ಲೋಕಸಭಾ ಚುನಾವಣೆಯ ಫಲಿತಾಂಶ ಘೋಷಣೆಯಾಗಿದೆ. ಬಿಜೆಪಿ ನೇತೃತ್ವದ ಎನ್ಡಿಎ 292 ಸ್ಥಾನಗಳನ್ನು ಹಾಗೂ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ 232 ಸ್ಥಾನಗಳನ್ನು ಗೆದ್ದಿವೆ. ಇತರರು 19 ಸ್ಥಾನಗಳನ್ನು ಗೆದ್ದಿದ್ದಾರೆ.
ಲೋಕಸಭೆಯು 543 ಸ್ಥಾನಗಳನ್ನು ಹೊಂದಿದ್ದು, ಗುಜರಾತ್ನ ಸೂರತ್ನಲ್ಲಿ ಬಿಜೆಪಿ ಅಭ್ಯರ್ಥಿ ಮುಖೇಶ್ ದಲಾಲ್ ಅವಿರೋಧವಾಗಿ ಆಯ್ಕೆಯಾಗಿದ್ದ ಹಿನ್ನೆಲೆ, ಮಂಗಳವಾರ 542 ಕ್ಷೇತ್ರಗಳಿಗೆ ಮತ ಎಣಿಕೆ ನಡೆದಿದೆ.
ಚುನಾವಣಾ ಆಯೋಗವು ಎಲ್ಲ ಪಕ್ಷಗಳು ಗೆದ್ದಿರುವ ಅಂಕಿಅಂಶವನ್ನು ಬಿಡುಗಡೆ ಮಾಡಿದ್ದು, ಎನ್ಡಿಎ ನೇತೃತ್ವ ವಹಿಸಿರುವ ಬಿಜೆಪಿ 240 ಸ್ಥಾನಗಳನ್ನು ಗೆದ್ದಿದೆ. ‘ಇಂಡಿಯಾ’ವನ್ನು ಮುನ್ನಡೆಸುತ್ತಿರುವ ಕಾಂಗ್ರೆಸ್ 99 ಸ್ಥಾನಗಳನ್ನು ಗೆದ್ದುಕೊಂಡಿದೆ.
ಚುನಾವಣಾ ಆಯೋಗದ ವೆಬ್ಸೈಟ್ ಪ್ರಕಾರ ಲೋಕಸಭೆ ಚುನಾವಣೆಯಲ್ಲಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಕ್ಷಗಳು ಗೆದ್ದಿರುವ ಸ್ಥಾನಗಳ ಸಂಖ್ಯೆ ಕೆಳಗಿನಂತಿದೆ;
ಬಿಜೆಪಿ – 240
ಕಾಂಗ್ರೆಸ್ – 99
ಸಮಾಜವಾದಿ ಪಕ್ಷ – 37
ಟಿಎಂಸಿ – 29
ಡಿಎಂಕೆ – 22
ತೆಲುಗು ದೇಶಂ ಪಕ್ಷ – 16
ಜೆಡಿಯು – 12
ಶಿವಸೇನೆ (ಉದ್ಧವ್ ಬಣ) – 9
ಎನ್ಸಿಪಿ (ಶರದ್ ಪವಾರ್) – 8
ಶಿವಸೇನೆ – 7
ಎಲ್ಜೆಪಿ (ರಾಮ್ ವಿಲಾಸ್) – 5
ವೈಎಸ್ಆರ್ಸಿಪಿ – 4
ಆರ್ಜೆಡಿ – 4
ಸಿಪಿಐ(ಎಂ) – 4
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ – 3
ಎಎಪಿ – 3
ಜಾರ್ಖಂಡ್ ಮುಕ್ತಿ ಮೋರ್ಚಾ – 3
ಜನಸೇನಾ ಪಕ್ಷ – 2
ಸಿಪಿಐ(ಎಂಎಲ್) ಲಿಬರೇಷನ್ – 2
ಜೆಡಿ(ಎಸ್) – 2
ವಿದುತಲೈ ಚಿರುತೈಗಲ್ ಕಚ್ಚಿ – 2
ಸಿಪಿಐ – 2
ರಾಷ್ಟ್ರೀಯ ಲೋಕದಳ – 2
ನ್ಯಾಷನಲ್ ಕಾನ್ಫರೆನ್ಸ್ – 2
ಯುನೈಟೆಡ್ ಪೀಪಲ್ಸ್ ಪಾರ್ಟಿ, ಲಿಬರಲ್ – 1
ಅಸೋಮ್ ಗಣ ಪರಿಷತ್ – 1
ಹಿಂದೂಸ್ತಾನಿ ಅವಾಮ್ ಮೋರ್ಚಾ (ಸೆಕ್ಯುಲರ್) – 1
ಕೇರಳ ಕಾಂಗ್ರೆಸ್ – 1
ಕ್ರಾಂತಿಕಾರಿ ಸಮಾಜವಾದಿ ಪಕ್ಷ – 1
ಎನ್ಸಿಪಿ – 1
ಜನರ ಪಕ್ಷದ ಧ್ವನಿ – 1
ಜೋರಾಮ್ ಪೀಪಲ್ಸ್ ಮೂವ್ಮೆಂಟ್ – 1
ಶಿರೋಮಣಿ ಅಕಾಲಿದಳ – 1
ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ – 1
ಭಾರತ್ ಆದಿವಾಸಿ ಪಕ್ಷ – 1
ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ – 1
ಮರುಮಲಾರ್ಚಿ ದ್ರಾವಿಡ ಮುನ್ನೇತ್ರ ಕಳಗಂ – 1
ಆಜಾದ್ ಸಮಾಜ ಪಕ್ಷ (ಕಾನ್ಶಿ ರಾಮ್) – 1
ಅಪ್ನಾ ದಾಲ್ (ಸೋನಿಲಾಲ್) – 1
ಎಜೆಎಸ್ಯು ಪಕ್ಷ – 1
ಎಐಎಂಐಎಂ – 1
ಪಕ್ಷೇತರರು – 7