‘ಎಕ್ಸಿಟ್ ಪೋಲ್‌’ಗಳು ಎಷ್ಟು ನಿಖರ? ನಿರಂತರವಾಗಿ ದಾರಿ ತಪ್ಪಿವೆ ಮತಗಟ್ಟೆ ಸಮೀಕ್ಷೆಗಳು!

Date:

Advertisements

ಪ್ರಜಾಪ್ರಭುತ್ವದ ಅಳಿವು-ಉಳಿವಿನ ಕದನವೆಂದು ಪರಿಗಣಿಸಲಾಗಿರುವ 2024ರ ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನ ಮುಗಿದಿದೆ. ನಾನಾ ಮಾಧ್ಯಮಗಳು ತಮ್ಮದೇ ಆದ ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಕಟಿಸುತ್ತಿವೆ. ಮೋದಿ ಬಗ್ಗೆ ತುತ್ತೂರಿ ಊದುತ್ತಿರುವ ಬಹುತೇಕ ಮಾಧ್ಯಮಗಳು ಅಥವಾ ಸಮೀಕ್ಷೆಗಳು ಬಿಜೆಪಿಯೇ ಗೆಲ್ಲುತ್ತದೆ. ಬಿಜೆಪಿಯೇ ಹೆಚ್ಚು ಮತಗಳನ್ನು ಪಡೆಯುತ್ತದೆ ಎಂದು ಅಂಕಿಅಂಶಗಳನ್ನು ಮುಂದಿಡುತ್ತಿವೆ.

ಕುತೂಹಲಕಾರಿಯಾಗಿ, ಇತ್ತೀಚಿನ ವರ್ಷಗಳಲ್ಲಿ ನಡೆದಿರುವ ಹಲವಾರು ಚುನಾವಣೆಗಳ ಎಕ್ಸಿಟ್ ಪೋಲ್‌ಗಳು ನಿಖರತೆಯನ್ನು ಸಬೀತುಪಡಿಸುವಲ್ಲಿ ವಿಫಲವಾಗಿವೆ. ಚುನಾವಣೆ ನಂತರದ ಎಕ್ಸಿಟ್‌ ಪೋಲ್‌ಗಳಿಗೆ ವ್ಯತಿರಿಕ್ತವಾಗಿ ಚುನಾವಣಾ ಫಲಿತಾಂಶಗಳು ಬಂದಿವೆ. ಹೀಗಾಗಿರುವಾಗ, ಮೋದಿಯನ್ನು ದೈವೀಕರಿಸುವ ‘ಗೋದಿ ಮಾಧ್ಯಮ’ಗಳು ಮತ್ತು ಕೆಲ ಎಕ್ಸಿಟ್ ಪೋಲ್‌ಗಳು ಜನಾಭಿಪ್ರಾಯ ಏನೇ ಇದ್ದರೂ, ಮೋದಿ ಪರವಾದ ಅಂಕಿಅಂಶಗಳನ್ನು ಮುಂದಿಡುವುದು ಖಚಿತ.

ಏನೇ ಇರಲಿ, ಚುನಾವಣೋತ್ತರ ಸಮೀಕ್ಷೆಗಳನ್ನು ನಡೆಸುವ ಸಂಸ್ಥೆಗಳು ಮತ್ತು ಮಾಧ್ಯಮಗಳು ಜನರ ನಾಡಿಮಿಡಿತವನ್ನು ಅರಿಯುವಲ್ಲಿ ವಿಫಲವಾಗಿವೆ ಎಂಬುದಕ್ಕೆ ಕಳೆದ  ಪ್ರಮುಖ ಆರು ಗಮನಾರ್ಹ ನಿದರ್ಶನಗಳು ಇಲ್ಲಿವೆ.

Advertisements

2004ರ ಲೋಕಸಭಾ ಚುನಾವಣೆ ಸಮೀಕ್ಷೆ

2004ರಲ್ಲಿ, ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಬಿಜೆಪಿ ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನ ವಿಧಾನಸಭೆಯಲ್ಲಿ ಗೆಲುವು ಸಾಧಿಸಿತ್ತು. ಅದೇ ಗೆಲುವಿನ ಹುಮ್ಮಸ್ಸಿನಲ್ಲಿ ತೇಲುತ್ತಿತ್ತು. ಅಲ್ಲದೆ, ‘ಭಾರತ ಹೊಳೆಯುತ್ತಿದೆ’ (ಇಂಡಿಯಾ ಶೈನಿಂಗ್) ಎಂಬ ಘೋಷಣೆ ನೀಡುವ ಜೊತೆಗೆ, ಅವಧಿಪೂರ್ವ ಚುನಾವಣೆಗೆ ಕರೆ ನೀಡಿತು. ಚುನಾವಣೆಯ ಸಮಯದಲ್ಲಿ ‘ಎಕ್ಸಿಟ್ ಪೋಲ್‌’ಗಳು ಬಿಜೆಪಿ ನೇತೃತ್ವದ ಎನ್‌ಡಿಎ ಬಹುಮತ ಗಳಿಸುತ್ತದೆ ಎಂದು ಭವಿಷ್ಯ ನುಡಿದಿದ್ದವು. ಎನ್‌ಡಿಎ 240ರಿಂದ 275 ಸ್ಥಾನಗಳನ್ನು ಎನ್‌ಡಿಎ ಪಡೆದು, ಅಧಿಕಾರ ರಚಿಸುತ್ತದೆ ಎಂದು ಹೇಳಿದ್ದವು.

WhatsApp Image 2024 06 01 at 8.41.31 PM
2004ರ EXIT POLL ಹಾಗೂ ಅಂತಿಮ ಫಲಿತಾಂಶ

ಆದರೆ, ಚುನವಣಾ ಫಲಿತಾಂಶ ಆಶ್ಚರ್ಯಕರವಾಗಿಯೂ, ವಿಭಿನ್ನವಾಗಿಯೂ ಬಂದಿತು. ಎನ್‌ಡಿಎ ಕೇವಲ 187 ಸ್ಥಾನಗಳನ್ನು ಮಾತ್ರವೇ ಗೆಲ್ಲಲು ಸಾಧ್ಯವಾಯಿತು. ಅದರಲ್ಲೂ ಬಿಜೆಪಿ 138 ಸ್ಥಾನಗಳನ್ನು ಮಾತ್ರ ಗೆದ್ದಿತು. ಬಿಜೆಪಿಗಿಂತ ಹೆಚ್ಚಿನ ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿತ್ತು. ಕಾಂಗ್ರೆಸ್‌ 145 ಸ್ಥಾನಗಳಲ್ಲಿ ಗೆದ್ದರೆ, ಕಾಂಗ್ರೆಸ್‌ ನೇತೃತ್ವದ ಯುಪಿಎ ಮೈತ್ರಿಕೂಟ 216 ಸ್ಥಾನಗಳನ್ನು ಗೆದ್ದಿತ್ತು. ಇತರ ಕೆಲವು ಪಕ್ಷಗಳನ್ನು ಒಗ್ಗೂಡಿಸಿಕೊಂಡು ಕಾಂಗ್ರೆಸ್‌ ಸರ್ಕಾರವನ್ನು ರಚಿಸುವ ಮೂಲಕ, ಬಿಜೆಪಿಯನ್ನು ಅಧಿಕಾರದಿಂದ ಹೊರಗುಳಿಯುವಂತೆ ಮಾಡಿತು.

2014ರ ಲೋಕಸಭಾ ಚುನಾವಣಾ ಸಮೀಕ್ಷೆ

2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಗೆಲುವಿನ ಮುನ್ಸೂಚನೆ ನೀಡಿದ್ದ ‘ಎಕ್ಸಿಟ್ ಪೋಲ್‌’ಗಳು ಎನ್‌ಡಿಎಗೂ ಬಹುಮತದ ಕೊರತೆ ಎದುರಾಗಬಹುದು ಎಂದು ಹೇಳಿದ್ದವು. ಹೆಚ್ಚಿನ ಚುನಾವಣೋತ್ತರ ಸಮೀಕ್ಷೆಗಳು 261 ಮತ್ತು 289 ಸ್ಥಾನಗಳನ್ನು ಎನ್‌ಡಿಎ ಪಡೆಯಬಹುದು ಎಂದು ಅಂದಾಜಿಸಿದ್ದವು. ಆದರೆ, ಫಲಿತಾಂಶವು ನಿರೀಕ್ಷೆಗಳನ್ನು ಮೀರಿತ್ತು. ಎನ್‌ಡಿಎ ಬರೋಬ್ಬರಿ 336 ಸ್ಥಾನಗಳನ್ನು ಪಡೆದುಕೊಂಡಿತು. ಬಿಜೆಪಿ ಏಕಾಂಗಿಯಾಗಿ 282 ಸ್ಥಾನಗಳನ್ನು ಗೆದ್ದು, ಬಹುಮತದ ಗಡಿ ದಾಡಿತ್ತು. ಆದರೆ, ಆ ಚುನಾವಣೆಯಲ್ಲಿ ಕಾಂಗ್ರೆಸ್‌ ಕೇವಲ 44 ಸ್ಥಾನಗಳನ್ನು ಮಾತ್ರವೇ ಗೆಲ್ಲುವ ಮೂಲಕ ಐತಿಹಾಸಿಕ ಹೀನಾಯ ಸೋಲು ಕಂಡಿತು.

2015ರ ದೆಹಲಿ ವಿಧಾನಸಭಾ ಚುನಾವಣಾ ಸಮೀಕ್ಷೆ

2015ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಚುನಾವಣೋತ್ತರ ಸಮೀಕ್ಷೆಗಳು ಆಮ್ ಆದ್ಮಿ ಪಕ್ಷ (ಎಎಪಿ) ಸರಳ ಬಹುಮತ ಪಡೆದು, ಅಧಿಕಾರ ರಚಿಸುತ್ತದೆ ಎಂದು ಹೇಳಿದ್ದವು. ಎಎಪಿ ಗರಿಷ್ಠ 50 ಸ್ಥಾನಗಳನ್ನು ಗೆಲ್ಲುತ್ತದೆ ಎಂದಿದ್ದವು. ಆದರೆ, ಫಲಿತಾಂಶ ಭಾರೀ ವ್ಯತಿರಿಕ್ತವಾಗಿ ಬಂದಿತು. ದೆಹಲಿ ವಿಧಾನಸಭೆಯ ಒಟ್ಟು 70 ಸ್ಥಾನಗಳ ಪೈಕಿ ಅಭೂತಪೂರ್ವವಾಗಿ 67 ಸ್ಥಾನಗಳನ್ನು ಎಎಪಿ ಗೆದ್ದುಕೊಂಡಿತು. ಐತಿಹಾಸಿಕವಾಗಿ ವಿಧಾನಸಭೆಯಲ್ಲಿ ವಿಪಕ್ಷವೇ ಇಲ್ಲದಂತಹ ಸರ್ಕಾರವನ್ನು ರಚಿಸಿತು. ಈ ಪ್ರಮಾಣದ ಭರ್ಜರಿ ಗೆಲುವನ್ನು ಯಾರೂ ಸ್ವತಃ ಎಎಪಿ ಕೂಡ ಊಹಿಸಿರಲಿಲ್ಲ.

2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ ಸಮೀಕ್ಷೆ

ನೋಟು ಅಮಾನ್ಯೀಕರಣದ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಿತು. ನೋಟು ಅಮಾನ್ಯೀಕರಣದಿಂದ ಜನರು ಸಿಟ್ಟಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಜನರು ಬಿಜೆಪಿ ವಿರುದ್ಧ ಮತದಾನ ಚಲಾಯಿಸಿದ್ದಾರೆ. ಅಲ್ಲಿ ಅತಂತ್ರ ವಿಧಾನಸಭೆ ಎದುರಾಗುತ್ತದೆ ಎಂದು ಎಲ್ಲ ಸಮೀಕ್ಷೆಗಳು ಭವಿಷ್ಯ ಹೇಳಿದ್ದವು.

ಆದರೆ, ಬಿಜೆಪಿ ಅಗಾಧವಾದ ಜನ ಬೆಂಬಲ ಪಡೆಯಿತು. ಫಲಿತಾಂಶದಲ್ಲಿ, ಉತ್ತರ ಪ್ರದೇಶದ ಒಟ್ಟು 403 ಸ್ಥಾನಗಳ ಪೈಕಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಬರೋಬ್ಬರಿ 325 ಸ್ಥಾನಗಳನ್ನು ಗೆದ್ದುಕೊಂಡಿತು. ಇದು ಚುನಾವಣೋತ್ತರ ಸಮೀಕ್ಷೆಗಳನ್ನು ಸಂಪೂರ್ಣವಾಗಿ ವಿಫಲಗೊಳಿಸಿತು. ಈ ಚುನಾವಣೆಯಂತೂ ಸಮೀಕ್ಷೆಗಳು ಜನಾಭಿಪ್ರಾಯವನ್ನು ಸಂಗ್ರಹಿಸುವಲ್ಲಿ ಮತ್ತು ಗ್ರಹಿಸುವಲ್ಲಿ ಸಂಪೂರ್ಣ ವಿಫಲವಾಗುತ್ತಿವೆ ಎಂಬುದನ್ನು ಸೂಚಿಸಿತ್ತು.

2023ರ ಛತ್ತೀಸ್‌ಗಢ ವಿಧಾನಸಭಾ ಚುನಾವಣಾ ಸಮೀಕ್ಷೆ

ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಛತ್ತೀಸ್‌ಗಢದಲ್ಲಿ 2023ಕ್ಕೂ ಮುಂಚೆ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಭರ್ಜರಿ ಹಿಡಿತ ಹೊಂದಿದೆ. 2023ರ ಚುನಾವಣೆಯಲ್ಲಿ ಗೆದ್ದು, ಮತ್ತೆ ಸರ್ಕಾರ ರಚಿಸುತ್ತದೆ ಎಂದು ‘ಚುನಾವಣೋತ್ತರ ಸಮೀಕ್ಷೆ’ಗಳು ಹೇಳಿದ್ದವು. ಆದರೆ, ಛತ್ತಿಸ್‌ಗಢದ 90 ಸ್ಥಾನಗಳ ಪೈಕಿ, ಬಿಜೆಪಿ 54 ಸ್ಥಾನಗಳನ್ನು ಗೆದ್ದು, ಕಾಂಗ್ರೆಸ್‌ಅನ್ನು ಸೋಲಿಸಿತು.

2023 ಕರ್ನಾಟಕ ವಿಧಾನಸಭಾ ಚುನಾವಣೆ

ಕರ್ನಾಟಕದಲ್ಲಿ ಕೋವಿಡ್ ವೈದ್ಯಕೀಯ ಉಪಕರಣ ಖರೀದಿ ಹಗರಣ, ಬಿಟ್‌ ಕಾಯಿನ್ ಹಗರಣ, 40% ಕಮಿಷನ್‌ಗಳಿಂದಾಗಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದ ಬಿಜೆಪಿ, 2023ರ ವಿಧಾನಸಭಾ ಚುನಾವಣೆಯಲ್ಲಿ ಸೋಲುತ್ತದೆ ಎಂಬುದು ಖಚಿತವಾಗಿತ್ತು. ಅದಾಗ್ಯೂ, ಹಲವಾರು ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಸೋಲುತ್ತದೆ ಎಂದೇ ಹೇಳಿದ್ದರೂ, ಬಿಜೆಪಿ ಗರಿಷ್ಠ 100 ಸ್ಥಾನಗಳನ್ನು ಗೆಲುತ್ತದೆ. ಕಾಂಗ್ರೆಸ್‌ 120 ಹಾಗೂ ಜೆಡಿಎಸ್‌ 30 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆಗಳು ಹೇಳಿದ್ದವು.

ಇದೆಲ್ಲದರ ನಡುವೆ, ಈದಿನ.ಕಾಮ್‌ ಮಾತ್ರವೇ ಬಿಜೆಪಿ ಹೀನಾಯವಾಗಿ ಸೋಲುತ್ತದೆ. ಕಾಂಗ್ರೆಸ್‌ 135 ಸ್ಥಾನಗಳೊಂದಿಗೆ ಅಭೂತ ಪೂರ್ವ ಗೆಲುವು ಸಾಧಿಸುತ್ತದೆ ಎಂದು ಹೇಳಿತ್ತು.

ಅದೇ ರೀತಿ, ಫಲಿತಾಂಶವು ಈದಿನ.ಕಾಮ್‌ನ ನಿಖರತೆಯನ್ನು ಸಾಬೀತು ಪಡಿಸಿತ್ತು ಮತ್ತು ಇತರ ಸಮೀಕ್ಷೆಗಳನ್ನು ಅಲ್ಲಗಳೆಯಿತು. ಫಲಿತಾಂಶದಲ್ಲಿ ಕಾಂಗ್ರೆಸ್‌ 135 ಸ್ಥಾನಗಳನ್ನು ಗೆದ್ದರೆ, ಬಿಜೆಪಿ 66 ಹಾಗೂ ಜೆಡಿಎಸ್‌ 19 ಸ್ಥಾನಗಳಿಗೆ ಕುಸಿದವು. ಬಿಜೆಪಿ ಹೀನಾಯ ಸೋಲು ಕಂಡಿತು.

ಈ ಉದಾಹರಣೆಗಳು ಎಕ್ಸಿಟ್ ಪೋಲ್‌ಗಳು ಜನಾಭಿಪ್ರಾಯವನ್ನು ಗ್ರಹಿಸುವಲ್ಲಿ ವಿಫಲವಾಗಿವೆ ಎಂಬುದನ್ನು ಎತ್ತಿ ತೋರಿಸುತ್ತವೆ. ಪ್ರಸ್ತುತ ಲೋಕಸಭಾ ಚುನಾವಣೆಯ ಅಂತಿಮ ಫಲಿತಾಂಶಕ್ಕಾಗಿ ದೇಶವು ಕಾಯುತ್ತಿರುವಾಗ, ಈ ‘ಚುನಾವಣೋತ್ತರ ಸಮೀಕ್ಷೆ’ಗಳು ಭಾರೀ ಚರ್ಚೆಯನ್ನು ಹುಟ್ಟುಹಾಕುತ್ತವೆ. ಆದರೆ, ಫಲಿತಾಂಶವು ಬಹುತೇಕ ಈ ಸಮೀಕ್ಷೆಗಳಿಗಿಂತ ವಿಭಿನ್ನವಾಗಿಯೇ ಬರುವ ಸಾಧ್ಯತೆಗಳು ಹೆಚ್ಚಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

Download Eedina App Android / iOS

X