ಲೋಕಸಭೆ ಚುನಾವಣೆಯ ಆರನೇ ಹಂತದ ಚುನಾವಣೆಯಲ್ಲಿ ಈಶಾನ್ಯ ದೆಹಲಿಯ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕನ್ಹಯ್ಯ ಕುಮಾರ್ ಬಿಜೆಪಿಯ ಚಾರ್ ಸೋ ಪಾರ್ (400ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು) ಘೋಷಣೆಯನ್ನು ಲೇವಡಿ ಮಾಡಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕನ್ಹಯ್ಯ ಕುಮಾರ್, “ಬಿಜೆಪಿಗರು ಚಾರ್ ಸೋ ಪಾರ್ ಎಂದು ಹೇಳುವುದು ಅವರು ಗೆಲ್ಲುವ ಕ್ಷೇತ್ರಗಳ ಸಂಖ್ಯೆಯಲ್ಲ, ಅವರು ಪೆಟ್ರೋಲ್ ದರದ ಬಗ್ಗೆ ಮಾತನಾಡುತ್ತಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ.
#WATCH | Congress candidate from North East Delhi Kanhaiya Kumar says “In Delhi, Congress will get 3 seats and AAP will get 4 seats…There is a great enthusiasm among people. The massive voter turnout shows that people want change. Some EVMs were not working at several places… pic.twitter.com/rMP2eLvUeC
— ANI (@ANI) May 25, 2024
ಇನ್ನು ಮತದಾನದ ಬಗ್ಗೆ ಮಾತನಾಡಿದ ಕನ್ಹಯ್ಯ “ಮತದಾನ ಆರಂಭವಾದ ಒಂದು ಗಂಟೆಯಲ್ಲೇ ಉತ್ತಮ ಉತ್ಸಾಹ ಕಂಡುಬರುತ್ತಿದೆ. ಭಾರೀ ಪ್ರಮಾಣದಲ್ಲಿ ಮತದಾನ ನಡೆಯುವ ನಿರೀಕ್ಷೆಯಿದೆ. ಈ ಕ್ಷೇತ್ರದಲ್ಲಿ ಜನರು ಬದಲಾವಣೆಯನ್ನು ಬಯಸುತ್ತಾರೆ ಎಂಬುವುದರ ಪ್ರತೀಕ ಮತದಾನ ಪ್ರಮಾಣವಾಗಿದೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಲೋಕಸಭೆ ಚುನಾವಣೆ| 58 ಕ್ಷೇತ್ರಗಳಲ್ಲಿ ಆರನೇ ಹಂತದ ಮತದಾನ ಆರಂಭ: ಕನ್ಹಯ್ಯ, ಸಂಬಿತ್ ಪಾತ್ರ ಕಣದಲ್ಲಿ
“ಆರಂಭದಲ್ಲಿ ಕೆಲವೆಡೆ ಇವಿಎಂ ಸಮಸ್ಯೆ ಕಾಣಿಸಿಕೊಂಡಿದೆ. ಕೆಲವು ಇವಿಎಂ ಮೆಷಿನ್‌ಗಳು ಕಾರ್ಯ ನಿರ್ವಹಿಸುತ್ತಿರಲಿಲ್ಲ. ಈ ಸಮಸ್ಯೆಯನ್ನು ಚುನಾವಣಾ ಆಯೋಗ ಶೀಘ್ರವೇ ಬಗೆಹರಿಸಲಿದೆ ಎಂಬ ಭರವಸೆಯಿದೆ” ಎಂದರು.
“ಪ್ರಜಾಪ್ರಭುತ್ವದ ಈ ಮಹಾಪರ್ವದಲ್ಲಿ ಜನರು ಅಧಿಕ ಸಂಖ್ಯೆಯಲ್ಲಿ ಭಾಗಿಯಾಗಲಿದ್ದಾರೆ ಮತ್ತು ಬದಲಾವಣೆಯಾಗಲಿದೆ ಎಂಬ ಭರವಸೆಯಿದೆ” ಎಂದರು.
ಇದನ್ನು ಓದಿದ್ದೀರಾ? ದೆಹಲಿ | ಬೆಂಬಲಿಗನ ನೆಪದಲ್ಲಿ ಬಂದು ಕನ್ಹಯ್ಯ ಕುಮಾರ್ ಮೇಲೆ ಹಲ್ಲೆಗೈದ ಬಿಜೆಪಿ ಕಾರ್ಯಕರ್ತ
ಇನ್ನು ಬಿಜೆಪಿ ಈಗಾಗಲೇ 300 ಕ್ಷೇತ್ರಗಳಲ್ಲಿ ಜಯ ಗಳಿಸಿದೆ ಎಂಬ ಬಿಜೆಪಿ ನಾಯಕರುಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ನಾಯಕ, “ಶುಭಾಶಯಗಳು, ಈಗಾಗಲೇ ಗೆದ್ದಿದ್ದರೆ ಮನೆಯಲ್ಲಿ ಕುಳಿತುಕೊಳ್ಳಲಿ. ಬೂತ್‌ಗಳ ಹೊರಗೆ ಟೇಬಲ್ ಹಾಕಿ ಸುಮ್ಮನೇ ಕೂರುವುದು ಯಾಕೆ” ಎಂದು ಲೇವಡಿ ಮಾಡಿದ್ದು, ನಾಲ್ಕು ಕ್ಷೇತ್ರಗಳಲ್ಲಿ ಎಎಪಿ, ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.