ಮಟ್ಟದಲ್ಲಿ ಕೆಲಸ ಮಾಡುವ ತಂಡಗಳು ಈ ಸಮಿತಿಗೆ ದೂರುಗಳನ್ನು ರವಾನಿಸಬೇಕು. ಒಂದು ಲೀಗಲ್ ತಂಡ ಇಂತಹ ಎಲ್ಲ ದೂರುಗಳನ್ನು ಕಾನೂನಿನ ಭಾಷೆಯಲ್ಲಿ ದೂರು ದಾಖಲೆ ಮಾಡಬೇಕು. ಇಂತಹ ಎಲ್ಲ ದೂರುಗಳನ್ನೂ ಸೇರಿಸಿ ಮುಂಧೆ ನಾವು ಕೋರ್ಟಿನಲ್ಲೂ ಕೂಡಾ ಹೋರಾಡಲು ಸಾಧ್ಯವಾಗಬೇಕು” ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಿವೃತ್ತ ಮೇಜರ್ ಜನರಲ್ ವಂಬತ್ತಕೆರೆ, “ನಾವು ಜೂನ್ 4ರ ನಂತದ ಎದುರಿಸಹುದಾದ ಅಪಾಯಗಳೇನು ಎಂಬುದರ ಬಗ್ಗೆ ಅರಿತುಕೊಳ್ಳಬೇಕು. ಚರ್ಚೆ ಮಾಡಬೇಕು. ‘ಇಂಡಿಯಾ’ ಮೈತ್ರಿಕೂಟ ಗೆಲ್ಲಬಹುದೆಂಬ ಆಶಾಭಾವ ಹಲವರಲ್ಲಿದೆ. ಈ ಎಲ್ಲದರ ನಡುವೆ ಚುನಾವಣಾ ಆಯೋಗ ಹೇಗೆ ತಂತ್ರಗಾರಿಕೆ ಮಾಡಬಹುದೆಂಬ ಬಗ್ಗೆ ನಾನು ಎಚ್ಚರಿಕೆವಹಿಸಬೇಕು” ಎಂದರು.
“ಬಿಜೆಪಿ ಗೆದ್ದರೂ – ಗೆಲ್ಲದಿದ್ದರೂ ರಸ್ತೆಯಲ್ಲಿ ಸಮಸ್ಯೆಗಳು ಉಂಟಾಗುತ್ತವೆ. ಗೆದ್ದರೆ, ವಿಜಯೋತ್ಸವಗಳು ಮಸೀದಿಗಳ ಹತ್ತಿರವೇ ಸಾಗುತ್ತವೆ. ಅಲ್ಲಿ ಅಶಾಂತಿ ಹಿಂಸೆ ಉಂಟಾಗುತ್ತದೆ. ಒಂದು ವೇಳೆ ಸೋತರೂ ಹತಾಶೆಯ ಕಾರಣಕ್ಕೆ ಮತ್ತೆ ಮಸೀದಿಗಳನ್ನು ಗುರಿ ಮಾಡಿಕೊಂಡು, ಕೋಮುಗಲಭೆಗಳನ್ನು ಸೃಷ್ಠಿಸುವ ಆತಂಕಗಳಿವೆ. ಅದನ್ನು ತಡೆಯಲು ಮಸೀದಿಗಳು, ಚರ್ಚುಗಳನ್ನು ಗುರಿಯಾಗಿಸದಂತೆ ಕಾಪಾಡುವುದು ಹೇಗೆಂದು ಯೋಜಿಸಬೇಕು” ಎಂದು ಎಚ್ಚರಿಸಿದರು.
“ಒಂದು ವೇಳೆ ಎನ್ಡಿಎ ಸೋತರೆ, ಅವರು ಅಧಿಕಾರ ಹಸ್ತಾಂತರಿಸುತ್ತಾರಾ? ಅಧಿಕಾರಕ್ಕಾಗಿ ಸೆಕ್ಷನ್ 144 ಹಾಕಬಹುದು. ಪರಿಸ್ಥಿತಿ ಕೈಮೀರಿದರೆ ಸೇನೆಯನ್ನು ಕರೆಸಬಹುದು. ಈಗಾಗಲೇ ಮೂರರಲ್ಲಿ ಒಂದರಷ್ಟು ಸೇನೆಯನ್ನು ಇದಕ್ಕಾಗಿ ನೇಮಿಸಲಾಗಿದೆ. ಡೊನಾಲ್ಡ್ ಟ್ರಂಪ್ ಸನ್ನಿವೇಶ ಅಥವಾ ಚೀನಾಗೆ ಪೂರಕ ಪರಿಸ್ಥಿತಿಯೂ ದೇಶದಲ್ಲಿ ಆಗಬಹುದು. ಒಂದು ಬಗೆಯ ರಾಷ್ಟ್ರೀಯ ತುರ್ತು ಪರಿಸ್ಥಿತಿ ಸೃಷ್ಟಿಯಾಗಬಹುದು” ಎಂದು ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, “ಅಧಿಕಾರ ಹಸ್ತಾಂತರವಾಗುವ ಸಂದರ್ಭದಲ್ಲಿ ಅಮೇರಿಕದಲ್ಲಿ ಟ್ರಾನ್ಸಿಶನ್ ಇಂಟಗ್ರಿಟಿ ಪ್ರೊಜೆಕ್ಟ್ ಎಂಬುದನ್ನು ರೂಪಿಸಲಾಗಿತ್ತು. ಇದು ನರೇಟಿವ್ ಕಟ್ಟುವ, ಸೇನೆ ಮತ್ತು ಅರೆಸೇನೆಯ ನಿಭಾವಣೆ ಮಾಡುತ್ತಿತ್ತು. ಜನರು ಟಿವಿಗಳಿಗಿಂತ ಸಾಮಾಜಿಕ ಜಾಲತಾಣಗಳನ್ನು ಹೆಚ್ಚಾಗಿ ನೋಡುತ್ತಾರೆ. ಪ್ರಶಾಂತ್ ಕಿಶೋರ್ ಅವರನ್ನೂ ಸೇರಿದಂತೆ ಎಲ್ಲರೂ ಈಗ ಪರ್ಯಾಯ ನರೇಟಿವ್ ಕಟ್ಟುವ ಕೆಲಸ ಮಾಡಬೇಕು” ಎಂದು ಹೇಳಿದರು.
“ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಎದ್ದುಕಾಣುವಂತಹ ಆಕ್ರೋಶ ಬೇರೆಡೆ ಇಲ್ಲದಿರಬಹುದು. ಆದರೆ, ಗುಜರಾತ್ ಸೇರಿದಂತೆ ಹಲವೆಡೆ ಆಕ್ರೋಶ ಕಂಡುಬರುತ್ತಿದೆ. ರೈತಾಂದೋಲನದ ನಂತರ ಕೆಲವು ಸಮುದಾಯಗಳು ಕೆಲವು ನಿರ್ಧಾರಗಳಿಗೆ ಬಂದಿವೆ. 119 ರಾಜಪೂತ್ ಸಂಘಟನೆಗಳನ್ನು ಅಮಿತ್ ಶಾ ಕೊಂಡುಕೊಳ್ಳಲು ಸಾಧ್ಯವಾಗಲಿಲ್ಲ. ಕೆಲವು ಸ್ಥಳೀಯ ರಾಜಕೀಯ ಪಕ್ಷಗಳು ಅಳಿವು-ಉಳಿವಿನ ಹೋರಾಟ ನಡೆಸುತ್ತಿವೆ. ನರೇಟಿವ ಕಟ್ಟುವ ಕೆಲಸದಲ್ಲಿ ಈ ಪಕ್ಷಗಳ ಪಾತ್ರ ಬಹಳಷ್ಟಿದೆ” ಎಂದರು.
“ಈಗ ದೇಶವು ಸಾವು-ಬದುಕಿನ ಸನ್ನಿವೇಶದಲ್ಲಿದೆ. ಈಗ ಕೇವಲ ಮಸೀದಿಗಳು ಮಾತ್ರ ಗುರಿಯಾಗುತ್ತದೆಂದು ಹೇಳಬಾರದು. ಭಾರತದ ಮುಸ್ಲಿಮ್ ಸಮುದಾಯದ ಅದ್ಭುತವಾಗ ಸ್ವಯಂನಿಯಂತ್ರಣ ಮತ್ತು ಪ್ರಬುದ್ಧತೆಯನ್ನು ಪ್ರದರ್ಶಿಸುತ್ತಿದೆ. ದೇಶವನ್ನು ಮುನ್ನಡೆಸುವಲ್ಲಿ ಎಲ್ಲರೂ ಒಗ್ಗಟ್ಟಾಗಿ ಸಾಗಬೇಕು” ಎಂದು ಹೇಳಿದರು.