ಲೋಕಸಭೆ ಚುನಾವಣೆಯ ಏಳು ಹಂತಗಳ ಪೈಕಿ 6ನೇ ಹಂತದ ಮತದಾನ ಪ್ರಕ್ರಿಯೆ ಮೇ 25ರಂದು ನಡೆದಿದ್ದು, 59.06 ಶೇಕಡಾದಷ್ಟು ಮತದಾನ ನಡೆದಿರುವುದಾಗಿ ಚುನಾವಣಾ ಆಯೋಗ ಮಾಹಿತಿ ನೀಡಿದೆ. ಮೇ 26ರಂದು ಅಧಿಕೃತ ಅಂಕಿ-ಅಂಶಗಳನ್ನು ಆಯೋಗದ ಅಧಿಕಾರಿಗಳು ಪ್ರಕಟಿಸಲಿದ್ದಾರೆ.
ಶನಿವಾರ ಆರನೇ ಹಂತದಲ್ಲಿ 8 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ನಡೆದಿದ್ದು, ರಾತ್ರಿ 7.45ಕ್ಕೆ ಚುನಾವಣಾ ಆಯೋಗವು ಹೊರಡಿಸಿರುವ ಪ್ರಕಟಣೆಯಲ್ಲಿ 59.06 ಶೇಕಡಾದಷ್ಟು ಮತದಾನ ನಡೆದಿರುವುದಾಗಿ ತಿಳಿಸಿದೆ.
ದೆಹಲಿಯಲ್ಲಿ ಶೇ.54.48ರಷ್ಟು ಮತದಾನ ದಾಖಲಾದರೆ, ಪಶ್ಚಿಮ ಬಂಗಾಳದಲ್ಲಿ 78.19ರಷ್ಟು ಮತದಾನ ದಾಖಲಾಗಿದೆ. ಆ ಮೂಲಕ ಆರನೇ ಹಂತದಲ್ಲಿ ಅತಿಹೆಚ್ಚು ಮತದಾನ ದಾಖಲಾದ ರಾಜ್ಯ ಎಂಬ ಖ್ಯಾತಿ ಪಶ್ಚಿಮ ಬಂಗಾಳದ್ದಾಗಿದೆ.
Thank you, voters!
Your participation has made the 6th phase of the Lok Sabha elections a grand success.#ChunavKaParv #DeshKaGarv #Elections2024 #IVote4Sure pic.twitter.com/loZ9tS97Fk
— Election Commission of India (@ECISVEEP) May 25, 2024
ಉಳಿದಂತೆ ಬಿಹಾರದಲ್ಲಿ 53.30%, ಹರಿಯಾಣದಲ್ಲಿ 58.37%, ಜಮ್ಮು-ಕಾಶ್ಮೀರದಲ್ಲಿ 52.28%, ಜಾರ್ಖಂಡ್‌ನಲ್ಲಿ 62.74%, ಒಡಿಶಾದಲ್ಲಿ 60.07%, ಉತ್ತರ ಪ್ರದೇಶದಲ್ಲಿ 54.03% ದಷ್ಟು ಮತದಾನ ನಡೆದಿರುವುದಾಗಿ ಆಯೋಗ ಮಾಹಿತಿ ನೀಡಿದೆ. ಜೂನ್ 1ರಂದು ಕೊನೆಯ ಹಾಗೂ 7ನೇ ಹಂತದ ಮತದಾನ ಪ್ರಕ್ರಿಯೆ ನಡೆಯಲಿದೆ.
ಆರನೇ ಹಂತದಲ್ಲಿ 5.84 ಕೋಟಿ ಪುರುಷರು, 5.29 ಕೋಟಿ ಮಹಿಳೆಯರು, 5120 ತೃತೀಯ ಲಿಂಗಿಗಳು ಸೇರಿ ಒಟ್ಟು 11.13 ಕೋಟಿ ಮತದಾರರು ನೋಂದಣಿ ಮಾಡಿಕೊಂಡಿದ್ದರು. 8 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 58 ಕ್ಷೇತ್ರಗಳಿಗೆ ಮತದಾನ ನಡೆದಿದೆ.
ಬಿಹಾರದ 8 ಸ್ಥಾನಗಳು, ಹರಿಯಾಣದ ಎಲ್ಲ 10 ಸ್ಥಾನ, ಜಾರ್ಖಂಡ್ 4, ಜಮ್ಮು-ಕಾಶ್ಮೀರ 1, ದೆಹಲಿಯ ಎಲ್ಲ 7 ಸ್ಥಾನ, ಒಡಿಶಾ 6, ಉತ್ತರ ಪ್ರದೇಶ 14 ಹಾಗೂ ಪಶ್ಚಿಮ ಬಂಗಾಳದ 8 ಕ್ಷೇತ್ರಗಳಲ್ಲಿ ವೋಟಿಂಗ್ ನಡೆದಿದೆ. ಒಟ್ಟು 889 ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿದ್ದಾರೆ.
देशवासियों!
पहले पांच चरणों के मतदान में आपने झूठ, नफ़रत और दुष्प्रचार को नकार कर अपने जीवन से जुड़े ज़मीनी मुद्दों को प्राथमिकता दी है।
आज छठे चरण का मतदान है और आपका हर वोट सुनिश्चित करेगा कि:
– युवाओं के लिए 30 लाख खाली सरकारी पदों पर भर्ती और 1 लाख रुपए साल की पहली नौकरी… pic.twitter.com/TvcmqSwXj3
— Rahul Gandhi (@RahulGandhi) May 25, 2024
ರಾಷ್ಟ್ರಪತಿ ದ್ರೌಪದಿ ಮುರ್ಮು, ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್, ಕ್ರಿಕೆಟಿಗರಾದ ಗೌತಮ್ ಗಂಭೀರ್, ಎಂ ಎಸ್ ಧೋನಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮುಖ್ಯ ಚುನಾವಣಾ ಆಯುಕ್ತರಾದ ರಾಜೀವ್ ಕುಮಾರ್, ಆಯಕ್ತರುಗಳಾದ ಜ್ಞಾನೇಶ್ ಕುಮಾರ್ ಮತ್ತು ಡಾ. ಸುಖ್‌ಬೀರ್ ಸಿಂಗ್ ಸಂಧು ಸೇರಿ ಹಲವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮತದಾನ ಮಾಡಿದರು. ಇದರೊಂದಿಗೆ ಆರನೇ ಹಂತದ ಮತದಾನ ಮುಕ್ತಾಯಗೊಂಡಿದ್ದು, ಜೂನ್ 1ರಂದು ಏಳನೇ ಅಥವಾ ಕೊನೆಯ ಹಂತದ ಮತದಾನ ನಡೆಯಲಿದೆ. ಜೂನ್ 4ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
Hon’ble President of India Smt. Droupadi Murmu proudly showcasing her inked finger after casting her vote in the ongoing sixth phase of General Elections 2024.
📸 @rashtrapatibhvn #ChunavKaParv #DeshKaGarv #Elections2024 #LokSabhaElections2024#Phase6 pic.twitter.com/dpA3506fYM
— Election Commission of India (@ECISVEEP) May 25, 2024
