“ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ರಾಷ್ಟ್ರವನ್ನು ಮುನ್ನಡೆಸಬೇಕು ಎಂಬುವುದು ದೇಶದ ಆಶಯ” ಎಂದು ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಹೇಳಿದ್ದಾರೆ.
ಏಳು ಹಂತಗಳಲ್ಲಿ ನಡೆದ ಲೋಕಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು 290 ಕ್ಷೇತ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು 228 ಕ್ಷೇತ್ರದಲ್ಲಿ ಇಂಡಿಯಾ ಮೈತ್ರಿಕೂಟ ಮುನ್ನಡೆಯಲ್ಲಿದೆ.
ಇದನ್ನು ಓದಿದ್ದೀರಾ? ಲೋಕಸಭೆ ಚುನಾವಣೆ: ರಾಯ್‌ಬರೇಲಿ, ವಯನಾಡಿನಲ್ಲಿ ರಾಹುಲ್ ಗಾಂಧಿ ಮುನ್ನಡೆ
ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರುವ ಭರವಸೆಯನ್ನು ವ್ಯಕ್ತಪಡಿಸಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಕಾಂಗ್ರೆಸ್‌ನಿಂದಲೇ ಪ್ರಧಾನಿಯನ್ನು ಆಯ್ಕೆ ಮಾಡುವ ಪ್ರಸ್ತಾಪ ಮಾಡಿದ್ದಾರೆ.
#WATCH | Mumbai: Shiv Sena (UBT) leader Sanjay Raut says, “If Congress crosses the mark of 100 Lok Sabha seats, INDIA alliance will come to power…The Congress party could even reach the mark of 150 Lok Sabha seats…If Congress emerges as the biggest party, the Prime Minister… pic.twitter.com/GgT1yHLb5I
— ANI (@ANI) June 4, 2024
“ಕಾಂಗ್ರೆಸ್ 100 ಲೋಕಸಭಾ ಸ್ಥಾನಗಳ ಗಡಿ ದಾಟಿದರೆ, ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್ 150 ಲೋಕಸಭಾ ಸ್ಥಾನಗಳ ಗಡಿಯನ್ನು ತಲುಪಿದರೆ ಅತಿ ದೊಡ್ಡ ಪಕ್ಷವಾದ ಕಾಂಗ್ರೆಸ್‌ನಿಂದ ಪ್ರಧಾನಿ ಆಯ್ಕೆ ಮಾಡಲಾಗುತ್ತದೆ. ರಾಹುಲ್ ಗಾಂಧಿ ರಾಷ್ಟ್ರವನ್ನು ಮುನ್ನಡೆಸಬೇಕು ಎಂಬುದು ರಾಷ್ಟ್ರದ ಆಶಯ” ಎಂದು ಹೇಳಿದ್ದಾರೆ.
“ರಾಹುಲ್ ಗಾಂಧಿ ಅವರ ನಾಯಕತ್ವದಿಂದ ಈ ಚುನಾವಣೆಯ ಫಲಿತಾಂಶ ಬರುತ್ತಿದೆ. ಕಾಂಗ್ರೆಸ್ 150 ಸ್ಥಾನಗಳಲ್ಲಿಯೂ ಗೆಲುವು ಸಾಧಿಸಬಹುದು. ಹೀಗಾದರೆ ದೇಶದ ಚಿತ್ರಣವೇ ಬದಲಾಗುತ್ತದೆ” ಎಂದು ಸಂಜಯ್ ರಾವತ್ ತಿಳಿಸಿದ್ದಾರೆ.
Who is next PM #ElectionsResults #400Paar #लोकसभा_आमचुनाव_2024 #INDIA_सरकार_है_तैयार #India_जीत_रहा_है
🔁🔁 For Rahul Gandhi 🔁🔁
❤️❤️ For Narendra Modi❤️❤️— Bhajan Dhaka (@Bhajan__dhaka) June 4, 2024
“ಕಾಂಗ್ರೆಸ್ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ ಪ್ರಧಾನಿ ಅವರ ಪಕ್ಷದಿಂದಲೇ ಆಗುತ್ತಾರೆ. ಇದು ದೇಶದ ಇಚ್ಛೆಯಾಗಿರುತ್ತದೆ. ರಾಹುಲ್ ಗಾಂಧಿ ಅವರ ಸಂಘರ್ಷವನ್ನು ನೋಡಿದಾಗ ಅವರೇ ದೇಶವನ್ನು ಮುನ್ನಡೆಸಬೇಕೆಂದು ಅನಿಸುತ್ತದೆ” ಎಂದು ಅಭಿಪ್ರಾಯಿಸಿದರು.