ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ಬಸ್ತಿಯಲ್ಲಿ ಮಾತನಾಡಿ, ಪ್ರತಿಪಕ್ಷಗಳ ವಿರುದ್ಧದ ತಮ್ಮ ಹೋರಾಟವನ್ನು ಮುಂದುವರಿಸಲಾಗುವುದು ‘ವಿಕಸಿತ್ ಉತ್ತರ ಪ್ರದೇಶ’ಕ್ಕಾಗಿ ಹಾಗೂ ರಾಷ್ಟ್ರದ ಸುಧಾರಣೆಗಾಗಿ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಪ್ರಧಾನಿ ಮತದಾರರನ್ನು ಒತ್ತಾಯಿಸಿದರು.
“ಐದು ಹಂತಗಳ ಚುನಾವಣೆಗಳು ಮೋದಿ ಸರ್ಕಾರದ ಮೂರನೇ ಅವಧಿಗೆ ಹಾದಿಯನ್ನು ಗಟ್ಟಿಗೊಳಿಸಿವೆ. ಈಗ, ಎಸ್‌ಪಿ ಅಥವಾ ಕಾಂಗ್ರೆಸ್‌ಗೆ ಹಾಕಿದ ಪ್ರತಿಯೊಂದು ಮತವೂ ವ್ಯರ್ಥವಾಗುತ್ತದೆ. ಏಕೆಂದರೆ ಅವರು ಸರ್ಕಾರ ರಚಿಸುವುದಿಲ್ಲ. ಹಾಗಾಗಿ ನಿಮ್ಮ ಮತ ದೇಶವನ್ನು ಮುನ್ನಡೆಸುವ ಪಕ್ಷಕ್ಕೆ ಹೋಗಬೇಕು. ಮೋದಿ ಸರ್ಕಾರವು ವಿಕಸಿತ್ ಮತ್ತು ಆತ್ಮನಿರ್ಭರ ಭಾರತವನ್ನು ಬೆಂಬಲಿಸುತ್ತದೆ” ಎಂದು ಸುಳ್ಳಿನ ಸುರಿಮಳೆ ಸುರಿಸಿದ್ದಾರೆ.(20:8-22:00)(26:47-23)
ಕಳೆದ ಹತ್ತು ವರ್ಷದಿಂದಲೂ ಮೋದಿ ಕೆಲವು ಘೋಷಣೆಗಳನ್ನು ಹೇಳುತ್ತಿದ್ದಾರೆಯೇ ಹೊರತು ಘೋಷಣೆಗೆ ತಕ್ಕ ಯಾವುದೇ ಅಭಿವೃದ್ಧಿಗಳೂ ಕೂಡಾ ಈಡೇರಿಲ್ಲ. ನಮ್ಮ ಇಂದಿನ ಪ್ರಧಾನಿಯ ಹತ್ತು ವರ್ಷಗಳ ಆಳ್ವಿಕೆ ಜನರಲ್ಲಿ ಜಿಗುಪ್ಸೆ ತಂದಿದ್ದು, ಒಡೆದಾಳುವ ನೀತಯನ್ನು ಅನುಸರಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೂ ಕೂಡಾ ಮತ್ತೆ ಮತ್ತೆ ವಿಕಸಿತ್ ಭಾರತದ ಘೋಷಣೆಯನ್ನು ಮೋದಿ ನಿಲ್ಲಿಸುವಂತೆ ಕಾಣುತ್ತಿಲ್ಲ.
“ಇಂದು, ಜಾಗತಿಕ ವೇದಿಕೆಯಲ್ಲಿ ಭಾರತದ ಸ್ಥಾನಮಾನ ಮತ್ತು ಗೌರವವು ಗಮನಾರ್ಹವಾಗಿ ಹೆಚ್ಚಾಗಿದೆ. ಭಾರತ ಮಾತನಾಡುವಾಗ, ಜಗತ್ತು ಕೇಳುತ್ತದೆ; ಭಾರತ ನಿರ್ಧರಿಸಿದಾಗ, ಜಗತ್ತು ಅನುಸರಿಸುತ್ತದೆ. ಒಂದು ಕಾಲದಲ್ಲಿ ಭಯೋತ್ಪಾದಕರಿಗೆ ಆಶ್ರಯ ನೀಡಿದ್ದ ಮತ್ತು ನಮಗೆ ಬೆದರಿಕೆ ಹಾಕಿದ್ದ ರಾಷ್ಟ್ರವು ಈಗ ಆಹಾರ ಧಾನ್ಯಗಳಿಗಾಗಿಯೂ ಹೆಣಗಾಡುತ್ತಿದೆ” ಎಂದು ದ್ವೇಷ ಹುಟ್ಟಿಸುವಂತೆ ಹುಸಿಯಾಡುತ್ತಿದ್ದಾರೆ ಮೋದಿ.(25:21-25:50)
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನದ ಕುರಿತು ಯುನೈಟೆಡ್ ಸ್ಟೇಟ್ಸ್ ಮತ್ತು ಜರ್ಮನಿ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ನಮ್ಮ ಪ್ರಧಾನಿ ನಡೆಯನ್ನು ಟೀಕಿಸಿದ್ದವು. ಹೀಗಿದ್ದರೂ ಕೂಡ ಮೋದಿ ಭಾರತದ ಕಡೆ ಜಗತ್ತಿ ತಿರುಗಿ ನೋಡುತ್ತದೆ. ಭಾರತದ ನಿರ್ಧಾರವನ್ನು ಜಗತ್ತು ಅನುಸರಿಸುತ್ತದೆ ಎಂದು ಲಜ್ಜೆಯಿಲ್ಲದೆ ಹೇಳಿದ್ದಾರೆ.
ಇನ್ನು ಪಾಕಿಸ್ತಾನವನ್ನು ಕುರಿತು ಮೋದಿ ನೀಡಿರುವ ಹೇಳಿಕೆಗೆ ವಿರುದ್ಧವಾಗಿ ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಮಾತನಾಡಿ, “ಈಗ ಪಾಕಿಸ್ತಾನದೊಂದಿಗೆ ಭೂಮಾರ್ಗದಲ್ಲಿ ವ್ಯಾಪಾರ ನಡೆಯುತ್ತಿಲ್ಲ. ಜವಾಹರಲಾಲ್ ನೆಹರು ಪೋರ್ಟ್ ಟ್ರಸ್ಟ್, ಇನ್‌ಲ್ಯಾಂಡ್ ಕಂಟೈನರ್ ಡಿಪೋ, ತುಘಲಕಾಬಾದ್, ಮುಂದ್ರಾ ಎಸ್‌ಇಜೆಡ್, ಏರ್ ಕಾರ್ಗೋ ಕಾಂಪ್ಲೆಕ್ಸ್ ಮುಂಬೈ ಮತ್ತು ಏರ್ ಕಾರ್ಗೋ ಕಾಂಪ್ಲೆಕ್ಸ್ ಹೈದರಾಬಾದ್ ಮೂಲಕ ಪಾಕಿಸ್ತಾನದೊಂದಿಗೆ ಸಮುದ್ರ ಮತ್ತು ವಾಯು ಮಾರ್ಗಗಳ ಮೂಲಕ ವ್ಯಾಪಾರವನ್ನು ಮಾಡಲಾಗುತ್ತಿದೆ” ಎಂದು ಹೇಳಿದ್ದಾರೆ.
“ನಮ್ಮ ಸಹೋದರಿಯರು ಮತ್ತು ಹೆಣ್ಣು ಮಕ್ಕಳು ತಮ್ಮ ಮನೆಗಳನ್ನು ಬಿಡಲು ಹೆದರುತ್ತಿದ್ದರು. ಮಾಫಿಯಾ ಸ್ವಾಧೀನದಿಂದಾಗಿ ಜನರು ಭೂಮಿಯನ್ನು ಖರೀದಿಸಲು ಹೆದರುತ್ತಿದ್ದರು. ಗೂಂಡಾಗಳು ಮತ್ತು ಮಾಫಿಯಾಗಳನ್ನು ಎಸ್‌ಪಿ ಹೇಗೆ ಸ್ವಾಗತಿಸಿತು ಎಂಬುದು ನೆನಪಿದೆಯೇ? ಗಲಭೆಕೋರರಿಗೆ ವಿಶೇಷ ಚಿಕಿತ್ಸೆ ನೀಡಲಾಯಿತು ಮತ್ತು ಭಯೋತ್ಪಾದಕರನ್ನು ಜೈಲಿನಿಂದ ಬಿಡುಗಡೆ ಮಾಡಲು ಆದೇಶಗಳನ್ನು ಹೊರಡಿಸಲಾಯಿತು” ಎಂದು ಮೋದಿ ಮತ್ತಷ್ಟು ಸುಳ್ಳುಗಳನ್ನು ಹರಡುತ್ತಿದ್ದಾರೆ.(37:57-39:4)
ಅತ್ಯಾಚಾರ ಪ್ರಕರಣದಲ್ಲಿ ಯಾವುದೇ ಆರೋಪಿಯನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಬಾರದು ಎಂಬ ಕೇಂದ್ರದ ನಿಯಮ ಇದ್ದರೂ, ಗುಜರಾತ್ ಸರ್ಕಾರ ಮಾತ್ರ ಬಿಲ್ಕಿಸ್ ಬಾನೊ ಪ್ರಕರಣದ 11 ಮಂದಿ ಕೈದಿಗಳನ್ನು ಬಿಡುಗಡೆ ಮಾಡಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಅಧಿಕಾರಿಗಳು, “ಬಿಲ್ಕಿಸ್ ಬಾನೊ ಪ್ರಕರಣದ ಆರೋಪಿಗಳಿಗೆ ಕೇಂದ್ರದ ನಿಯಮ ಅನ್ವಯವಾಗುವುದಿಲ್ಲ. ಸುಪ್ರೀಂಕೋರ್ಟ್ ನಿಯಮಾವಳಿ ಅನುಸರಿಸಿ ಬಿಡುಗಡೆ ಮಾಡಲಾಗಿದೆ” ಎಂದು ಉದ್ಧಟತನ ಮೆರೆದಿದ್ದರು. ಅಲ್ಲದೆ ಆರೋಪಿಗಳ ಬೆಂಬಲಿಗರು ಸಿಹಿ ಹಂಚಿ, ಹಾರ ತುರಾಯಿಗಳನ್ನು ಹಾಕುವ ಮೂಲಕ ಸಂಭ್ರಮಿಸಿದ್ದರು.
“ಸ್ವಾತಂತ್ರ್ಯ ದಿನಾಚರಣೆಯ ತಮ್ಮ ಭಾಷಣದಲ್ಲಿ ‘ಮಹಿಳಾ ಶಕ್ತಿ’ ಬಗ್ಗೆ ಮೋದಿ ಅವರು ಭಾಷಣ ಮಾಡಿದ ಕೆಲವೇ ಗಂಟೆಗಳಲ್ಲಿ ಅತ್ಯಾಚಾರಿಗಳ ಬಿಡುಗಡೆಯಾಗಿದೆ. ಇದು ಬಿಜೆಪಿ ಅಡಿಯಲ್ಲಿನ ನವ ಭಾರತದ ನೈಜ ಮುಖ” ಎಂದು ವಿರೋಧ ಪಕ್ಷಗಳು ಟೀಕಿಸಿದ್ದವು.
ಈ ಸುದ್ದಿ ಓದಿದ್ದೀರಾ? ಮೋದಿ ಸುಳ್ಳುಗಳು | ಎಸ್‌ಸಿ-ಎಸ್‌ಟಿ, ಒಬಿಸಿಗಳಿಗೆ ಮೋಸವಾಗಿರುವುದು ಕಾಂಗ್ರೆಸ್‌ನಿಂದಲೋ? ಮೋದಿ ಆಡಳಿತದಲ್ಲೋ?
ಮೇಲಿನ ಎಲ್ಲ ಅಂಶಗಳನ್ನು ಗಮನಿಸಿದರೆ ಮೋದಿ ಮತ್ತವರ ಪಕ್ಷದಿಂದ ನಡೆದಿರುವುದು ಕಂಡುಬರುತ್ತದೆ. ಆದರೆ, ನಮ್ಮ ಪ್ರಧಾನಿ ತಾವು ಮಾಡುವಂತಹ ತಪ್ಪುಗಳನ್ನು ವಿಪಕ್ಷಗಳ ವಿರುದ್ಧ ಆರೋಪಿಸುತ್ತಿದ್ದಾರಾ? ವೋಟ್ ಬ್ಯಾಂಕ್‌ಗಾಗಿ ಮೋದಿಜಿ ತಮ್ಮ ಸುಳ್ಳು ಭಾಷಣಗಳ ಮೂಲಕ ಮತದಾರರನ್ನು ವಿಪಕ್ಷಗಳ ವಿರುದ್ಧ ಎತ್ತಿಕಟ್ಟುತ್ತಿದ್ದಾರೆಯೇ?