ಒಂದೇ ಕುಟುಂಬದ ಮೂವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ಕೊಪ್ಪಳ ತಾಲೂಕಿನ ಹೊಸ ಲಿಂಗಾಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಆಶ್ರಯ ಕಾಲೋನಿಯ ಮೂರನೇ ವಾರ್ಡಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ರಾಮೇಶ್ವರಿ (50), ವಸಂತಾ (32) ಹಾಗೂ ಸಾಯಿ ಧರ್ಮತೇಜ್ (5) ಮೂವರು ಸಾವನಪ್ಪಿದ್ದಾರೆ.
ಏಕಕಾಲಕ್ಕೆ ತಾಯಿ, ಮಗಳು, ಮೊಮ್ಮಗ ಮೂವರೂ ಮನೆಯಲ್ಲಿದ್ದಾಗಲೇ ಏಕಕಾಲದಲ್ಲಿ ಶವವಾಗಿ ಪತ್ತೆಯಾಗಿರುವುದು ಆಶ್ಚರ್ಯ ತಂದಿದೆ. ಇದು ಸಾವಿಗೆ ನಿಖರ ಕಾರಣವೇನು ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ. ಸದ್ಯ ಸಾವಿನ ಸುತ್ತ ಅನುಮಾನದ ಹುತ್ತ ಆವರಿಸಿದೆ.
ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.