ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಜೂನ್ 4 ರಂದು ಷೇರು ಮಾರುಕಟ್ಟೆಯಲ್ಲಾದ ದೊಡ್ಡ ಕುಸಿತದ ಹಿಂದೆ ದೊಡ್ಡ ಹಗರಣದ ಕಾರಣವಿದೆ ಎಂದು ನಿನ್ನೆಯಷ್ಟೆ(ಜೂ.06) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದರು. ಹಗರಣದಿಂದ ಹೂಡಿಕೆದಾರರ 30 ಲಕ್ಷ ಕೋಟಿ ರೂ. ನಷ್ಟಕ್ಕೆ ಕಾರಣವಾಗಿದೆ. ನರೇಂದ್ರ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸೇರಿದಂತೆ ನೇರವಾಗಿ ಭಾಗಿಯಾಗಿದ್ದು,ಇದರ ಬಗ್ಗೆ ಜಂಟಿ ಸದನ ತನಿಖೆ ನಡೆಯಬೇಕೆಂದು ಆಗ್ರಹಿಸಿದ್ದರು.
ಈಗ ಇದೇ ಷೇರು ಹಗರಣಕ್ಕೆ ಸಂಬಂಧಿಸಿದಂತೆ ಚುನಾವಣೋತ್ತರ ಸಮೀಕ್ಷೆ ನಂತರ ಬಿಜೆಪಿ ನಾಯಕ ಅಮಿತ್ ಶಾ ಹೂಡಿಕೆ ಮಾಡಿ ನಂತರ ಫಲಿತಾಂಶಕ್ಕೂ ಒಂದು ದಿನ ಮುನ್ನ ತನ್ನ ಷೇರುಗಳನ್ನು ಮಾರಾಟ ಮಾಡಿರುವ ದಾಖಲೆಗಳನ್ನು ಬಿಡುಗಡೆ ಮಾಡುವಂತೆ ಕೇರಳ ಕಾಂಗ್ರೆಸ್ ಸವಾಲೆಸೆದಿದೆ.
ಈ ಬಗ್ಗೆ ಅಮಿತ್ ಶಾ ಚುನಾವಣಾ ಸಮಯದಲ್ಲಿ ಸಲ್ಲಿಸಿರುವ ದಾಖಲೆಗಳನ್ನು ಕೇರಳ ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಷೇರು ಮಾರುಕಟ್ಟೆ ಹಗರಣದ ಬಗ್ಗೆ ಸವಾಲು ಹಾಕುತ್ತೇವೆ. ಇದು ಅಮಿತ್ ಶಾ ಅವರು ತಮ್ಮ ಅಫಿಡೆವಿಟ್‌ನಲ್ಲಿ ಘೋಷಿಸಿರುವ ಷೇರುಗಳ ಪಟ್ಟಿಗಳ ಒಟ್ಟು ಪಟ್ಟಿ. ಇದನ್ನು ತಿರುಚದಿದ್ದರೆ ಅಥವಾ ಆಂತರಿಕ ಮಾರಾಟ ನಡೆಯದಿದ್ದರೆ ನಾವು ಕೆಲವು ಪ್ರಶ್ನೆಗಳೊಂದಿಗೆ ಪರಿಶೀಲನೆಗೊಳಪಡಿಸಬೇಕಾಗಿದೆ.
ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗುವುದಕ್ಕೂ ಮುನ್ನ ಅಮಿತ್ ಶಾ ಅವರು ಎಷ್ಟು ಷೇರುಗಳನ್ನು ಖರೀದಿಸಿದ್ದರು? ಎಕ್ಸಿಟ್ ಪೋಲ್ ಪ್ರಕಟವಾದ ನಂತರ ಜೂನ್ 3 ರಂದು ಎಷ್ಟನ್ನು ಮಾರಾಟ ಮಾಡಿದರು ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಅದೇ ರೀತಿ ಪಿಯೂಷ್ ಗೋಯಲ್, ಇತರ ಸಚಿವರು, ಸಮೀಕ್ಷೆ ಪ್ರಕಟಿಸಿದವರು ಹಾಗೂ ಪತ್ರಕರ್ತರು ಒಳಗೊಂಡು ಈ ಹಗರಣವನ್ನು ಬಯಲಿಗೆಳಯಬೇಕಾಗಿದೆ. ಪೋಸ್ಟ್‌ನಲ್ಲಿ ಇರುವಂತ ಕಂಪನಿಗಳ ಹೆಸರುಗಳು ಅಮಿತ್ ಶಾ ಹಾಗೂ ಅವರ ಪತ್ನಿಯವರು ಷೇರು ಹೂಡಿಕೆ ಮಾಡಿರುವ ಕಂಪನಿಗಳ ಪಟ್ಟಿಯಾಗಿದೆ.
ಈ ದಾಖಲೆಯ ಹಿನ್ನೆಲೆಯಲ್ಲಿ ನಾವು ಅಮಿತ್ ಶಾ ಅವರಿಗೆ ಬಹಿರಂಗ ಸವಾಲು ಹಾಕುತ್ತೇವೆ. ಕಳೆದ ಒಂದು ತಿಂಗಳಲ್ಲಿ ನೀವು ಚಟುವಟಿಕೆ ನಡೆಸಿದ ಮಾರುಕಟ್ಟೆ ವಹಿವಾಟುಗಳನ್ನು ಸಾರ್ವಜನಿಕಗೊಳಿಸಿ ತಾವು ಸ್ವಚ್ಛವಾಗಿರುವುದಾಗಿ ತಿಳಿಸಿ ಎಂದು ಕೇರಳ ಕಾಂಗ್ರೆಸ್ ಸವಾಲೆಸೆದಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಜನರೊಂದಿಗೆ ನೊಂದು ಬೆಂದು ಬಂಗಾರವಾದ ರಾಹುಲ್ ಗಾಂಧಿ
ಕೇರಳ ಕಾಂಗ್ರೆಸ್ ಪೋಸ್ಟ್ ಮಾಡಿರುವ ಅಮಿತ್ ಶಾ ಅವರ ಚುನಾವಣಾ ಅಫಿಡೆವಿಟ್‌ನ ದಾಖಲೆಗಳಲ್ಲಿ ನೂರಾರು ಕಂಪನಿಗಳಿಗೆ ಹೂಡಿಕೆ ಮಾಡಿರುವ ಮಾಹಿತಿಯಿದೆ. ಇದರಿಂದ ಬಿಜೆಪಿ ನಾಯಕರು ನೂರಾರು ಕೋಟಿಗೂ ಅಧಿಕ ಲಾಭ ಪಡೆದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಜೂನ್ 1 ರಂದು ನಡೆದ ಮತದಾನೋತ್ತರ ಸಮೀಕ್ಷೆ ನಂತರ ಷೇರು ಮಾರುಕಟ್ಟೆಗಳು ಏರಿಕೆ ಕಂಡಿದ್ದವು. ಮೂರು ದಿನಗಳ ನಂತರ ಕುಸಿತದ ಷೇರು ಮಾರುಕಟ್ಟೆ ಸೂಚ್ಯಂಕ ತಲೆಕೆಳಗಾಗಿತ್ತು. ಚುನಾವಣೋತ್ತರ ಸಮೀಕ್ಷೆಗಳದ್ದು ಸರಿಯಾಗಿಲ್ಲ ಎಂಬ ಮಾಹಿತಿ ಬಿಜೆಪಿ ನಾಯಕರಿಗೆ ಇತ್ತು ಎಂದು ರಾಹುಲ್ ಆರೋಪಿಸಿದ್ದರು.
THE STOCK MARKET SCAM CHALLENGE | This is the list of listed shares Amit Shah declared in his affidavit.
To verify there is no manipulation or insider trading, we need to verify only the following.
1. How many shares did Amit Shah buy before the exit polls were published?
2.… pic.twitter.com/V26SZJU4vx— Congress Kerala (@INCKerala) June 7, 2024
