ಉತ್ತರ ಪ್ರದೇಶದ 13 ಕ್ಷೇತ್ರಗಳಲ್ಲಿ ಶನಿವಾರ ಏಳನೇ ಹಂತದ ಲೋಕಸಭೆ ಚುನಾವಣೆ ನಡೆದಿದ್ದು ಈ ಕೊನೆಯ ಹಂತದ ಚುನಾವಣೆ ದಿನ ತಾಪಮಾನ ಏರಿಕೆಯಿಂದಾಗಿ 33 ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ನವದೀಪ್ ರಿನ್ವಾ ಮಾಹಿತಿ ನೀಡಿದ್ದಾರೆ.
ಗೃಹರಕ್ಷಕರು, ನೈರ್ಮಲ್ಯ ಕಾರ್ಯಕರ್ತರು ಮತ್ತು ಇತರ ಚುನಾವಣಾ ಸಿಬ್ಬಂದಿಗಳು ಇದರಲ್ಲಿ ಸೇರಿದ್ದಾರೆ. ಬಲ್ಲಿಯಾ ಲೋಕಸಭಾ ಕ್ಷೇತ್ರದ ಸಿಕಂದರ್‌ಪುರ ಪ್ರದೇಶದ ಮತಗಟ್ಟೆಯೊಂದರಲ್ಲಿ ಮತದಾರ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.
ಮತಗಟ್ಟೆಯಲ್ಲಿ ನಿಂತಿದ್ದ ರಾಮ್ ಬದನ್ ಚೌಹಾಣ್ ಎಂಬ ಮತದಾರರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು, ಅವರನ್ನು ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದಾರೆ.
ಇದನ್ನು ಓದಿದ್ದೀರಾ? ಉತ್ತರ ಪ್ರದೇಶ| ತಾಪಮಾನ ಏರಿಕೆ; 15 ಚುನಾವಣಾ ಸಿಬ್ಬಂದಿ ಸಾವು
ಆಯಾ ಕ್ಷೇತ್ರಗಳಲ್ಲಿ ಚುನಾವಣಾ ಸಿಬ್ಬಂದಿ ಸಾವಿನ ಬಗ್ಗೆ ವರದಿ ಸಲ್ಲಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲಾಡಳಿತದ ಅಧಿಕಾರಿಗಳು ಸಿಬ್ಬಂದಿಯ ಮರಣೋತ್ತರ ಪರೀಕ್ಷೆ ವರದಿಯನ್ನೂ ಸಲ್ಲಿಸಲಿದ್ದಾರೆ ಎಂದು ಸಿಇಒ ರಿನ್ವಾ ತಿಳಿಸಿದ್ದಾರೆ.
I like how you’ve tried (and failed) at framing it as his fault for reporting the incident and not the ECI or the govt for actually letting their poll workers die
— anthropo-obscene (@PartiallyAGhost) June 1, 2024
ಚುನಾವಣಾ ಆಯೋಗದ ಆದೇಶದಂತೆ ಚುನಾವಣಾ ಸಿಬ್ಬಂದಿ ಕುಟುಂಬ ಸದಸ್ಯರಿಗೆ 15 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಹೇಳಿದರು.
ರಮಾಬಾಯಿ ಅಂಬೇಡ್ಕರ್ ಮೈದಾನದಲ್ಲಿ ಇವಿಎಂಗಳ ಕಾವಲು ಕಾಯುತ್ತಿದ್ದ ಪಿಎಸಿ ಕಾನ್‌ಸ್ಟೆಬಲ್ ಶನಿವಾರ ಸಾವನ್ನಪ್ಪಿದ್ದಾರೆ.
ಇದನ್ನು ಓದಿದ್ದೀರಾ? ಉತ್ತರ ಪ್ರದೇಶದಲ್ಲಿ ಅಪಘಾತ: 11 ಮಂದಿ ಸಾವು, 10 ಜನರಿಗೆ ಗಾಯ
ಜೆಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಉಪೇಂದ್ರ ಅಗರ್ವಾಲ್ ಅವರು ಕಾನ್ಸ್‌ಟೇಬಲ್ ಸಾವನ್ನು ಖಚಿತಪಡಿಸಿದ್ದು, ಸ್ಥಳದಲ್ಲಿ ಕರ್ತವ್ಯದಲ್ಲಿರುವ ಅಧಿಕಾರಿಗಳಿಗೆ ಕೂಲರ್‌ಗಳು ಮತ್ತು ಇತರ ಸೌಲಭ್ಯಗಳು ಲಭ್ಯವಿದೆ. ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಹೇಳಿದರು.
ಏಳನೇ ಹಂತದಲ್ಲಿ, ಉತ್ತರ ಪ್ರದೇಶದ ಮಹಾರಾಜ್‌ಗಂಜ್, ಗೋರಖ್‌ಪುರ, ಕುಶಿನಗರ, ಡಿಯೋರಿಯಾ, ಬನ್ಸ್‌ಗಾಂವ್ (ಎಸ್‌ಸಿ), ಘೋಸಿ, ಸೇಲಂಪುರ, ಬಲ್ಲಿಯಾ, ಗಾಜಿಪುರ, ಚಂದೌಲಿ, ವಾರಣಾಸಿ, ಮಿರ್ಜಾಪುರ ಮತ್ತು ರಾಬರ್ಟ್ಸ್‌ಗಂಜ್‌ನಲ್ಲಿ (ಎಸ್‌ಸಿ) ಮತದಾನ ನಡೆಯಿತು.
ಚುನಾವಣಾ ಆಯೋಗವು ಈ ಹಂತದಲ್ಲಿ 1,08,349 ಚುನಾವಣಾ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿತ್ತು.