ಪಂಜಾಬ್‌ನಲ್ಲಿ ಪ್ರಧಾನಿ | ಪ್ರತಿಭಟನೆಗೆ ಹೆದರಿದ ಮೋದಿ; ರೈತ ಮುಖಂಡರಿಗೆ ಗೃಹಬಂಧನ

Date:

Advertisements

ರೈತ ಹೋರಾಟದ ಸೆಲೆ ಚಿಮ್ಮಿದ್ದ ಪಂಜಾಬ್‌ನಲ್ಲಿ ಜೂನ್‌ 1ರಂದು ಮತದಾನ ನಡೆಯಲಿದೆ. ರೈತ ಹೋರಾಟವನ್ನು ಹತ್ತಿಕ್ಕಲು ನಾನಾ ರೀತಿಯಲ್ಲಿ ದೌರ್ಜನ್ಯ ಎಸಗಿದ್ದ ಪ್ರಧಾನಿ ಮೋದಿ ಅವರು ಪಂಜಾಬ್‌ನಲ್ಲಿ ಮತಯಾಚನೆ ಮಾಡುತ್ತಿದ್ದಾರೆ. ಅಲ್ಲಿನ ರೈತ ಸಂಘಟನೆಗಳ ಪ್ರತಿಭಟನೆ, ರೈತ ಮುಖಂಡರ ಬಂಧನ, ಗೃಹಬಂಧನಗಳ ನಡುವೆ ಮೋದಿ ಅವರ ಎರಡು ದಿನಗಳ ಮತ ಬೇಡುವ ರ್‍ಯಾಲಿ ಮುಕ್ತಾಯಗೊಂಡಿದೆ.

ಪಂಜಾಬ್‌ನ ಗುರುದಾಸ್‌ಪುರ ಮತ್ತು ಜಲಂಧರ್ ಲೋಕಸಭಾ ಕ್ಷೇತ್ರಗಳಲ್ಲಿ ಮೋದಿ ಮತಯಾಚನೆ ಮಾಡಿದ್ದಾರೆ. ಮೋದಿ ಪ್ರಚಾರದ ವೇಳೆ ರೈತರು ಪ್ರತಿಭಟನೆ ಸಂಕೇತವಾಗಿ ಕಪ್ಪು ಬಾವುಟಗಳನ್ನು ಹೆದ್ದಾರಿಗಳಲ್ಲಿ ಹಾರಿಸಿದ್ದಾರೆ. ಪ್ರಧಾನಿ ಮೋದಿ ಗುರುದಾಸ್‌ಪುರದಲ್ಲಿ ಮಾಡಿದ ಭಾಷಣದಲ್ಲಿ ಒಮ್ಮೆ ಮಾತ್ರ ರೈತರ ಬಗ್ಗೆ ಪ್ರಸ್ತಾಪಿಸಿದ್ದು, ಜಲಂಧರ್ ನಲ್ಲಿ ರೈತರ ಬಗ್ಗೆ ಮಾತನಾಡದೇ ತಮ್ಮ ಪ್ರಚಾರ ಭಾಷಣ ಮುಗಿಸಿ, ಮರಳಿದ್ದಾರೆ.

ಪ್ರಚಾರದ ವೇದಿಕೆ ಮತ್ತು ಮೋದಿ ತೆರಳುವ ಹಾದಿಗೆ ರೈತರು ಬರದಂತೆ ತಡೆಯಲು ಪೊಲೀಸರು ಬ್ಯಾರಿಕೇಡ್‌ಗಳು, ಪೊಲೀಸ್‌ ವಾಹನಗಳು ಹಾಗೂ ಮಣ್ಣು ತುಂಬಿದ ಟಿಪ್ಪರ್‌ಗಳನ್ನು ಹೆದ್ದಾರಿಗಳಲ್ಲಿ ನಿಲ್ಲಿಸಿಕೊಂಡಿದ್ದರು.

Advertisements

ಅಲ್ಲದೆ, ಶನಿವಾರ ಬೆಳಗ್ಗೆಯಿಂದಲೇ ಪಂಜಾಬ್ ಪೊಲೀಸರು ಮತ್ತು ಇತರ ಭದ್ರತಾ ಪಡೆಗಳು ಗುರುದಾಸ್‌ಪುರ, ಜಲಂಧರ್, ಅಮೃತಸರ, ಕಪುರ್ತಲಾ, ನವನ್‌ಶಹರ್ ಮತ್ತು ಫರೀದ್‌ಕೋಟ್ ಜಿಲ್ಲೆಗಳಲ್ಲಿನ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾದ ರೈತ ಮುಖಂಡರನ್ನು ಅವರ ಮನೆಗಳಲ್ಲಿಯೇ ಗೃಹಬಂಧನದಲ್ಲಿರಿಸಿದ್ದವು. ಸಂಘಟನೆಗಳ ಕಾರ್ಯಕರ್ತರು ರ್ಯಾಲಿ ಸ್ಥಳಗಳಿಗೆ ತಲುಪದಂತೆ ತಡೆಯಲು ಅವರನ್ನು ಬಂಧಿಸಿದ್ದರು.

ಗುರುದಾಸ್‌ಪುರದಲ್ಲಿ ರೈತರ ಕುರಿತು ಮಾತನಾಡಿದ ಪ್ರಧಾನಿ, “ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ದೇಶದ ಭವಿಷ್ಯವನ್ನು ಪಣಕ್ಕಿಡುತ್ತಿವೆ. ಅವರು ಪಂಜಾಬ್‌ನ ಭವಿಷ್ಯವನ್ನು ಪಣಕ್ಕಿಡುತ್ತಿದ್ದರು. ರಾಜ್ಯದ ಯುವಕರನ್ನು ಡ್ರಗ್ಸ್ ಹಾಳುಮಾಡುತ್ತಿದೆ. ಅಪರಾಧಿಗಳು ರಾಜ್ಯ ಸರ್ಕಾರದ ಬೆಂಬಲವನ್ನು ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ. ರೈತರು ತೊಂದರೆಯಲ್ಲಿದ್ದಾರೆ. ರೈತರು ರಾಗಿ ಬೆಳೆಯಲು ಮುಂದಾಗಬೇಕು. ಅದಕ್ಕಾಗಿ ತಮ್ಮ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಬೇಕು” ಎಂದು ಹೇಳಿದರು.

ಕಳೆದ 10 ವರ್ಷಗಳಲ್ಲಿ ತಮ್ಮ ಸರ್ಕಾರವು ಪಂಜಾಬ್‌ನಿಂದ ದಾಖಲೆಯ ಪ್ರಮಾಣದಲ್ಲಿ ಗೋಧಿ ಮತ್ತು ಭತ್ತವನ್ನು ಖರೀದಿಸಿದೆ ಎಂದೂ ಮೋದಿ ಹೇಳಿಕೊಂಡರು. “ಕಾಂಗ್ರೆಸ್‌ಗೆ ಹೋಲಿಸಿದರೆ, ನಮ್ಮ ಸರ್ಕಾರವು ಗೋದಿ ಮತ್ತು ಭತ್ತಕ್ಕೆ ಎಂಎಸ್‌ಪಿಯನ್ನು 2.5% ಹೆಚ್ಚಿಸಿದೆ. ರೈತರಿಗೆ ಬೀಜಗಳು ಮತ್ತು ರಸಗೊಬ್ಬರಗಳ ಅವಶ್ಯಕತೆಗಳನ್ನು ಪೂರೈಸಲು ನಾವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯನ್ನು ಪರಿಚಯಿಸಿದ್ದೇವೆ. ನಮ್ಮ ಸರ್ಕಾರ ರೈತರ ಖಾತೆಗೆ 30,000 ರೂ. ಜಮಾ ಮಾಡಿದೆ” ಎಂದು ತಮ್ಮನ್ನು ತಾವೇ ಹೊಗಳಿಕೊಂಡಿದ್ದಾರೆ.

ಇದಕ್ಕೂ ಮುನ್ನ, ಜಲಂಧರ್‌ನಲ್ಲಿ ಮಾತನಾಡಿದ ಮೋದಿ ರೈತರ ಬಗ್ಗೆ ಮಾತನಾಡಲಿಲ್ಲ. ಅಲ್ಲಿ, ಪಾಕಿಸ್ತಾನ, ಭಯೋತ್ಪಾದನೆ, ರಾಮಮಂದಿರ, ನವ ಭಾರತ, ಘರ್ ಮೈ ಘುಸ್ ಕೆ ಮಾರೆಂಗೆ ಘೋಷಣೆ, ಸಿಖ್ ಗುರುಗಳಿಗೆ ತಮ್ಮ ಭಾಷಣವನ್ನು ಸೀಮಿತಗೊಳಿಸಿದ್ದರು. ಪಂಜಾಬ್‌ನ ರವಿದಾಸ್ಸಿಯಾ ಪಂಥದ ಅನುಯಾಯಿಗಳನ್ನು ಓಲೈಸುವ ಮೂಲಕ ಬನಾರಸ್‌ನಲ್ಲಿ ರಾಧಾ ಸೋಮಿ ಸತ್ಸಂಗ್ ಬಿಯಾಸ್ ಪಂಥ ಮತ್ತು ಸೀರ್ ಗೋವರ್ಧನ್ ಧಾಮ್ ಬಗ್ಗೆ ಪ್ರಧಾನಿ ವಿಶೇಷವಾಗಿ ಉಲ್ಲೇಖಿಸಿದರು.

ಗುರುದಾಸ್‌ಪುರ ಭಾಗದಲ್ಲಿ ಬಿಜೆಪಿ ಅಭ್ಯರ್ಥಿಗಳಾಗಿ ಗುರುದಾಸ್‌ಪುರದಿಂದ ದಿನೇಶ್ ಕುಮಾರ್ ಬಬ್ಬು, ಹೋಶಿಯಾರ್‌ಪುರದಿಂದ ಅನಿತಾ ಸೋಮ್ ಪ್ರಕಾಶ್ ಮತ್ತು ಅಮೃತಸರದಿಂದ ತರಂಜಿತ್ ಸಿಂಗ್ ಸಂಧು ಕಣದಲ್ಲಿದ್ದಾರೆ. ಜಲಂಧರ್ ಭಾಗದಲ್ಲಿ ಜಲಂಧರ್‌ನಲ್ಲಿ ಸುಶೀಲ್ ಕುಮಾರ್ ರಿಂಕು, ಲೂಧಿಯಾನದಿಂದ ರವನೀತ್ ಸಿಂಗ್ ಬಿಟ್ಟು, ಫಿರೋಜ್‌ಪುರದಿಂದ ರಾಣಾ ಗುರ್ಮೀತ್ ಸಿಂಗ್ ಸೋಧಿ ಮತ್ತು ಖಾದೂರ್ ಸಾಹಿಬ್ ಕ್ಷೇತ್ರದಿಂದ ಮಂಜಿತ್ ಸಿಂಗ್ ಮನ್ನಾ ಕಣದಲ್ಲಿದ್ದಾರೆ. ತಮ್ಮ ಅಭ್ಯರ್ಥಿಗಳಿಗೆ ಮತ ಚಲಾಯಿಸುವಂತೆ ಈ ಭಾಗದ ಮತದಾರರಲ್ಲಿ ಮೋದಿ ಮನವಿ ಮಾಡಿದ್ದಾರೆ.

ಪ್ರಧಾನಿ ಮೋದಿ ಉದ್ದೇಶವೇನು? – ರೈತ ಮುಖಂಡರ ಪ್ರಶ್ನೆ

ಪಂಜಾಬ್‌ಗೆ ಮೋದಿ ಭೇಟಿಯನ್ನು ಪ್ರಶ್ನಿಸಿ ಕೆಎಂಎಂ ಅಧ್ಯಕ್ಷ ಸರ್ವಾನ್ ಸಿಂಗ್ ಪಂಧೇರ್ ಪತ್ರಿಕಾ ಹೇಳಿಕೆ ಹೊರಡಿಸಿದ್ದಾರೆ. “ಪ್ರಧಾನಿ ಮೋದಿ ಅವರು ಈಗಾಗಲೇ ಒಪ್ಪಿಕೊಂಡಿದ್ದ ಹಿಂದಿನ ರೈತ ಹೋರಾಟದ ಬೇಡಿಕೆಗಳನ್ನು ಜಾರಿಗೊಳಿಸಲಿಲ್ಲವೇ? 2014ರ ಸಂಸತ್ತಿನ ಚುನಾವಣೆಯ ಭರವಸೆಯಂತೆ, ಅವರು ಎಂಎಸ್‌ಪಿಅನ್ನು ಏಕೆ ಜಾರಿಗೆ ತರಲಿಲ್ಲ. ಸ್ವಾಮಿನಾಥನ್ ಆಯೋಗದ ವರದಿಯನ್ನು ಯಾಕೆ ಅನುಷ್ಠಾನಗೊಳಿಸಿಲ್ಲ? ಎಂಬುದನ್ನು ವಿವರಿಸಬೇಕು” ಎಂದು ಒತ್ತಾಯಿಸಿದ್ದಾರೆ.

“ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸದಂತೆ ರೈತರನ್ನು ತಡೆದ ರೀತಿಯು, ವಿಶ್ವದ ಅತ್ಯುತ್ತಮ ಪ್ರಜಾಪ್ರಭುತ್ವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಅತ್ಯಂತ ಕೆಳ ಸ್ಥಾನದಲ್ಲಿದೆ ಎಂಬುದಕ್ಕೆ ಮುದ್ರೆ ಹಾಕಿದೆ. ಅವರು ತಮಗೆ ಬೃಹತ್ ಬೆಂಬಲವಿದೆ ಎಂದು ತೋರಿಸಿಕೊಳ್ಳಲು ಇತರ ರಾಜ್ಯಗಳಿಂದ ಜನರನ್ನು ಬಸ್‌ಗಳಲ್ಲಿ ಕರೆತರುತ್ತಿದ್ದಾರೆ. ಪಂಜಾಬ್‌ನ ಜನರು ದ್ವೇಷ ರಾಜಕೀಯವನ್ನು ಇಷ್ಟಪಡುವುದಿಲ್ಲ” ಎಂದು ಅವರು ಹೇಳಿದ್ದಾರೆ.

“ಪ್ರಧಾನಿ ಮೋದಿಯವರ ರೈತರ ಭಾಷಣಗಳು ವಿರೋಧಾತ್ಮಕವಾಗಿವೆ. ದೇಶದಲ್ಲಿ ಸುಮಾರು 80 ರಿಂದ 100 ಕೋಟಿ ರೈತರು ಮತ್ತು ರೈತ ಕಾರ್ಮಿಕರಿದ್ದಾರೆ. ರೈತರ ಸಂಕಷ್ಟಗಳನ್ನು ಬಗೆಹರಿಸಲು ಪ್ರಧಾನಿ ಮೋದಿ ಏನನ್ನೂ ಮಾಡಲಿಲ್ಲ. ಬದಲಾಗಿ, ಎಲ್ಲವನ್ನೂ ಕಾರ್ಪೊರೇಟ್ ಸಂಸ್ಥೆಗಳಿಗೆ ಕೊಟ್ಟಿದ್ದಾರೆ. ಅವರು ರೈತರಿಗಾಗಿ ಏನು ಮಾಡಿದ್ದಾರೆ ಎಂಬುದನ್ನು ಅವರೇ ಹೇಳಬೇಕು. ನಾವು ಮೇ 28 ರಂದು ಪಂಜಾಬ್‌ನಲ್ಲಿ ಬಿಜೆಪಿ ಅಭ್ಯರ್ಥಿಗಳ ನಿವಾಸಗಳನ್ನು ಘೇರಾವ್ ಮಾಡಲು ನಿರ್ಧರಿಸಿದ್ದೇವೆ” ಎಂದು ಪಂಧೇರ್ ಹೇಳಿದ್ದಾರೆ.

ನಾವು ಪ್ರಧಾನಿಯನ್ನು ಭೇಟಿ ಮಾಡಲು ಅನುಕೂಲ ಮಾಡಿಕೊಡುವಂತೆ ಪಂಜಾಬ್ ಬಿಜೆಪಿ ನಾಯಕರು ಮತ್ತು ಪಂಜಾಬ್ ಪೊಲೀಸ್‌ ಅಧಿಕಾರಿಗಳಿಗೆ ಮನವಿ ಮಾಡಿದ್ದೆವು. ಆದರೂ, ಅವರು ಅವಕಾಶ ನೀಡಲಿಲ್ಲ. ನಮಗೆ ನಮ್ಮ ಬೇಡಿಕೆಗಳನ್ನು ನೆನಪಿಸುವ ಉದ್ದೇಶವಿತ್ತೇ ಹೊರತು, ಅವರ ರ್ಯಾಲಿಯನ್ನು ತಡೆಯುವುದಲ್ಲ ಎಂದು ಅವರು ಹೇಳಿದ್ದಾರೆ.

ಗಮನಾರ್ಹವಾಗಿ, ಸರ್ವಾನ್ ಸಿಂಗ್ ಪಂಧೇರ್, ಸುಖಜಿತ್ ಸಿಂಗ್ ಹರ್ದೋಜಾಂಡೆ ಮತ್ತು ಸುಖದೇವ್ ಸಿಂಗ್ ಭೋಜರಾಜ್ ಮತ್ತು ವಿವಿಧ ರೈತ ಸಂಘಗಳು ಗುರುದಾಸ್‌ಪುರ-ಅಮೃತಸರ ರಸ್ತೆಯಲ್ಲಿ ತಮ್ಮ ಬೇಡಿಕೆಗಳ ಬಗ್ಗೆ ಮೋದಿಯನ್ನು ಪ್ರಶ್ನಿಸಲು ಜಮಾಯಿಸಿದ್ದರು. ಆದರೆ, ಗುರುದಾಸ್‌ಪುರದ ಬಾಬ್ರಿ ಚೌಕ್‌ನಲ್ಲಿ ಅವರನ್ನು ಪೊಲೀಸರು ತಡೆದರು. ನಂತರ, ರೈತರು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

Download Eedina App Android / iOS

X