ಲೋಕಸಭೆ ಚುನಾವಣೆಯ ಆರನೇ ಹಂತದ ಮತದಾನವು ಇಂದು (ಮೇ 25) ನಡೆಯುತ್ತಿದ್ದು, ಮಧ್ಯಾಹ್ನ ಒಂದು ಗಂಟೆಯವರೆಗೆ ಒಟ್ಟಾರೆ ಶೇಕಡ 39.13ರಷ್ಟು ಮತದಾನವಾಗಿದೆ.
ಏಳು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ 58 ಸ್ಥಾನಗಳಲ್ಲಿ ಇಂದು ಚುನಾವಣೆ ನಡೆಯುತ್ತಿದ್ದು, 889 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ದೆಹಲಿ ಮತ್ತು ಹರಿಯಾಣದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ.
#LokSabhaElections2024 | 39.13% voter turnout recorded till 1 pm, in the 6th phase of elections.
Bihar- 36.48%
Haryana- 36.48%
Jammu & Kashmir- 35.22%
Jharkhand- 42.54%
Delhi- 34.37%
Odisha- 35.69%
Uttar Pradesh-37.23%
West Bengal- 54.80% pic.twitter.com/1dIx326TPA— ANI (@ANI) May 25, 2024
ಪಶ್ಚಿಮ ಬಂಗಾಳದಲ್ಲಿ ಅತ್ಯಧಿಕ ಮತದಾನವಾಗಿದೆ. ಇಲ್ಲಿ ಎಂಟು ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು 1 ಗಂಟೆಯವರೆಗೆ ಶೇಕಡ 54.80ರಷ್ಟು ಮತದಾನವಾಗಿದೆ.
ಇದನ್ನು ಓದಿದ್ದೀರಾ? ಆರನೇ ಹಂತದ ಚುನಾವಣೆ: ಶೇ.39ರಷ್ಟು ಅಭ್ಯರ್ಥಿಗಳು ಕೋಟ್ಯಾಧಿಪತಿಗಳು, ಬಿಜೆಪಿಯ ನವೀನ್ ಜಿಂದಾಲ್ ಟಾಪ್
ಏಳು ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯುತ್ತಿರುವ ದೆಹಲಿ-ಎನ್‌ಸಿಆರ್‌ನಲ್ಲಿ ಅತೀ ಕಡಿಮೆ ಮತದಾನವಾಗಿದ್ದು, ಮಧ್ಯಾಹ್ನ 1 ಗಂಟೆಗೆ ಶೇಕಡ 34.37ರಷ್ಟು ಮತದಾನ ದಾಖಲಾಗಿದೆ.
ಬಿಹಾರ ಮತ್ತು ಹರಿಯಾಣದಲ್ಲಿ 36.48%, ಜಾರ್ಖಾಂಡ್‌ನಲ್ಲಿ 42.54%, ಜಮ್ಮು ಮತ್ತು ಕಾಶ್ಮೀರ, ಒಡಿಶಾದಲ್ಲಿ ಕ್ರಮವಾಗಿ 35.22%, 35.69% ಮತದಾನವಾಗಿದೆ. ಉತ್ತರ ಪ್ರದೇಶದಲ್ಲಿ 37.23%, ದೆಹಲಿಯಲ್ಲಿ 34.37% ಮತದಾನ ನಡೆದಿದೆ.
ಇದನ್ನು ಓದಿದ್ದೀರಾ? ಲೋಕಸಭೆ ಚುನಾವಣೆ| 58 ಕ್ಷೇತ್ರಗಳಲ್ಲಿ ಆರನೇ ಹಂತದ ಮತದಾನ ಆರಂಭ: ಕನ್ಹಯ್ಯ, ಸಂಬಿತ್ ಪಾತ್ರ ಕಣದಲ್ಲಿ
ಇನ್ನು ಬೆಳಗ್ಗೆ 11 ಗಂಟೆ ವೇಳೆಗೆ ಒಟ್ಟಾರೆ ಶೇಕಡ 25.76ರಷ್ಟು ಮತದಾನವಾಗಿದೆ. ಮತದಾನ ಪ್ರಮಾಣದಲ್ಲಿ ಮೊದಲ ಸ್ಥಾನದಲ್ಲಿದ್ದ ಪಶ್ಚಿಮ ಬಂಗಾಳದಲ್ಲಿ 36.88% ಮತದಾನ ದಾಖಲಾಗಿತ್ತು.
ಜೂನ್ 1ರಂದು ಕೊನೆಯ ಮತ್ತು 7ನೇ ಹಂತದ ಚುನಾವಣೆಯು 57 ಕ್ಷೇತ್ರಗಳಲ್ಲಿ ನಡೆಯಲಿದೆ. ಜೂನ್ 4ರಂದು ಮತ ಎಣಿಕೆ ನಡೆಯಲಿದೆ.