ಲೋಕಸಭಾ ಚುನಾವಣೆ ಮತ ಎಣಿಕೆ ನಡೆಯುತ್ತಿದೆ. ಪ್ರಧಾನಿ ಮೋದಿ ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು, ಆರಂಭಿಕ ಎಣಿಕೆಯಲ್ಲಿ ಪ್ರಧಾನಿ ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ, ಇದೀಗ ಹಿನ್ನಡೆ ಅನುಭವಿಸಿದ್ದಾರೆ. ಅವರ ವಿರುದ್ಧ ಕಾಂಗ್ರೆಸ್ನಿಂದ ಸ್ಪರ್ಧಿಸಿರುವ ಅಜಯ್ ರಾಯ್ ಮುನ್ನಡೆ ಸಾಧಿಸಿದ್ದಾರೆ.
ಜಿದ್ದಾಜಿದ್ದಿನ ಪೈಪೋಟಿ ಎದುರಿಸುತ್ತಿರುವ ಮೋದಿ, 1,600 ಮತಗಳಿಂದ ಹಿನ್ನಡೆ ಸಾಧಿಸಿದ್ದಾರೆ. ಅಜಯ್ ರಾಯ್ ಮುನ್ನಡೆಯಲ್ಲಿದ್ದಾರೆ. ಬಿಎಸ್ಪಿಯಿಂದ ಅಥರ್ ಜಮಾಲ್ ಲಾರಿ ಅವರೂ ಕೂಡ ಕಣದಲ್ಲಿದ್ದು, ಮೂರನೇ ಸ್ಥಾನದಲ್ಇದ್ದಾರೆ.
2014 ಮತ್ತು 2019ರಲ್ಲಿ ವಾರಣಾಸಿಯಲ್ಲಿ ಗೆದ್ದಿದ್ದ ಮೋದಿ, ಮೂರನೇ ಬಾರಿಯ ಗೆಲುವಿಗಾಗಿ ಹೋರಾಟ ನಡೆಸುತ್ತಿದ್ದಾರೆ. 2019ರಲ್ಲಿ, ಮೋದಿ 6.74 ಲಕ್ಷ ಮತಗಳನ್ನು ಗಳಿಸಿ, ಸಮಾಜವಾದಿ ಪಕ್ಷದ ಶಾಲಿನಿ ಯಾದವ್ ಅವರನ್ನು ಸೋಲಿಸಿದ್ದರು.