ಬೃಹತ್ ಪ್ರಮಾಣದ ಭೂಕುಸಿತದಿಂದ ಅಪಾರ ಪ್ರಮಾಣದ ಸಾವು ನೋವಿನ ನಷ್ಟ ಅನುಭವಿಸಿರುವ ಪಪುವಾ ನ್ಯೂಗಿನಿ ದೇಶಕ್ಕೆ ಭಾರತ ಸರ್ಕಾರ 1 ಮಿಲಿಯನ್ ಡಾಲರ್ ಆರ್ಥಿಕ ನೆರವನ್ನು ಘೋಷಿಸಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ವಿದೇಶಾಂಗ ಸಚಿವಾಲಯ, ಘಟನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದು, ತುರ್ತು ಸಮಯದಲ್ಲಿರುವ ದ್ವೀಪ ರಾಷ್ಟ್ರಕ್ಕೆ ಭಾರತದಿಂದ ಎಲ್ಲ ರೀತಿಯ ಬೆಂಬಲ ಹಾಗೂ ನೆರವು ನೀಡಲು ಸಿದ್ಧವಿದೆ ಎಂದು ತಿಳಿಸಲಾಗಿದೆ.
“ಎಫ್‌ಐಪಿಐಸಿಯಡಿಯ ಆಪ್ತ ಮಿತ್ರ ಹಾಗೂ ಪಾಲುದಾರನಾಗಿರುವ ಪಪುವಾ ನ್ಯೂಗಿನಿಯ ಸ್ನೇಹಶೀಲ ಜನರೊಂದಿಗೆ ಒಗ್ಗಟ್ಟಿನ ಸೂಚಕವಾಗಿ ತತ್‌ಕ್ಷಣದಲ್ಲಿ ನೆರವು, ಪುನರ್ವಸತಿ ಹಾಗೂ ಮರು ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳಲು ಭಾರತ ಸರ್ಕಾರವು 1 ಮಿಲಿಯನ್ ಡಾಲರ್ ನೆರವು ನೀಡುತ್ತದೆ” ಎಂದು ತಿಳಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? 8 ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಾಂಗ್ಲಾದೇಶದ ಸಂಸದನ ತುಂಡು ತುಂಡಾದ ದೇಹ ಕೋಲ್ಕತ್ತಾದಲ್ಲಿ ಪತ್ತೆ
ವಿದೇಶಾಂಗ ಸಚಿವ ಎಸ್ ಜೈಶಂಕರ್, ಪಪುವಾ ನ್ಯೂಗಿನಿದಲ್ಲಿ ಇತ್ತೀಚಿಗೆ ಭೂಕುಸಿತದಿಂದ ಉಂಟಾಗಿರುವ ಸಾವಿನ ಬಗ್ಗೆ ಅತ್ಯಂತ ದುಃಖಿತಗೊಂಡಿದ್ದೇವೆ. ಅಲ್ಲಿನ ಸರ್ಕಾರ ಹಾಗೂ ಜನರೊಂದಿಗೆ ನಾವಿದ್ದೇವೆ. ಇಂತಹ ಕಷ್ಟದ ಸಮಯದಲ್ಲಿ ನಮ್ಮ ಸ್ನೇಹಿತರೊಂದಿಗೆ ಒಗ್ಗಟ್ಟು ಪ್ರದರ್ಶಿಸಲಿದ್ದೇವೆ”ಎಂದು ತಿಳಿಸಿದ್ದಾರೆ.
ಪಪುವಾ ನ್ಯೂಗಿನಿ ನೈಸರ್ಗಿಕ ಸಂಕಷ್ಟವಿದ್ದ ಸಮಯದಲ್ಲಿ ಭಾರತ ಸದಾ ಬೆಂಬಲ ನೀಡುತ್ತಿದೆ. 2018ರಲ್ಲಿ ಭೂಕಂಪ 2019 ಮತ್ತು 2023ರಲ್ಲಿ ಜ್ವಾಲಾಮುಖಿ ಸ್ಫೋಟ ಉಂಟಾದ ಸಮಯದಲ್ಲೂ ಸಹಾಯಹಸ್ತ ನೀಡಿದೆ ಎಂದು ಭಾರತ ವಿದೇಶಾಂಗ ಇಲಾಖೆ ತಿಳಿಸಿದೆ.
