ಬಾಲಿವುಡ್ ನಟಿ, ಬಿಜೆಪಿಯ ನೂತನ ಸಂಸದೆ ಕಂಗನಾ ರನೌತ್ ಅವರಿಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಿಐಎಸ್ಎಫ್ ಸಿಬ್ಬಂದಿಯೊಬ್ಬರು ಕಪಾಳ ಮೋಕ್ಷ ಮಾಡಿರುವ ಘಟನೆ ವರದಿಯಾಗಿತ್ತು.
ಈ ಘಟನೆ ಬಗ್ಗೆ ಕಂಗನಾ ರನೌತ್ ಅವರು ಕೂಡ ವಿಡಿಯೋ ಮೂಲಕ ನೇರ ಆರೋಪ ಮಾಡಿದ್ದರು. ಕಪಾಳಮೋಕ್ಷಗೈದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಿಐಎಸ್ಎಫ್ ಸಿಬ್ಬಂದಿ ಕುಲ್ವಿಂದರ್ ಕೌರ್ ಅವರನ್ನು ಅಮಾನತು ಮಾಡಲಾಗಿದ್ದು, ಇಲಾಖಾ ತನಿಖೆಗೆ ನಿರ್ದೇಶನ ನೀಡಲಾಗಿದೆ. ಈಗ ಈ ಘಟನೆಗೆ ಸಂಬಂಧಿಸಿದಂತೆ ಹಲವು ಬೆಳವಣಿಗೆಗಳು ನಡೆಯುತ್ತಿದೆ.
ಕಂಗನಾ ರನೌತ್ ಅವರಿಗೆ ಕಪಾಳಮೋಕ್ಷಗೈದಿರುವ ಸಿಐಎಸ್ಎಫ್ನ ಮಹಿಳಾ ಸಿಬ್ಬಂದಿ ಕುಲ್ವಿಂದರ್ ಕೌರ್ ಅವರಿಗೆ ಪಂಜಾಬ್ನ ಉದ್ಯಮಿಯೊಬ್ಬರು ಒಂದು ಲಕ್ಷ ಬಹುಮಾನ ಘೋಷಿಸಿದ್ದಾರೆ. ಅಲ್ಲದೇ, ಈ ಬಗ್ಗೆ ವಿಡಿಯೋವೊಂದನ್ನು ಕೂಡ ಬಿಡುಗಡೆಗೊಳಿಸಿದ್ದಾರೆ.
Zirakpur (Mohali)-based businessman Shivraj Singh Bains announced he would give one lakh rupees to CISF constable Kulvinder Kaur, who slapped MP Kangana Ranaut at Chandigarh airport. #KanganaRanaut pic.twitter.com/QV9CHDAnop
— Gagandeep Singh (@Gagan4344) June 6, 2024
“ಚಂಡೀಗಢ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಸಂಸದೆ, ನಟಿ ಕಂಗನಾ ರನೌತ್ಗೆ ಕಪಾಳಮೋಕ್ಷ ಮಾಡಿದ ಸಿಐಎಸ್ಎಫ್ ಕಾನ್ಸ್ಟೆಬಲ್ ಕುಲ್ವಿಂದರ್ ಕೌರ್ಗೆ ಜಿರಾಕ್ಪುರ (ಮೊಹಾಲಿ) ಮೂಲದ ಉದ್ಯಮಿ ಶಿವರಾಜ್ ಸಿಂಗ್ ಬೈನ್ಸ್ ಒಂದು ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ” ಎಂದು ಉದ್ಯಮಿ ಬಿಡುಗಡೆಗೊಳಿಸಿರುವ ವಿಡಿಯೋವನ್ನು ಹಂಚಿಕೊಳ್ಳುತ್ತಾ ಪತ್ರಕರ್ತ ಗಗನ್ ದೀಪ್ ಸಿಂಗ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೋದಲ್ಲಿ ಉದ್ಯಮಿ ಶಿವರಾಜ್ ಸಿಂಗ್ ಬೈನ್ಸ್ ಅವರು, ಸಿಐಎಸ್ಎಫ್ ಕಾನ್ಸ್ಟೆಬಲ್ ಕುಲ್ವಿಂದರ್ ಕೌರ್ ಅವರು ಕಂಗನಾ ರನೌತ್ಗೆ ಕಪಾಳಮೋಕ್ಷ ಮಾಡಿರುವುದರಿಂದ ಮನಸ್ಸಿಗೆ ತುಂಬಾ ಖುಷಿಯಾಗಿದೆ. ಯಾಕೆಂದರೆ ಪಂಜಾಬ್ನವರನ್ನು ಅವಮಾನಿಸಿದ್ದಕ್ಕೆ ಸರಿಯಾದ ಬುದ್ಧಿ ಕಲಿಸಿದ್ದಾರೆ. ಪಂಜಾಬ್ನವರ ಪರವಾಗಿ ನಾನು ಆಕೆಗೆ ಒಂದು ಲಕ್ಷ ರೂಪಾಯಿಯನ್ನು ಬಹುಮಾನವಾಗಿ ನೀಡುತ್ತೇನೆ” ಎಂದಿದ್ದಾರೆ.
Farmer Leader Sher Singh Mahiwal, brother of CISF personnel Kulvinder Kaur, spoke to the media. He said the argument started during the checking and stated that whatever his sister did, they stand by her. #KanganaRanaut pic.twitter.com/FBagQJTXPd
— Gagandeep Singh (@Gagan4344) June 6, 2024
ಈ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಪಂಜಾಬ್ನ ರೈತ ಮುಖಂಡ ಹಾಗೂ ಸಿಐಎಸ್ಎಫ್ ಸಿಬ್ಬಂದಿ ಕುಲ್ವಿಂದರ್ ಕೌರ್ ಅವರ ಸಹೋದರ ಶೇರ್ ಸಿಂಗ್ ಮಹಿವಾಲ್, “ನಮಗೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಕಂಗನಾ ರನೌತ್ ಅವರು ತಪಾಸಣೆಯ ಸಂದರ್ಭದಲ್ಲಿ ಸಹೋದರಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಈ ಬೆಳವಣಿಗೆ ನಡೆದಿದೆ. ನನ್ನ ಸಹೋದರಿ ಏನು ಮಾಡಿದ್ದರೂ ಕೂಡ ಸರಿಯಾಗಿದೆ. ನಾನು ಅವಳ ಪರವಾಗಿ ನಿಲ್ಲುತ್ತೇನೆ” ಎಂದು ಹೇಳಿದ್ದಾರೆ.
ಏನಿದು ಘಟನೆ?
ಬಾಲಿವುಡ್ ನಟಿ ಕಂಗನಾ ರನೌತ್ ಇತ್ತೀಚಿಗಷ್ಟೆ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು. ಚಂಡೀಗಢದಿಂದ ದೆಹಲಿಗೆ ಯುಕೆ707 ವಿಮಾನದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಸಿಐಎಸ್ಎಫ್ ಸಿಬ್ಬಂದಿ ಕುಲ್ವಿಂದರ್ ಕೌರ್ ಕಪಾಳ ಮೋಕ್ಷ ಮಾಡಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ.
ಈ ಹಿಂದೆ ರೈತರ ಪ್ರತಿಭಟನೆಯ ಬಗ್ಗೆ ನೀಡಿದ್ದ ಹೇಳಿಕೆಯ ಬಗ್ಗೆ ಸಿಐಎಸ್ಎಫ್ ಸಿಬ್ಬಂದಿ ಆಕೆಯನ್ನು ಕಂಡಾಗ ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದಿದ್ದರಿಂದ ಆಕ್ರೋಶಗೊಂಡ ಚಂಡೀಗಢ ಏರ್ಪೋರ್ಟಿನ ಸಿಐಎಸ್ಎಫ್ ಸಿಬ್ಬಂದಿ ಕುಲ್ವಿಂದರ್ ಕೌರ್ ಕಪಾಳಮೋಕ್ಷ ಮಾಡಿದ್ದಾರೆ ಎಂದು ವರದಿಯಾಗಿದೆ.
BIG BREAKING ⚡
Kangana Ranaut slapped by a lady CISF officer at Chandigarh airport.
Brave CISF officer was reportedly upset over her Anti-Farmer remarks.
Sheran Di Kaum Punjabi 🔥 pic.twitter.com/V6ZCgnoFIv
— Ankit Mayank (@mr_mayank) June 6, 2024
ಆನಂತರ ಅವರು, “ನಾನು ಏಕೆ ಕಂಗಾನ ಮುಖಕ್ಕೆ ಬಾರಿಸಿದ್ದು ಅಂದರೆ, ಅಂದು ರೈತರ ಆಂದೋಲನದ ಸಂದರ್ಭದಲ್ಲಿ ಆಂದೋಲನದಲ್ಲಿ ಭಾಗವಹಿಸಿದ ರೈತರ ಕುರಿತು 100 ರೂಪಾಯಿ ಆಸೆಗಾಗಿ ಬಂದವರು ಎಂದು ಈಕೆ ಹೇಳಿಕೆ ನೀಡಿದ್ದಳು. ಅಂದು ನನ್ನ ತಾಯಿಯೂ ಆಂದೋಲನದಲ್ಲಿ ಭಾಗವಹಿಸಿದ್ದರು. ಹಾಗಾಗಿ ಬಾರಿಸಿದೆ” ಎಂದಿದ್ದಾರೆ.
ಕಪಾಳಮೋಕ್ಷಗೈದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಿಐಎಸ್ಎಫ್ ಸಿಬ್ಬಂದಿ ಕುಲ್ವಿಂದರ್ ಕೌರ್ ಅವರನ್ನು ಅಮಾನತು ಮಾಡಲಾಗಿದ್ದು, ಇಲಾಖಾ ತನಿಖೆಗೆ ನಿರ್ದೇಶನ ನೀಡಲಾಗಿದೆ ಎಂದು ವರದಿಯಾಗಿದೆ.
ಘಟನೆಯ ನಂತರ ಸಾಮಾಜಿಕ ಮಾಧ್ಯಮದಲ್ಲಿ ಮಾತನಾಡಿರುವ ಕಂಗನಾ ರನೌತ್, “ನಾನು ಸುರಕ್ಷಿತವಾಗಿದ್ದೇನೆ. ಚಂಡೀಗಢ ವಿಮಾನ ನಿಲ್ದಾಣದಲ್ಲಿ ಇಂದು ಭದ್ರತಾ ಪರಿಶೀಲನೆಯ ವೇಳೆ ಈ ಘಟನೆ ನಡೆದಿದೆ. ಭದ್ರತಾ ಪರಿಶೀಲನೆಯ ನಂತರ ನಾನು ವಾಪಸ್ ಬರುತ್ತಿದ್ದಾಗ ದ್ವಿತೀಯ ಕ್ಯಾಬಿನ್ನಲ್ಲಿದ್ದ ಸಿಐಎಸ್ಎಫ್ ಸಿಬ್ಬಂದಿಯಾಗಿದ್ದ ಮಹಿಳೆಯೊಬ್ಬರು ನನ್ನ ಕೆನ್ನೆ ಬಾರಿಸಿ ನಿಂದಿಸುವುದಕ್ಕೆ ಶುರು ಮಾಡಿದರು. ನಾನು ಏಕೆ ಈ ರೀತಿ ಮಾಡಿದೆ ಎಂದು ಕೇಳಿದಾಗ ನಾನು ರೈತರ ಪ್ರತಿಭನೆಯನ್ನು ಬೆಂಬಲಿಸಿ ಈ ರೀತಿ ಮಾಡಿರುವುದಾಗಿ ಹೇಳಿದರು. ನಾನು ಸುರಕ್ಷಿತವಾಗಿದ್ದು, ಪಂಜಾಬ್ನಲ್ಲಿ ಉಗ್ರಗಾಮಿಗಳು ಹಾಗೂ ವಿಧ್ವಂಸಕ ಕೃತ್ಯವೆಸಗುವವರು ಹೆಚ್ಚುತ್ತಿರುವ ಬಗ್ಗೆ ನಾನು ಕಳವಳಗೊಂಡಿದ್ದೇನೆ” ಎಂದು ತಿಳಿಸಿದ್ದರು.
Shocking rise in terror and violence in Punjab…. pic.twitter.com/7aefpp4blQ
— Kangana Ranaut (Modi Ka Parivar) (@KanganaTeam) June 6, 2024
