ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ ನಿಧನದ ಬಳಿಕ ದೇಶದ ಪ್ರಧಾನ ಮಂತ್ರಿ ಜವಾಬ್ದಾರಿ ವಹಿಸಿಕೊಂಡ ರಾಜೀವ್ ಗಾಂಧಿಯವರು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದರು. ಇಂದು ನಾವೆಲ್ಲರೂ ಬಳಸುತ್ತಿರುವ ಮೊಬೈಲ್ ಫೋನ್ ಪರಿಚಯಿಸಿದ್ದಲ್ಲದೆ ಕಂಪ್ಯೂಟರ್‌ಗಳನ್ನು ಬಳಸಲು ಕಾರಣೀಭೂತರಾದರು. ಅದರಂತೆ 18 ವರ್ಷದ ಯುವಕ ಯುವತಿಯರಿಗೆ ಮತದಾನ ಹಕ್ಕನ್ನು ನೀಡಿದರು. ದೇಶಕ್ಕೆ ಅವರ ಕೊಡುಗೆ ಅಪಾರವಾದದ್ದು ಹಾಗೂ ಮಾದರಿಯಾಗಿದೆ” ಎಂದು ವಿಜಯಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಎಸ್ ಲೋಣಿ ಸ್ಮರಿಸಿದರು.
ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ 33ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದರು.
“ತಮಿಳುನಾಡಿನ ಪೆರಂಬೂರಿನಲ್ಲಿ ಎಲ್‌ಟಿಟಿಇ ಉಗ್ರರ ಕೃತ್ಯಕ್ಕೆ ಬಲಿಯಾದರು. ಅವರ ಆದರ್ಶಗಳು, ದೇಶದ ಜನತೆಯ ಬಗೆಗಿನ ಕಾಳಜಿ ಅವಿಸ್ಮರಣೀಯವಾಗಿದೆ. ಅವರೊಬ್ಬ ದೂರದೃಷ್ಟಿಯುಳ್ಳ ನಾಯಕರಾಗಿದ್ದರು” ಎಂದು ಹೇಳಿದರು.
ವಿಜಯಪುರ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಕೆ ಎಫ್ ಅಂಕಲಗಿ, ಡಿ ಎಚ್ ಕಲಾಲ, ಸಾಹೇಬಗೌಡ ಬಿರಾದಾರ ಸೇರಿದಂತೆ ಇತರರು ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ತುರ್ತಾಗಿ ಬರಪರಿಹಾರ ಒದಿಗಿಸುವಂತೆ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘ ಆಗ್ರಹ
ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ಅಬ್ದುಲ್ ಹಮೀದ ಮುಶ್ರೀಫ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ಚಾಂದಸಾಬ ಗಡಗಲಾವ, ಸುಭಾಷ್ ಕಾಲೇಬಾಗ್, ಮಹಾದೇವಿ ಗೋಕಾಕ, ಜಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಆರತಿ ಶಹಾಪೂರ, ವಿದ್ಯಾವತಿ ಅಂಕಲಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಸಂತ ಹೊನಮೊಡೆ, ಚನಬಸಪ್ಪ ನಂದರಗಿ, ತಮ್ಮಣ್ಣ ಮೇಲಿನಕೇರಿ, ಶರಣಪ್ಪ ಯಕ್ಕುಂಡಿ, ಎಂ ಜಿ ಯಂಕಂಚಿ, ದೇಸು ಚವ್ಹಾಣ, ಎಂ ಎಂ ಮುಲ್ಲಾ, ಅಫ್ತಾಬ್ ಖಾದ್ರಿ ಇನಾಮದಾರ, ಅಂಗ ಘಟಕಗಳ ಅಧ್ಯಕ್ಷರುಗಳಾದ ಅಮಿತ ಚವ್ಹಾಣ, ಲಾಲಸಾಬ ಕೊರಬು, ಫಿರೋಜ ಶೇಖ, ಮಹಾದೇವ ಜಾಧವ, ಇಲಿಯಾಸ ಸಿದ್ದಿಕಿ, ಅಬ್ದುಲ್‌ಪೀರಾ ಜಮಖಂಡಿ, ತಾಜುದ್ದೀನ ಖಲೀಫಾ, ಅಬುಬಕರ ಕೆಂಬಾವಿ, ಕಲ್ಲಪ್ಪ ಪರಶೆಟ್ಟಿ, ಮಹ್ಮದ ಮುಲ್ಲಾ, ಕಾಶಿಬಾಯಿ ಹಡಪದ, ಮಹೇಶ ಶಹಾಪೂರ, ಅಂಬಣ್ಣ ಕಲಮನಿ, ಬಾಬುಸಾಬ ಯಾಳವಾರ, ನಾಗರಾಜ ಲಂಬು, ದಿಲೀಪ ಪ್ರಭಾಕರ, ಅಶೋಕ ಕಾಂಬಳೆ ಸೇರಿದಂತೆ ಪಕ್ಷದ ಬಹುತೇಕ ಕಾರ್ಯಕರ್ತರು ಇದ್ದರು.