ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರನೌತ್ ಅವರಿಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಸಿಬ್ಬಂದಿಯೊಬ್ಬರು ಕಪಾಳ ಮೋಕ್ಷ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಘಟನೆ ಬಗ್ಗೆ ಕಂಗನಾ ರನೌತ್ ಅವರೇ ಆರೋಪ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಾಲಿವುಡ್ ನಟಿ ಕಂಗನಾ ರನೌತ್ ಇತ್ತೀಚಿಗಷ್ಟೆ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು.
ಕಂಗನಾಗೆ ಹಲ್ಲೆಯಾಗಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಚಂಡೀಗಢದಿಂದ ದೆಹಲಿಗೆ ಯುಕೆ707 ವಿಮಾನದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಸಿಐಎಸ್‌ಎಫ್ ಸಿಬ್ಬಂದಿ ಕುಲ್ವಿಂದರ್ ಕೌರ್ ಕಪಾಳ ಮೋಕ್ಷ ಮಾಡಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ.
This is Kulwinder Kaur, the CISF officer posted at Chandigarh airport who allegedly slapped actor and BJP MP #KanganaRanaut today. The incident occurred around 3:30 pm when Kangana was about to board a flight to Delhi. Kaur was allegedly upset with Kangana over the actor’s… pic.twitter.com/0NV9DOXLCZ
— Neha Khanna (@nehakhanna_07) June 6, 2024
ಈ ಹಿಂದೆ ರೈತರ ಪ್ರತಿಭಟನೆಯ ಬಗ್ಗೆ ನೀಡಿದ್ದ ಹೇಳಿಕೆಯ ಬಗ್ಗೆ ಸಿಐಎಸ್‌ಎಫ್ ಸಿಬ್ಬಂದಿ ಆಕೆಯನ್ನು ಕಂಡಾಗ ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದಿದ್ದರಿಂದ ಆಕ್ರೋಶಗೊಂಡ ಚಂಡೀಗಢ ಏರ್‌ಪೋರ್ಟಿನ ಸಿಐಎಸ್‌ಎಫ್ ಸಿಬ್ಬಂದಿ ಕುಲ್ವಿಂದರ್ ಕೌರ್ ಕಪಾಳಮೋಕ್ಷ ಮಾಡಿದ್ದಾರೆ ಎಂದು ವರದಿಯಾಗಿದೆ.
ಆನಂತರ ಅವರು, ನಾನು ಏಕೆ ಕಂಗಾನ ಮುಖಕ್ಕೆ ಬಾರಿಸಿದ್ದು ಅಂದರೆ, ಅಂದು ರೈತರ ಆಂದೋಲನದ ಸಂದರ್ಭದಲ್ಲಿ ಆಂದೋಲನದಲ್ಲಿ ಭಾಗವಹಿಸಿದ ರೈತರ ಕುರಿತು 100 ರೂಪಾಯಿ ಆಸೆಗಾಗಿ ಬಂದವರು ಎಂದು ಈಕೆ ಹೇಳಿಕೆ ನೀಡಿದ್ದಳು. ಅಂದು ನನ್ನ ತಾಯಿಯೂ ಆಂದೋಲನದಲ್ಲಿ ಭಾಗವಹಿಸಿದ್ದರು. ಹಾಗಾಗಿ ಬಾರಿಸಿದೆ ಎಂದಿದ್ದಾರೆ.
Shocking rise in terror and violence in Punjab…. pic.twitter.com/7aefpp4blQ
— Kangana Ranaut (Modi Ka Parivar) (@KanganaTeam) June 6, 2024
ಕಪಾಳಮೋಕ್ಷಗೈದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಿಐಎಸ್‌ಎಫ್ ಸಿಬ್ಬಂದಿ ಕುಲ್ವಿಂದರ್ ಕೌರ್ ಅವರನ್ನು ಅಮಾನತು ಮಾಡಲಾಗಿದ್ದು, ಇಲಾಖಾ ತನಿಖೆಗೆ ನಿರ್ದೇಶನ ನೀಡಲಾಗಿದೆ ಎಂದು ವರದಿಯಾಗಿದೆ.
ಘಟನೆಯ ನಂತರ ಸಾಮಾಜಿಕ ಮಾಧ್ಯಮದಲ್ಲಿ ಮಾತನಾಡಿರುವ ಕಂಗನಾ ರನೌತ್, “ನಾನು ಸುರಕ್ಷಿತವಾಗಿದ್ದೇನೆ. ಚಂಡೀಗಢ ವಿಮಾನ ನಿಲ್ದಾಣದಲ್ಲಿ ಇಂದು ಭದ್ರತಾ ಪರಿಶೀಲನೆಯ ವೇಳೆ ಈ ಘಟನೆ ನಡೆದಿದೆ. ಭದ್ರತಾ ಪರಿಶೀಲನೆಯ ನಂತರ ನಾನು ವಾಪಸ್ ಬರುತ್ತಿದ್ದಾಗ ದ್ವಿತೀಯ ಕ್ಯಾಬಿನ್‌ನಲ್ಲಿದ್ದ ಸಿಐಎಸ್‌ಎಫ್ ಸಿಬ್ಬಂದಿಯಾಗಿದ್ದ ಮಹಿಳೆಯೊಬ್ಬರು ನನ್ನ ಕೆನ್ನೆ ಬಾರಿಸಿ ನಿಂದಿಸುವುದಕ್ಕೆ ಶುರು ಮಾಡಿದರು. ನಾನು ಏಕೆ ಈ ರೀತಿ ಮಾಡಿದೆ ಎಂದು ಕೇಳಿದಾಗ ನಾನು ರೈತರ ಪ್ರತಿಭನೆಯನ್ನು ಬೆಂಬಲಿಸಿ ಈ ರೀತಿ ಮಾಡಿರುವುದಾಗಿ ಹೇಳಿದರು. ನಾನು ಸುರಕ್ಷಿತವಾಗಿದ್ದು, ಪಂಜಾಬ್‌ನಲ್ಲಿ ಉಗ್ರಗಾಮಿಗಳು ಹಾಗೂ ವಿಧ್ವಂಸಕ ಕೃತ್ಯವೆಸಗುವವರು ಹೆಚ್ಚುತ್ತಿರುವ ಬಗ್ಗೆ ನಾನು ಕಳವಳಗೊಂಡಿದ್ದೇನೆ” ಎಂದು ತಿಳಿಸಿದ್ದಾರೆ.
Kangana Ranaut slapped by CISF constable Kulwinder Kaur at Chandigarh airport for calling protesting farmers Khalistanis.#KanganaRanaut
— Siddharth (@SidKeVichaar) June 6, 2024

ಮೋದೀಜಿ ಈಗ ಹೇಳಬಹುದು ತಪ್ಪು ಮಾಡಿದರೆ ಶಿಕ್ಷೆ ಆಗಲೇಬೇಕು ಎಂದು.