ಲೋಕಸಭೆ ಚುನಾವಣೆಯಲ್ಲಿ ಏಕೆ ಮತ ಹಾಕಿಲ್ಲ ಮತ್ತು ಚುನಾವಣಾ ಪ್ರಚಾರದಲ್ಲಿಯೂ ಭಾಗಿಯಾಗಿಲ್ಲ ಎಂದು ಮಾಜಿ ಕೇಂದ್ರ ಸಚಿವ ಮತ್ತು ಸಂಸದ ಜಯಂತ್ ಸಿನ್ಹಾ ಅವರಿಗೆ ಬಿಜೆಪಿಯು ಶೋಕಾಸ್ ನೋಟಿಸ್ ಕಳುಹಿಸಿದ್ದು, ಈ ನೋಟಿಸ್‌ಗೆ ಜಯಂತ್ ಸಿನ್ಹಾ ಅವರು ಪ್ರತಿಕ್ರಿಯಿಸಿದ್ದಾರೆ.
“ನನಗೆ ಬಿಜೆಪಿಯ ಶೋಕಾಸ್ ನೋಟಿಸ್ ಬಂದಿದ್ದು ಆಶ್ಚರ್ಯವಾಗಿದೆ” ಎಂದು ಹೇಳಿದ್ದಾರೆ. ಬಿಜೆಪಿಯ ಜಾರ್ಖಂಡ್ ಪ್ರಧಾನ ಕಾರ್ಯದರ್ಶಿ ಆದಿತ್ಯ ಸಾಹು ಈ ನೋಟಿಸ್ ನೀಡಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿನ್ಹಾ, “ನಾನು ‘ವೈಯಕ್ತಿಕ ಬದ್ಧತೆಗಳಿಗಾಗಿ’ ವಿದೇಶದಲ್ಲಿದ್ದ ಕಾರಣ ಅಂಚೆ ಮತಪತ್ರ ಪ್ರಕ್ರಿಯೆಯ ಮೂಲಕ ಮತ ಚಲಾಯಿಸಿದ್ದೇನೆ” ಎಂದು ತಿಳಿಸಿದ್ದಾರೆ.
My response to Shri Aditya Sahu ji’s letter sent on May 20, 2024 pic.twitter.com/WfGIIyTvdz
— Jayant Sinha (Modi Ka Parivar) (@jayantsinha) May 22, 2024
ಜಾರ್ಖಂಡ್‌ನ ಹಜಾರಿಬಾಗ್ ಕ್ಷೇತ್ರದಿಂದ ಹಾಲಿ ಸಂಸದರಾಗಿರುವ ಜಯಂತ್ ಸಿನ್ಹಾ ಸಾಹು ಅವರಿಗೆ ಬರೆದ ಎರಡು ಪುಟಗಳ ಪತ್ರದಲ್ಲಿ “ನಿಮ್ಮ ಪತ್ರವನ್ನು ನೋಡಿ ಮತ್ತು ನೀವು ಅದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವುದನ್ನು ಕಂಡು ನನಗೆ ತುಂಬಾ ಆಶ್ಚರ್ಯವಾಯಿತು” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಮತದಾನ ಮಾಡದ, ಚುನಾವಣಾ ಪ್ರಚಾರದಲ್ಲಿ ಭಾಗಿಯಾಗದ ಸಂಸದ ಜಯಂತ್ ಸಿನ್ಹಾಗೆ ಬಿಜೆಪಿ ಶೋಕಾಸ್ ನೋಟಿಸ್
ಜಾರ್ಖಂಡ್‌ನ ಹಜಾರಿಬಾಗ್ ಕ್ಷೇತ್ರದಿಂದ ಮನೀಶ್ ಜೈಸ್ವಾಲ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದಾಗಿನಿಂದ 61 ವರ್ಷದ ಜಯಂತ್ ಸಿನ್ಹಾ ಸಂಘಟನಾ ಕೆಲಸ ಮತ್ತು ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸಿನ್ಹಾಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು. ಮಾರ್ಚ್‌ನಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಇಚ್ಛೆ ವ್ಯಕ್ತಪಡಿಸಿದ ಸಿನ್ಹಾ ಹಾಲಿ ಸಂಸದರಾಗಿದ್ದಾರೆ.
“ಹಜಾರಿಬಾಗ್ ಲೋಕಸಭಾ ಕ್ಷೇತ್ರದಿಂದ ಮನೀಶ್ ಜೈಸ್ವಾಲ್ ಅವರನ್ನು ಅಭ್ಯರ್ಥಿಯನ್ನಾಗಿ ಪಕ್ಷ ಘೋಷಿಸಿದಾಗಿನಿಂದಲೂ ನೀವು ಸಂಘಟನಾ ಕಾರ್ಯ ಮತ್ತು ಚುನಾವಣಾ ಪ್ರಚಾರದಲ್ಲಿ ಆಸಕ್ತಿ ವಹಿಸುತ್ತಿಲ್ಲ. ನಿಮ್ಮ ಮತ ಚಲಾಯಿಸುವ ಹಕ್ಕನ್ನೂ ನೀವು ಚಲಾಯಿಸಿಲ್ಲ. ನಿಮ್ಮ ನಡವಳಿಕೆಯಿಂದಾಗಿ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟಾಗಿದೆ” ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆದಿತ್ಯ ಸಾಹು ನೋಟಿಸ್‌ನಲ್ಲಿ ತಿಳಿಸಿದ್ದಾರೆ.
Jharkhand | BJP has issued a show-cause notice to former Union Minister and MP Jayant Sinha and asked him to reply within 2 days
“You are not taking any interest in organisational work and election campaigning ever since the party declared Manish Jaiswal as the candidate from… pic.twitter.com/sYkoELZo2g
— ANI (@ANI) May 21, 2024
ಈ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿನ್ಹಾ, “ಯಾವುದೇ ಪಕ್ಷದ ಕಾರ್ಯಕ್ರಮಗಳು, ಪ್ರಚಾರಕ್ಕೆ, ಸಾಂಸ್ಥಿಕ ಸಭೆಗಳಿಗೆ ನನಗೆ ಆಹ್ವಾನ ನೀಡಿಲ್ಲ” ಎಂದಿದ್ದಾರೆ.
“ಪಕ್ಷವು 2024ರ ಲೋಕಸಭಾ ಚುನಾವಣೆಗೆ ಮನೀಶ್ ಜೈಸ್ವಾಲ್ ಅವರನ್ನು ತನ್ನ ಅಭ್ಯರ್ಥಿ ಎಂದು ಘೋಷಿಸಿತು. ಮಾರ್ಚ್ 8ರಂದು ನಾನು ಜೈಸ್ವಾಲ್ ಅವರಿಗೆ ಅಭಿನಂದನೆ ತಿಳಿಸಿದ್ದೇನೆ. ಪಕ್ಷದ ಆಯ್ಕೆಯನ್ನು ನಾನು ಸ್ಪಷ್ಟವಾಗಿ ಒಪ್ಪಿಕೊಂಡಿದ್ದೇನೆ. ಇದು ಸಾಮಾಜಿಕ ಮಾಧ್ಯಮದಲ್ಲಿಯೂ ದಾಖಲಾಗಿದೆ. ನನ್ನ ಅಚಲ ಬೆಂಬಲವನ್ನೂ ನಾನು ಪ್ರದರ್ಶಿಸಿದ್ದೇನೆ” ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಗೌತಮ್ ಗಂಭೀರ್ ನಂತರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದ ಮತ್ತೊಬ್ಬ ಬಿಜೆಪಿ ಸಂಸದ ಜಯಂತ್ ಸಿನ್ಹಾ
“ನಾನು ಯಾವುದೇ ಚುನಾವಣಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂದು ಬಯಸಿದರೆ ನೀವು ಖಂಡಿತವಾಗಿಯೂ ನನ್ನನ್ನು ಸಂಪರ್ಕಿಸಬಹುದಿತ್ತು. ಆದರೆ, ಜಾರ್ಖಂಡ್‌ನ ಒಬ್ಬ ಪಕ್ಷದ ಹಿರಿಯ ಅಧಿಕಾರಿ ಅಥವಾ ಸಂಸದ/ಶಾಸಕರು ನನ್ನನ್ನು ಸಂಪರ್ಕಿಸಲಿಲ್ಲ. ಯಾವುದೇ ಪಕ್ಷದ ಕಾರ್ಯಕ್ರಮಗಳಿಗೆ, ಚುನಾವಣಾ ಪ್ರಚಾರಗಳಿಗೆ, ಸಭೆಗಳಿಗೆ ನನ್ನನ್ನು ಆಹ್ವಾನಿಸಿಲ್ಲ” ಎಂದು ಹೇಳಿದ್ದಾರೆ.
2024ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾರ್ಚ್‌ನಲ್ಲಿ ಘೋಷಿಸಿದ್ದ ಜಯಂತ್ ಸಿನ್ಹಾ, ತಮ್ಮ “ನೇರ ಚುನಾವಣಾ ಕರ್ತವ್ಯಗಳಿಂದ” ಮುಕ್ತಗೊಳಿಸುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ವಿನಂತಿಸಿರುವುದಾಗಿ ಮತ್ತೆ ತಿಳಿಸಿದ್ದಾರೆ.
“ನಾನು ಮಾರ್ಚ್ 2ರಂದು ಲೋಕಸಭೆ ಚುನಾವಣೆಯಿಂದ ಹಿಂದೆ ಸರಿದಿದ್ದೇನೆ. ನಡ್ಡಾ ಅವರೊಂದಿಗೆ ಸಮಾಲೋಚಿಸಿ ಮತ್ತು ಅವರ ಸ್ಪಷ್ಟ ಅನುಮೋದನೆ ಪಡೆದ ನಂತರ, ನಾನು ಈ ಚುನಾವಣೆಗಳಲ್ಲಿ ಭಾಗಿಯಾಗುವುದಿಲ್ಲ ಎಂದು ಸಾರ್ವಜನಿಕವಾಗಿ ಸ್ಪಷ್ಟಪಡಿಸಿದ್ದೇನೆ. ಆರ್ಥಿಕವಾಗಿ ಮತ್ತು ಆಡಳಿತ ನೀತಿಗಳಿಗೆ ಸಂಬಂಧಿಸಿ ಪಕ್ಷವನ್ನು ಬೆಂಬಲಿಸಲು ನನಗೆ ಸಂತೋಷವಿದೆ. ನಾನು ಅದನ್ನು ಮುಂದುವರಿಸುತ್ತೇನೆ” ಎಂದು ಸಂಸದರು ಹೇಳಿದ್ದಾರೆ.