ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಪ್ರಣಾಳಿಕೆ ವಿಚಾರದಲ್ಲಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು, ಪ್ರಧಾನಿ ಮೋದಿ ಅವರನ್ನು “ಸುಳ್ಳುಗಳ ಸರದಾರ” ಎಂದು ಕರೆದಿದ್ದಾರೆ.
ಹರಿಯಾಣದ ಯಮುನಾನಗರ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರವನ್ನು ನಡೆಸಿದ ಮಾತನಾಡಿದ ಖರ್ಗೆ, “ಕಾಂಗ್ರೆಸ್ ಸಂಪತ್ತನ್ನು ಮರುಹಂಚಿಕೆ ಮಾಡಲು ಮತ್ತು ಮಹಿಳೆಯರ ಮಂಗಳಸೂತ್ರಗಳನ್ನು ಕಿತ್ತುಕೊಳ್ಳಲು ಯೋಜಿಸುತ್ತಿದೆ ಎಂದು ಮೋದಿ ಹೇಳುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ್ಮ ಎಲ್ಲಾ ಆಸ್ತಿಯನ್ನು ಕಿತ್ತುಕೊಳ್ಳುತ್ತದೆ ಎಂದು ಮೋದಿ ಹೇಳಿದ್ದಾರೆ. ಆದರೆ ನಾವು ಎಂದಿಗೂ ಈ ಮಾತುಗಳನ್ನು ಹೇಳಿಲ್ಲ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಅಪಪ್ರಚಾರ: ಬಟಾ ಬಯಲಾಯ್ತು ಬಿಜೆಪಿ ಪಿತೂರಿ! Congress Manifesto
“ಓರ್ವ ಪ್ರಧಾನಿಯಾಗಿ ಈ ರೀತಿ ಸುಳ್ಳುಗಳನ್ನು ಹೇಳಿದರೆ ನಾವು ಏನೆಂದು ಹೇಳುವುದು? ಈ ರೀತಿ ಮಾತನಾಡುವವರಿಗೆ ಮತ್ತೆ ನಾವು ಮತವನ್ನು ನೀಡಬೇಕೆ” ಎಂದು ಪ್ರಶ್ನಿಸಿದ್ದು, “ಈ ರೀತಿ ಸುಳ್ಳು ಹೇಳಿಕೊಂಡೇ ತಿರುಗಾಡುವ ಪ್ರಧಾನಿ ನರೇಂದ್ರ ಮೋದಿ ಅವರು ಸುಳ್ಳುಗಳ ಸರದಾರ” ಎಂದು ಲೇವಡಿ ಮಾಡಿದರು.
“ಇಂಡಿಯಾ ಮೈತ್ರಿಕೂಟವು ಜಾತಿ ಗಣತಿ ಆರಂಭಿಸುವ ಭರವಸೆಯನ್ನು ನೀಡತ್ತದೆ. ಇದು ಸಾರ್ವಜನಿಕರ ಒಳಿತಿಗಾಗಿ ಮಾಡುವುದೇ ಹೊರತು ಯಾರ ಆಸ್ತಿಯನ್ನು ಕೂಡಾ ಕಿತ್ತುಕೊಳ್ಳಲು ಅಲ್ಲ. ಪ್ರಸ್ತುತ ಆರ್‌ಎಸ್‌ಎಸ್ ಸಿದ್ಧಾಂತದ ವಿರುದ್ಧವಾಗಿ ಕಾಂಗ್ರೆಸ್‌ನ ಹೋರಾಟ ಇದಾಗಿದೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಬಿಜೆಪಿಯಲ್ಲಿ ಆತಂಕ ಸೃಷ್ಟಿಸಿದ ಕಾಂಗ್ರೆಸ್ ಪ್ರಣಾಳಿಕೆ: ಮೆಹಬೂಬಾ ಮುಫ್ತಿ
ಅಂಬಾಲಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವರುಣ್ ಚೌಧರಿ ಮತ್ತು ಎಎಪಿಯ ಕುರುಕ್ಷೇತ್ರದ ಅಭ್ಯರ್ಥಿ ಸುಶೀಲ್ ಗುಪ್ತಾ ಈ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು. ಹರಿಯಾಣದಲ್ಲಿ ಕಾಂಗ್ರೆಸ್ ಒಟ್ಟು ಒಂಬತ್ತು ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದರೆ, ಇಂಡಿಯಾ ಒಕ್ಕೂಟದ ಆಮ್ ಆದ್ಮಿ ಪಕ್ಷ (ಎಎಪಿ) ಕುರುಕ್ಷೇತ್ರದಲ್ಲಿ ಕಣದಲ್ಲಿದೆ. ಇಲ್ಲಿ ಮೇ 25ರಂದು ಚುನಾವಣೆ ನಡೆಯಲಿದೆ.