ಬಿಜೆಪಿ ಸ್ವತಂತ್ರ್ಯವಾಗಿ ಸರ್ಕಾರ ರಚಿಸುವಷ್ಟು ಬಲ ಹೊಂದಿಲ್ಲದ ಕಾರಣ ಸದ್ಯ ಮೈತ್ರಿ ಪಕ್ಷದ ಮೇಲೆ ಅವಲಂಭಿಸಿದ್ದು ಇದನ್ನು ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ರಾಜಕಾರಣಿ ಕಪಿಲ್ ಸಿಬಲ್ ಲೇವಡಿ ಮಾಡಿದ್ದಾರೆ. ದೇವರೊಂದಿಗೆ ಯಾರಾದರೂ ಮೈತ್ರಿಮಾಡಿಕೊಳ್ಳಬಹುದೇ ಎಂದು ವ್ಯಂಗ್ಯವಾಡಿದ್ದಾರೆ.
ಈ ಹಿಂದೆ ನರೇಂದ್ರ ಮೋದಿ ಮಾಧ್ಯಮದೊಂದಿಗೆ ಮಾತನಾಡುತ್ತಾ, “ನಾನು ಜೈವಿಕವಾಗಿ ಜನಿಸಿಲ್ಲ, ದೇವರೇ ನನ್ನನ್ನು ಕಳುಹಿಸಿದ್ದು” ಎಂದು ಹೇಳಿದ್ದರು. ಇದು ಸಾಕಷ್ಟು ಟ್ರೋಲ್ ಕೂಡಾ ಆಗಿತ್ತು. ಇನ್ನೊಂದೆರಡು ವರ್ಷವಾದರೆ ಮೋದಿ ತಾನೇ ದೇವರು ಅನ್ನುತ್ತಾರೆ ಎಂದು ನೆಟ್ಟಿಗರು ಅಭಿಪ್ರಾಯಿಸಿದ್ದರು.
ಇದನ್ನು ಓದಿದ್ದೀರಾ? ‘ನಾನು ಜೈವಿಕವಾಗಿ ಜನಿಸಿಲ್ಲ, ಪರಮಾತ್ಮನೇ ನನ್ನನ್ನು ಕಳುಹಿಸಿದ್ದು’ ಎಂದ ಪ್ರಧಾನಿ ಮೋದಿ!
ಮೋದಿಯ ಈ ಹೇಳಿಕೆಗೆ ಪರೋಕ್ಷವಾಗಿ ಲೇವಡಿ ಮಾಡಿರುವ ಹಿರಿಯ ರಾಜಕಾರಣಿ ಕಪಿಲ್ ಸಿಬಲ್, “ಮೋದಿ ಅವರೇ ನಾನು ಕೇಳುತ್ತೇನೆ, ಭಗವಂತನ ಜೊತೆ ಯಾರಾದರೂ ಮೈತ್ರಿಮಾಡಿಕೊಳ್ಳಬಹುದೇ” ಎಂದು ಮೋದಿ ಕಾಲೆಳೆದಿದ್ದಾರೆ.
Modiji
Main poochta hoon ?
Kya Bhagwan ke saath koeee coalition kar sakta hai ?
— Kapil Sibal (@KapilSibal) June 6, 2024
“ನನ್ನ ತಾಯಿ ಜೀವಂತವಾಗಿರುವವರೆಗೂ ನಾನು ಜೈವಿಕವಾಗಿ ಜನಿಸಿದ್ದೇನೆ ಎಂದು ನಾವು ನಂಬಿದ್ದೆ. ನನ್ನ ತಾಯಿ ಮರಣ ಹೊಂದಿದ ಬಳಿಕ ನಾನು ನನ್ನ ಎಲ್ಲಾ ಅನುಭವಗಳನ್ನು ಜೊತೆಗೂಡಿಸಿ ನೋಡುತ್ತೇನೆ. ನನ್ನನ್ನು ಪರಮಾತ್ಮನೇ ಕಳುಹಿಸಿದ್ದು ಎಂದು ನನಗೆ ಮನವರಿಕೆಯಾಗಿದೆ” ಎಂದು ಮೋದಿ ಈ ಹಿಂದೆ ಮೋದಿ ಹೇಳಿದ್ದರು.
ಇನ್ನು ಮೋದಿ ನೇತೃತ್ವದ ನೂತನ ಸರ್ಕಾರವನ್ನು ಲೇವಡಿ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ “ಈಗ ಮೋದಿ 3.0 ಸರ್ಕಾರ ರಚನೆಯಾಗಲಿದೆ ಎಂದು ಮತ್ತೆ ಮತ್ತೆ ಹೇಳಲಾಗುತ್ತಿದೆ. ಆದರೆ ವಾಸ್ತವವೆಂದರೆ ಈ ಬಾರಿ ಮೋದಿ 1/3ನೇ ಸರ್ಕಾರ” ಎಂದು ಲೇವಡಿ ಮಾಡಿದ್ದಾರೆ.
<blockquote class=”twitter-tweet”><p lang=”hi” dir=”ltr”>बार बार दावा किया जा रहा है कि अब मोदी ३.० सरकार बनेगी।<br>हक़ीक़त यह है कि अबकी बार मोदी १/३ सरकार।</p>— Jairam Ramesh (@Jairam_Ramesh) <a href=”https://twitter.com/Jairam_Ramesh/status/1798562418098159716?ref_src=twsrc%5Etfw”>June 6, 2024</a></blockquote> <script async src=”https://platform.twitter.com/widgets.js” charset=”utf-8″></script>
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 293 ಸ್ಥಾನಗಳನ್ನು ಗಳಿಸಿದ್ದು ನರೇಂದ್ರ ಮೋದಿ ಅವರು ಜೂನ್ 8ರಂದು ಮೂರನೇ ಅವಧಿಗೆ ಪ್ರಧಾನಿಯಾಗಲಿದ್ದಾರೆ. ಆದರೆ ಬಿಜೆಪಿ ಈ ಹಿಂದಿನ 2019ರ ಚುನಾವಣೆಯಲ್ಲಿ ಗಳಿಸಿದ್ದಕ್ಕಿಂತ ಅತೀ ಕಡಿಮೆ ಮತಗಳನ್ನು ಮತ್ತು ಲೋಕಸಭೆ ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ.
ಆದರೆ ಇಂಡಿಯಾ ಒಕ್ಕೂಟವು ನಿರೀಕ್ಷೆಗಿಂತ ಅಧಿಕ ಸ್ಥಾನಗಳನ್ನು ಪಡೆದುಕೊಂಡು ಪ್ರಬಲ ವಿಪಕ್ಷಗಳ ಮೈತ್ರಿಕೂಟವಾಗಿದೆ. ಲೋಕಸಭೆ ಫಲಿತಾಂಶಗಳನ್ನು ನರೇಂದ್ರ ಮೋದಿ ವಿರುದ್ಧದ ದೊಡ್ಡ ಜನಾದೇಶ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.