ಬೆಂಗಳೂರಿನ ಜಯಮಹಲ್ ರಸ್ತೆಯಲ್ಲಿರುವ ಆನೆ ಪಾರ್ಕ್ನಲ್ಲಿರುವ ಕೆರೆಯೂ ಮಳೆಯಿಲ್ಲದೇ, ಸಂಪೂರ್ಣವಾಗಿ ಬತ್ತಿ ಹೋಗಿತ್ತು. ಇದೀಗ, ಮಳೆಯಿಂದ ಕೆರೆ ಭರ್ತಿಯಾಗಿ ಮರುಜೀವ ಪಡೆದಿದೆ. ಕೆರೆಯಲ್ಲಿ ಈಗ ಭಾರತೀಯ ಸ್ಪಾಟ್–ಬಿಲ್ಡ್ ಬಾತುಕೋಳಿಗಳು ಸೇರಿದಂತೆ ಇತರ ಪಕ್ಷಿಗಳಿಗೆ ನೆಲೆಯಾಗಿದೆ.
ತಾಪಮಾನದ ನಂತರ ಐದು ತಿಂಗಳ ಬಳಿಕ ನಗರದಲ್ಲಿ ಮಳೆಯಾಗಿದೆ. ನಗರದಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುತ್ತಿದ್ದು, ತಾಪಮಾನ ಕಡಿಮೆಯಾಗಿದೆ. ಕೆರೆಗಳು ತುಂಬುತ್ತಿವೆ.
ಈ ತಿಂಗಳ ಆರಂಭದಲ್ಲಿ ಕೆರೆಯ ನೀರಿನಲ್ಲಿ ಆಮ್ಲಜನಕದ ಮಟ್ಟವು ತೀವ್ರವಾಗಿ ಕುಸಿತ ಕಂಡಿತ್ತು. ನಂತರ ಕೆರೆಯಲ್ಲಿ ಹೆಚ್ಚಿನ ಸಂಖ್ಯೆಯ ಮೀನುಗಳು ಸತ್ತಿದ್ದವು. ಜಲಮೂಲಗಳಲ್ಲಿ ನೀರಿನ ಮಟ್ಟ ಕಡಿಮೆಯಾದಾಗ ಆಮ್ಲಜನಕದ ಮಟ್ಟವು ಕಡಿಮೆಯಾಗುತ್ತದೆ. ಕೊನೆಗೆ ಕೆರೆಯಲ್ಲಿ ನೀರು ಬತ್ತಿ ಹೋಗಿತ್ತು. ಈಗ ನಗರದಲ್ಲಿ ಮಳೆಯಾಗಲು ಆರಂಭಿಸಿದ ಬಳಿಕ ಕೆರೆಗೆ ಮತ್ತೆ ಜೀವ ತುಂಬಿದ್ದು, ಪಕ್ಷಿಗಳು ಹಾಗೂ ಜಲಚರಗಳನ್ನು ಆಹ್ವಾನಿಸುತ್ತಿದೆ.
ಕೆರೆಯೂ ಈಗ ವೈವಿಧ್ಯಮಯ ಪಕ್ಷಿಗಳು, ಮೀನುಗಳು ಹಾಗೂ ಆಮೆಗಳಿಗೆ ನೆಲೆಯಾಗಿದೆ. ಸಿಟಿಜನ್ಸ್ ಇನಿಶಿಯೇಟಿವ್ ಜಯಮಹಲ್ ಏರಿಯಾದ (ಸಿಐಜೆಎಮ್‌ಎ) ಪ್ರೇಮಾ ಕಾಕಡೆ ಅವರ ಪ್ರಕಾರ, ಭಾರತೀಯ ಸ್ಪಾಟ್–ಬಿಲ್ಡ್ ಬಾತುಕೋಳಿಗಳು, ಕಿಂಗ್ಫಿಷರ್ಗಳು, ಈಗ್ರೆಟ್ಸ್ ಹಾಗೂ ನೈಟ್ ಹೆರಾನ್ಗಳು ಈಗ ಗುರುತಿಸಲ್ಪಟ್ಟಿವೆ.
“ಈ ಕೆರೆಯೂ ಆರಂಭದಲ್ಲಿ ಕಲ್ಲುಗಣಿಗಾರಿಕೆಯಾಗಿದ್ದು, ಮಳೆಯ ಹೊರತಾಗಿ ಪೂರೈಕೆಯ ಮೂಲವನ್ನು ಹೊಂದಿಲ್ಲ. ಈ ಪ್ರದೇಶದ ಸುತ್ತಮುತ್ತಲಿನ ಜೀವವೈವಿಧ್ಯವನ್ನು ಪೋಷಿಸಲು ಮಳೆನೀರು ಕೊಯ್ಲು ವ್ಯವಸ್ಥೆ ಮತ್ತು ಸ್ಪ್ರಿಂಕ್ಲರ್ಗಳಿದ್ದರೂ, ಕೆರೆಯ ಅಗತ್ಯಗಳನ್ನು ಪೂರೈಸುವಲ್ಲಿ ಅದು ಸಂಪೂರ್ಣವಾಗಿ ಸಮರ್ಥವಾಗಿಲ್ಲ” ಎಂದಿದ್ದಾರೆ.
ಪಕ್ಷಿಗಳನ್ನು ನೋಡಿದ ನಂತರ ಸಂತೋಷ ವ್ಯಕ್ತಪಡಿಸಿದ ಅವರು, ಪಕ್ಷಿಗಳಿಗೆ ಆಹಾರ ನೀಡುವ ತಪ್ಪು ಅಭ್ಯಾಸದ ಬಗ್ಗೆ ಸಂದರ್ಶಕರಿಗೆ ಎಚ್ಚರಿಕೆ ನೀಡಿದರು.
“ಜನರು ತಪ್ಪು ತಿಳುವಳಿಕೆ ಹೊಂದಿದ್ದಾರೆ ಮತ್ತು ಆಹಾರದ ಬಗ್ಗೆ ಕಡಿಮೆ ಅರಿವು ಹೊಂದಿದ್ದಾರೆ. ಪಕ್ಷಿಗಳು ಮತ್ತು ವನ್ಯಜೀವಿಗಳನ್ನು ಒಂಟಿಯಾಗಿ ಬಿಡಬೇಕು”ಎಂದು ಅವರು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಂಗಳೂರು | ‘ಓವರ್ ಟೇಕ್’ ಮಾಡಲು ಜಾಗ ಬಿಡಲಿಲ್ಲವೆಂದು ಕಾರಿನ ಮೇಲೆ ದಾಳಿ ನಡೆಸಿದ ದ್ವಿಚಕ್ರ ವಾಹನ ಸವಾರ
ಉದ್ಯಾನವನವು ತೋಟಗಾರಿಕಾ ಇಲಾಖೆಗೆ ಒಳಪಟ್ಟಿರುವುದರಿಂದ, ಇಲಾಖೆಯು ಕೆರೆಯ ನಿರ್ವಹಣೆಗೆ ಆಸಕ್ತಿ ತೋರಿಸುತ್ತಿದೆ. ಆದರೆ, ಸಿಜೆಐಎಂಎ ಉದ್ಯಾನ ಮತ್ತು ಕೊಳದ ಯೋಗಕ್ಷೇಮವನ್ನು ಸಹ ನೋಡಿಕೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.
“ಕೊಳದ ನೀರಿನ ಮೇಲೆ ಸಾಕಷ್ಟು ಕಸ ಮತ್ತು ಪ್ಲಾಸ್ಟಿಕ್ ಬಿದ್ದಿದ್ದನು ತಕ್ಷಣ ಸ್ವಚ್ಛಗೊಳಿಸಬೇಕು” ಎಂದು ಸಂಘದ ಇನ್ನೊಬ್ಬ ಸದಸ್ಯೆ ರಾಧಿಕಾ ಸ್ವಾಮಿನಾಥನ್ ಹೇಳಿದ್ದಾರೆ.
ಮೂಲ: ದಿ ಹಿಂದು