ಮತ್ತೊಮ್ಮೆ ಪ್ರಧಾನಿ ಆಗಲ್ಲ ಮೋದಿ; ಕಾಂಗ್ರೆಸ್‌ ಉತ್ಸಾಹಕ್ಕೆ ಇಲ್ಲಿವೆ ಕಾರಣಗಳು!

Date:

Advertisements

ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಪ್ರಧಾನಿಯಾಗುವುದಿಲ್ಲ ಎಂದು ರಾಹುಲ್ ಗಾಂಧಿ ಮತ್ತೆ-ಮತ್ತೆ ಹೇಳುತ್ತಿದ್ದಾರೆ. ಅವರ ಈ ಪುನರಾವರ್ತಿತ ಪ್ರತಿಪಾದನೆಯು ಮೋದಿ ಅಜೇಯತೆಯ ಚುನಾವಣಾ ನಿರೂಪಣೆಗೆ ಸವಾಲು ಹಾಕುವ ಪ್ರಜ್ಞಾಪೂರ್ವಕ ಪ್ರಯತ್ನದಂತೆಯೂ ಕಾಣುತ್ತಿದೆ. ಆದರೆ, ಕಾಂಗ್ರೆಸ್‌ನ ಒಳ ಲೆಕ್ಕಾಚಾರಗಳು ಬಿಜೆಪಿಗೆ ಭಾರೀ ಹಿನ್ನಡೆಯಾಗಲಿದೆ. ಎನ್‌ಡಿಎ ಬಹುಮತದ 272 ಸ್ಥಾನಗಳನ್ನು ಗಳಿಸಲು ಸಾಧ್ಯವೇ ಇಲ್ಲ ಎಂಬುದು ಕಾಂಗ್ರೆಸ್‌ಗೆ ಸ್ಪಷ್ಟವಾಗಿದೆ.

ಅನೇಕ ರಾಜ್ಯಗಳಲ್ಲಿ ಬಿಜೆಪಿ ಗಣನೀಯ ಸಂಖ್ಯೆಯಲ್ಲಿ ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎಂದು ಕಾಂಗ್ರೆಸ್ ತಂತ್ರಜ್ಞರು ನಂಬಿದ್ದಾರೆ. ಆದರೆ, ಅದರ ಲಾಭವು ಏನಾಗಲಿದೆ ಎಂಬುದರ ನಿರೀಕ್ಷೆಯಲ್ಲಿ ಪಕ್ಷವಿದೆ. ಮಹಾರಾಷ್ಟ್ರ, ಬಿಹಾರ, ಉತ್ತರ ಪ್ರದೇಶ, ಕರ್ನಾಟಕ, ರಾಜಸ್ಥಾನ ಹಾಗೂ ಹರಿಯಾಣದಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಭೀಕರವಾಗಿ ಸೋಲುತ್ತವೆ. ಈ ರಾಜ್ಯಗಳಲ್ಲಿ 2019ರಲ್ಲಿ ಗೆದ್ದಿದ್ದ ಸ್ಥಾನಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಸ್ಥಾನಗಳನ್ನು ಬಿಜೆಪಿ ಕಳೆದುಕೊಳ್ಳುವ ನಿರೀಕ್ಷೆಯಿದೆ. ಜೊತೆಗೆ, ದೆಹಲಿ, ಗುಜರಾತ್, ಹಿಮಾಚಲ, ಜಾರ್ಖಂಡ್ ಮತ್ತು ಅಸ್ಸಾಂನಲ್ಲಿಯೂ ಬಿಜೆಪಿ ನಷ್ಟ ಅನುಭವಿಸುತ್ತದೆ ಎಂಬುದನ್ನು ಕಾಂಗ್ರೆಸ್‌ ಗ್ರಹಿಸಿದೆ.

ಕುತೂಹಲಕಾರಿಯಾಗಿ, ತೆಲಂಗಾಣದಲ್ಲಿ ಬಿಜೆಪಿ ತನ್ನ ಸಂಖ್ಯೆಯನ್ನು ಎರಡು ಸ್ಥಾನಗಳಿಗೆ ಏರಿಸಿಕೊಳ್ಳಬಹುದು. ಒಡಿಶಾದಲ್ಲಿ ಒಂದು ಸ್ಥಾನವನ್ನು ಗಳಿಸಬಹುದು. ತಮಿಳುನಾಡು ಮತ್ತು ಕೇರಳದಲ್ಲಿ ಬಿಜೆಪಿ ಪ್ರಭಾವದ ಬಗ್ಗೆ ಕಾಂಗ್ರೆಸ್‌ಗೆ ಯಾವುದೇ ಜಿಜ್ಞಾಸೆಯೂ ಇಲ್ಲ.

Advertisements

“ಬಂಗಾಳದಲ್ಲಿ ಬಿಜೆಪಿಗೆ ಲಾಭವಾಗಲಿದೆ ಎಂದು ನಾವು ನಂಬುವುದಿಲ್ಲ. ಅವರು 2019ರಲ್ಲಿ 18 ಸ್ಥಾನಗಳನ್ನು ಗೆದ್ದಿದ್ದಾರೆ. ಈ ಬಾರಿ ಅವರು 14-15ಕ್ಕೆ ಇಳಿಯಬಹುದು. ಒಡಿಶಾದಲ್ಲಿ ಬಿಜೆಪಿ 2019ರಲ್ಲಿ ಪಡೆದಿದ್ದಕ್ಕಿಂತ ಒಂದು ಅಥವಾ ಎರಡು ಸ್ಥಾನಗಳನ್ನು ಹೆಚ್ಚು ಪಡೆಯಬಹುದಾದರೂ, ಬಿಜೆಡಿ ಮತ್ತು ಬಿಜೆಪಿ ನಡುವೆ ಬಿರುಕು ಹೆಚ್ಚಾಗಿದೆ. ಎರಡೂ ಪಕ್ಷಗಳ ಕಾರ್ಯಕರ್ತರು ಮತ್ತು ನಾಯಕರ ನಡುವಿನ ತಿಕ್ಕಾಟವಿದೆ. ಒಡಿಶಾ ಮುಖ್ಯಮಂತ್ರಿ ಪಟ್ನಾಯಕ್ ತಮ್ಮ ಪ್ರಾಬಲ್ಯವನ್ನು ಹೆಚ್ಚು ಸ್ಥಾನಗಳ ಮೂಲಕ ಮೋದಿಗೆ ತೋರಿಸಲು ಪಟ್ಟುಹಿಡಿದಿದ್ದಾರೆ. ಇದು ಬಿಜೆಪಿಗೆ ಸವಾಲಾಗಿದೆ” ಎಂದು ಕಾಂಗ್ರೆಸ್‌ ನಾಯಕರು ಹೇಳುತ್ತಾರೆ.

ಒಟ್ಟಾರೆ ದೇಶಾದ್ಯಂತ ಬಿಜೆಪಿಗೆ 5 ಅಥವಾ 6 ಸ್ಥಾನಗಳ ಲಾಭವಾಗಬಹುದು. ಆದರೆ, ನಷ್ಟವು 60-70 ಅಥವಾ ಅದಕ್ಕಿಂತ ಹೆಚ್ಚಿನದ್ದು ಎಂದು ಕಾಂಗ್ರೆಸ್‌ ನಂಬಿದೆ.

ಅದಕ್ಕಾಗಿಯೇ, ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಮೋದಿಗೆ ಬಹುಮತ ಬರುವುದಿಲ್ಲ ಎಂದು ಒತ್ತಿ ಹೇಳುತ್ತಿದ್ದಾರೆ. ಕೊನೆಯ ಹಂತದ ಮತದಾನದ ಜೊತೆಗೆ ಮೋದಿ ಪರ್ವವೂ ಮುಗಿಯುತ್ತದೆ. ಕೊನೆಯ ಸುತ್ತಿನ ಮತದಾನ ಮುಗಿದ ನಂತರ ಬಿಜೆಪಿ ಪರಿಸ್ಥಿತಿ ತುಂಬಾ ಕೆಟ್ಟದಾಗಿರುತ್ತದೆ ಎಂದು ಕಾಂಗ್ರೆಸ್ಸಿಗರು ಉತ್ಸಾಹ ತೋರುತ್ತಿದ್ದಾರೆ.

ಬಿಜೆಪಿಯ ಭದ್ರಕೋಟೆಗಳೇ ಆಗಿದ್ದ ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ಮತದಾರರು ಬಿಜೆಪಿ ವಿರುದ್ಧ ಸಿಟ್ಟಾಗಿದ್ದಾರೆ. ಮತದಾರರು ತಮ್ಮ ಬೆಂಬಲವನ್ನು ಬದಲಿಸಿದ್ದಾರೆ. ಬಿಜೆಪಿ ವಿರುದ್ಧ ಚುನಾವಣೆಯಲ್ಲಿ ಹೋರಾಡುತ್ತಿದ್ದಾರೆ ಎಂಬುದನ್ನು ಈಗಾಗಲೇ ನಡೆದಿರುವ ಮತದಾನಗಳು ಸೂಚಿಸಿವೆ. ಮಹಾರಾಷ್ಟ್ರದಲ್ಲಿ ಸಂಘಟನೆಗಳು, ಎನ್‌ಜಿಒಗಳು ಮತ್ತು ವಿದ್ಯಾರ್ಥಿಗಳು ಮೋದಿಯವರ ರಾಜಕೀಯ ಮತ್ತು ಭರವಸೆಗಳ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಕೆಲವೆಡೆ, ಮೋದಿ ವಿರೋಧಿ ಅಲೆ ಬಹಿರಂಗವಾಗಿ ಕಾಣಿಸುತ್ತಿದೆ.

ಜೊತೆಗೆ, ಶಿವಸೇನೆ ಮತ್ತು ಎನ್‌ಸಿಪಿಯನ್ನು ಬಿಜೆಪಿ ಒಡೆದು ಇಬ್ಬಾಗ ಮಾಡಿದೆ. ಬಿಜೆಪಿ ನಡೆಯಿಂದ ಉದ್ಧವ್ ಠಾಕ್ರೆ ಅವರ ಬಗ್ಗೆ ಮಹಾರಾಷ್ಟ್ರದಲ್ಲಿ ಸಹಾನುಭೂತಿ ಹೆಚ್ಚಾಗಿದೆ. ಇಬ್ಬರು ಗುಜರಾತಿ ನಾಯಕರಾದ ಮೋದಿ ಮತ್ತು ಅಮಿತ್ ಶಾ ಅವರ ಮಹಾರಾಷ್ಟ್ರ ವಿರೋಧಿ ನಿಲುವು ಜನರನ್ನು ಕೆರಳಿಸಿದೆ. ಕಾಂಗ್ರೆಸ್, ಶರದ್ ಪವಾರ್ ಮತ್ತು ಶಿವಸೇನೆಯ ‘ಮಹಾ ವಿಕಾಸ್ ಅಘಾಡಿ’ ಬಲವು ಬಿಜೆಪಿಗೆ ಬೃಹತ್ ಸಾವಾಲನ್ನು ಒಡ್ಡಿದ್ದು, ಕೇಸರಿ ಪಡೆ ಆತಂಕದಲ್ಲಿದೆ.

ಮಹಾರಾಷ್ಟ್ರದ 48 ಸ್ಥಾನಗಳಲ್ಲಿ 2019ರಲ್ಲಿ 42 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ, ಈ ಬಾರಿ ಭಾರೀ ನಷ್ಟ ಅನುಭವಿಸಲಿದೆ. ಪ್ರಸ್ತುತ ಮಹಾ ವಿಕಾಸ್ ಅಘಾಡಿ ಸುಮಾರು 30 ಸ್ಥಾನಗಳಿಗೂ ಹೆಚ್ಚನ್ನು ಗೆಲ್ಲುತ್ತದೆ ಎಂಬ ವಿಶ್ವಾಸ ಕೈ ಪಡೆಯಲ್ಲಿದೆ.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಸಾಧಾರಣ ನಿರೀಕ್ಷೆಯೊಂದಿಗೆ ಚುನಾವಣಾ ಕಣಕ್ಕಿಳಿಯಿತು. ಅಲ್ಲಿನ 80 ಸ್ಥಾನಗಳಲ್ಲಿ 70ನ್ನು ಗೆಲ್ಲುತ್ತೇವೆ ಎನ್ನುವ ಬಿಜೆಪಿಯನ್ನು ತಡೆಯುವುದು ಕಾಂಗ್ರೆಸ್‌ನ ಉದ್ದೇಶವಾಗಿತ್ತು. ಇದೀಗ ‘ಇಂಡಿಯಾ’ ಬಣ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಹಾಕಿಕೊಂಡಿದೆ. ಬೆಲೆ ಏರಿಕೆ, ನಿರುದ್ಯೋಗ ಮತ್ತು ಅಗ್ನಿವೀರ್ ಸಮಸ್ಯೆ ಉತ್ತರ ಪ್ರದೇಶದ ಪ್ರಮುಖ ಚುನಾವಣಾ ವಿಷಯಗಳಾಗಿ ಹೊರಹೊಮ್ಮಿವೆ. ರಾಮ ಮಂದಿರ ಬಿಜೆಪಿಯ ಕೈಹಿಡಿದಿಲ್ಲ. ಮಯಾವತಿ ಅವರ ನಿಷ್ಕ್ರಿಯತೆಯಿಂದ ಅವರು ಬಿಜೆಪಿ ವಿರುದ್ಧ ಹೋರಾಡುತ್ತಿಲ್ಲ ಎಂಬುದು ದಲಿತರು ಮತ್ತು ಹಿಂದುಳಿದವರಿಗೆ ಮನವರಿಕೆಯಾಗಿದೆ. ಈ ಸಮುದಾಯಗಳು ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ ಎಡೆಗೆ ಒಲವು ತೋರುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ 30ರಿಂದ 40 ಸ್ಥಾನಗಳನ್ನು ‘ಇಂಡಿಯಾ’ ಮೈತ್ರಿ ಗೆಲ್ಲಬಹುದು ಎಂಬ ವಿಶ್ವಾಸ ಕಾಂಗ್ರೆಸ್‌ನಲ್ಲಿದೆ.

ಅಗ್ನಿವೀರ್ ವೈಫಲ್ಯವು ರಾಜಸ್ಥಾನದಲ್ಲೂ ಬಿಜೆಪಿ ವಿರುದ್ಧ ಯುವಜನರ ಕೋಪಕ್ಕೆ ಕಾರಣವಾಗಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್‌ 6ರಿಂದ 10 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಹೊಂದಿದೆ.

ಕಾಂಗ್ರೆಸ್‌ನ ಆಪ್ತ ಮೂಲಗಳ ಪ್ರಕಾರ, ಕಾಂಗ್ರೆಸ್‌ ಸ್ವತಃ 115 ಸ್ಥಾನಗಳನ್ನು ಗೆಲ್ಲಬಹುದು. ಈ ಸಂಖ್ಯೆಯು ಇಂಡಿಯಾ ಮೈತ್ರಿಕೂಟವು ಒಟ್ಟು 250 ಸ್ಥಾನಗಳನ್ನು ತಲುಪಲು ನೆರವಾಗುತ್ತದೆ. ಈ ಸಂಖ್ಯೆ ಸರ್ಕಾರ ರಚನೆಗೆ ಸಾಧ್ಯವಿದ್ದರೂ, ತಟಸ್ಥ ಪಕ್ಷಗಳು ಮತ್ತು ಇತ್ತೀಚೆಗೆ ಬಿಜೆಪಿ ವಿರುದ್ಧ ಸಿಡಿದಿರುವ ಪ್ರಾದೇಶಕ ಶಕ್ತಿಗಳು ‘ಇಂಡಿಯಾ’ ಕೂಟಕ್ಕೆ ಹೆಚ್ಚುವರಿ ಬೆಂಬಲ ನೀಡುವ ಭರವಸೆಯನ್ನು ಕಾಂಗ್ರೆಸ್‌ ಹೊಂದಿದೆ.

ಈ ವರದಿ ಓದಿದ್ದೀರಾ?: ಬಿಜೆಪಿ ಸೋತರೆ – ಶಾಂತಿಯುತವಾಗಿ ಅಧಿಕಾರ ಹಸ್ತಾಂತರಿಸುವರೇ ಮೋದಿ? ಜೂನ್ 4ರ ನಂತರ ಏನಾಗಬಹುದು?!

ಬಿಜೆಪಿ 200 ಸ್ಥಾನಗಳಿಗಿಂತ ಕನಿಷ್ಠ ಸ್ಥಾನಗಳಿಗೆ ಸೀಮಿತವಾಗಬೇಕು. ಅವರು ಸುಮಾರು 230 ಸ್ಥಾನಗಳನ್ನು ಗೆದ್ದರೆ, ಸರ್ಕಾರ ರಚಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ, ಸದ್ಯಕ್ಕೆ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಈಗಿರುವ ಲೆಕ್ಕಾಚಾರಕ್ಕಿಂತ ಬಿಜೆಪಿ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ. ಅವರು ಇನ್ನೂ, ಹೆಚ್ಚು ಸ್ಥಾನಗಳನ್ನು ಕಳೆದುಕೊಳ್ಳಬಹುದು.

ಈ ಎಲ್ಲ ಲೆಕ್ಕಾಚಾರಗಳಿಂದ, ಕಾಂಗ್ರೆಸ್ಸಿಗರು ಮೋದಿ ಅವರನ್ನು ‘ಹೊರಹೋಗುವ ಪ್ರಧಾನಿ’ ಎಂದು ಈಗಾಗಲೇ ಬಣ್ಣಿಸಲು ಆರಂಭಿಸಿದ್ದಾರೆ. ಈ ಲೆಕ್ಕಾಚಾರಗಳು ಕೊಂಚ ಏರುಪೇರಾದರೂ ಆಶ್ಚರ್ಯವಿಲ್ಲ. ಆದರೆ, ‘ಚಾರ್‌ ಸವ್ ಪಾರ್’ ಎಂಬ ಘೋಷಣೆ ಕೂಗುತ್ತಾ 400 ಸ್ಥಾನ ಗೆಲ್ಲುತ್ತೇವೆ ಎನ್ನುತ್ತಿದ್ದ ಬಿಜೆಪಿ, ಈಗ 400 ಸಂಖ್ಯೆಯಲ್ಲಿ ಮೌನವಾಗಿದೆ. ಅದು, ದ್ವೇಷ ಭಾಷಣಕ್ಕೆ ಸೀಮಿತವಾಗಿದೆ. ಪ್ರಧಾನಿ ಮೋದಿ ಅವರ ದ್ವೇಷದ ಮಾತುಗಳು ಹತಾಶೆಯನ್ನು ಸೂಚಿಸುತ್ತಿವೆ. ಬಿಜೆಪಿಯ ಹತಾಶೆಯು ವಿಪಕ್ಷಗಳ ಆತ್ಮಸ್ಥೈರ್ಯವನ್ನು ಗಟ್ಟಿಗೊಳಿಸುತ್ತಿದೆ.

ಜೂನ್ 4ರ ಫಲಿತಾಂಶದಲ್ಲಿ ಬಿಜೆಪಿ ಸೋಲಬಹುದು. ಬಿಜೆಪಿ ಸೋತರೂ, ಮುಂದೇನಾಗಲಿದೆ ಎಂಬ ಬಗ್ಗೆ ಹಲವಾರು ರಾಜಕೀಯ ಮತ್ತು ಸಾಮಾಜಿಕ ಚಿಂತಕರಲ್ಲಿ ಆತಂಕವಿದೆ. ಅಂತಿಮವಾಗಿ ದೇಶದ ರಾಜಕೀಯ ಪರಿಸ್ಥಿತಿ ಏನಾಗಲಿದೆ ಎಂಬುದನ್ನು ಶೀಘ್ರವೇ ಉತ್ತರ ಸಿಗಲಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

Download Eedina App Android / iOS

X