ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಶಾಸ್ತ್ರಜ್ಞ ಪ್ರಶಾಂತ್ ಕಿಶೋರ್, “ಬಿಜೆಪಿ 303 ಅಥವಾ ಹೆಚ್ಚಿನ ಸ್ಥಾನಗಳನ್ನು ಪಡೆಯುತ್ತದೆ. ಜೂನ್ 4ರಂದು ಮೋದಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ” ಎಂದು ಭವಿಷ್ಯ ನುಡಿದಿದ್ದರು. ಆದರೆ, ಅದು ಫಲಿತಾಂಶ ಬಂದ ದಿನ ಎನ್‌ಡಿಎ 292 ಹಾಗೂ ಇಂಡಿಯಾ ಮೈತ್ರಿಕೂಟ 232 ಸ್ಥಾನಗಳನ್ನು ಪಡೆದಿದ್ದರಿಂದ ಪ್ರಶಾಂಶ್ ಕಿಶೋರ್ ಭವಿಷ್ಯ ಸುಳ್ಳಾಗಿತ್ತು. ಫಲಿತಾಂಶ ಬಂದ ಬಳಿಕ ಪ್ರಶಾಂತ್ ಕಿಶೋರ್ ಎಲ್ಲಿ ನಾಪತ್ತೆಯಾಗಿದ್ದಾರೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಟ್ರೋಲ್ ಮಾಡುವ ಮೂಲಕ ಹಲವು ನೆಟ್ಟಿಗರು ಪ್ರಶ್ನಿಸುತ್ತಿದ್ದರು.
ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಜೂನ್ 7ರಂದು ಸಂಜೆ ಇಂಡಿಯಾ ಟುಡೇ ಸುದ್ದಿವಾಹಿನಿಗೆ ಸಂದರ್ಶನ ನೀಡಿರುವ ಪ್ರಶಾಂತ್ ಕಿಶೋರ್, “2024ರ ಲೋಕಸಭಾ ಚುನಾವಣೆಯ ಬಗ್ಗೆ ನಾನು ನೀಡಿದ್ದ ಭವಿಷ್ಯವು ತಪ್ಪಾಗಿದೆ ಎಂದು ಒಪ್ಪಿಕೊಳ್ಳುತ್ತೇನೆ. ಇನ್ನು ಮುಂದೆ ಯಾವುದೇ ಚುನಾವಣಾ ಸೀಟುಗಳನ್ನು ಊಹಿಸುವುದಿಲ್ಲ” ಎಂದು ಘೋಷಿಸಿದ್ದಾರೆ.
ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಶಾಂತ್ ಕಿಶೋರ್, “ಹೌದು, ನಾನು ಮತ್ತು ನನ್ನಂತಹ ಸಮೀಕ್ಷೆ ನಡೆಸಿದವರು ಸಂಖ್ಯೆಯನ್ನು ತಪ್ಪಾಗಿ ಗ್ರಹಿಸಿದ್ದೇವೆ. ನಮ್ಮ ತಪ್ಪನ್ನು ನಾವು ಒಪ್ಪಿಕೊಳ್ಳುತ್ತೇವೆ. ಸಂಖ್ಯೆಯನ್ನು ನೀಡುವಲ್ಲಿ ನಾವು ವಿಫಲಗೊಂಡಿದ್ದೇವೆ. ಹಲವಾರು ಪ್ರಮುಖ ವಿಭಾಗಗಳಲ್ಲಿ ನಮ್ಮ ಲೆಕ್ಕಾಚಾರಗಳು ಗಮನಾರ್ಹವಾಗಿ ತಪ್ಪಿಹೋಗಿವೆ. ಆದರೂ ಈ ಚುನಾವಣೆಯಲ್ಲಿ ಬಿಜೆಪಿ ನೀಡಿದ ಮೂರನೇ ಅತ್ಯುತ್ತಮ ಪ್ರದರ್ಶನವಾಗಿದೆ. ಮೋದಿ ಮತ್ತೆ ಅಧಿಕಾರಕ್ಕೆ ಬಂದಿದ್ದಾರೆ” ಎಂದು ತಿಳಿಸಿದರು.
Prashant Kishor Exclusive: First Word After Verdict Stunner
“I admit that my assessment was wrong but Modi & NDA are back”: Poll analyst Prashant Kishor@SardesaiRajdeep@PrashantKishor pic.twitter.com/MB2qLdepmn— Rahul Kanwal (@rahulkanwal) June 7, 2024
“ನಾನು ನನ್ನ ಮುಂದಿದ್ದ ಮೌಲ್ಯಮಾಪನವನ್ನು ನಿಮ್ಮ ಮುಂದೆ ಇಟ್ಟಿದ್ದೆ ಅಷ್ಟೇ. ನಾನು ಮಾಡಿದ ಮೌಲ್ಯಮಾಪನವು ಶೇಕಡಾ 20ರಷ್ಟು ದೊಡ್ಡ ಪ್ರಮಾಣದಲ್ಲಿ ತಪ್ಪಾಗಿದೆ ಎಂದು ನಾನು ಕ್ಯಾಮರಾದ ಮುಂದೆ ಒಪ್ಪಿಕೊಳ್ಳಲೇಬೇಕು. ನಾವು ಬಿಜೆಪಿ 300 ರ ಸಮೀಪಕ್ಕೆ ಬರಲಿದೆ ಎಂದು ಹೇಳುತ್ತಿದ್ದೆವು, ಆದರೆ ಅವರಿಗೆ 240 ಸೀಟುಗಳಷ್ಟೇ ಸಿಕ್ಕಿತು. ಮೋದಿಯವರ ವಿರುದ್ಧ ಜನರಲ್ಲಿ ಅಸಮಾಧಾನವಿದೆ ಎಂದು ನಾನು ಮೊದಲೇ ಹೇಳಿದ್ದೆ. ಆದರೆ ಅದು ವ್ಯಾಪಕವಾಗಿಲ್ಲ ಎಂಬುದು ವೋಟ್ ಶೇರ್ ಅನ್ನು ಗಮನಿಸಿದಾಗ ತಿಳಿದುಕೊಳ್ಳಬೇಕು” ಎಂದು ಪ್ರಶಾತ್ ಕಿಶೋರ್ ಹೇಳಿದರು.
“ರಾಜಕೀಯ ತಂತ್ರಜ್ಞನಾಗಿ, ನಾನು ಸಂಖ್ಯಾಬಲಕ್ಕೆ ಸಿಲುಕಬಾರದಿತ್ತು. ಈ ಹಿಂದೆ ಬಳಸಿರಲಿಲ್ಲ. ಕಳೆದ ಎರಡು ವರ್ಷಗಳಲ್ಲಿ ನಾನು ಒಮ್ಮೆ ಬಂಗಾಳ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮತ್ತು ಈಗ 2024 ರಲ್ಲಿ ನೀಡಿದ ಅಂಕಿ ಸಂಖ್ಯೆಗಳಲ್ಲಿ ತಪ್ಪನ್ನು ಮಾಡಿದ್ದೇನೆ. ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಅಂಕಿ-ಅಂಶಗಳನ್ನು ಬಿಟ್ಟರೆ, ಉಳಿದಂತೆ ನಾನು ಹೇಳಿದ್ದೆಲ್ಲವೂ ಸರಿಯಾಗಿದೆ. ಇನ್ನು ಮುಂದೆ ಚುನಾವಣಾ ಸೀಟುಗಳನ್ನು ಊಹಿಸುವುದಿಲ್ಲ” ಎಂದು ಪ್ರಶಾತ್ ಕಿಶೋರ್ ಇಂಡಿಯಾ ಟುಡೇಗೆ ನೀಡಿದ ಮೊದಲ ಸಂದರ್ಶನದಲ್ಲಿ ಹೇಳಿದರು.
3 दिन से प्रशांत किशोर कही दिख नही रहे। pic.twitter.com/5Q38GOB6bj
— Lutyens Media (@LutyensMediaIN) June 6, 2024
“ಇದು ಕಾಂಗ್ರೆಸ್‌ನ ಇತಿಹಾಸದಲ್ಲಿ ಮೂರನೇ ಅತ್ಯಂತ ಕೆಟ್ಟ ಪ್ರದರ್ಶನವಾಗಿದೆ. ಆದರೂ ಅವರು ಸಂತೋಷಪಟ್ಟಿದ್ದಾರೆ. ಈ ಲೋಕಸಭಾ ಚುನಾವಣೆಯ ಫಲಿತಾಂಶವು ಎಲ್ಲರಿಗೂ ಒಂದು ರೀತಿಯ ಸಮಾಧಾನ ನೀಡಿದೆ ಎಂಬುದನ್ನು ಒಪ್ಪಿಕೊಳ್ಳಬೇಕು. ನಾವು ನೀಡಿದ ನಂಬರ್ ತಪ್ಪಾದ ಬಳಿಕ ನಮ್ಮನ್ನು ಟ್ರೋಲ್ ಮಾಡಲಾಗುತ್ತಿದೆ. ನಮ್ಮ ತಪ್ಪನ್ನು ನಾವು ಒಪ್ಪಿಕೊಳ್ಳುತ್ತೇವೆ. ಯಾಕೆಂದರೆ ನಾವು ಸಂಖ್ಯೆ ನೀಡಿದ್ದು ಐದನೇ ಹಂತದ ಚುನಾವಣೆಯ ಬಳಿಕ. 5ನೇ ಹಂತಕ್ಕೂ ಮೊದಲು ಹಲವು ಕಡೆಗಳಲ್ಲಿ ಬಿಜೆಪಿ ಮುನ್ನಡೆಯಲ್ಲಿತ್ತು. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ರಾಹುಲ್ ಗಾಂಧಿ ಜೋಡಿಯ ಮುಖ ನೋಡಿ ಜನ ಮತ ಹಾಕಿದ್ದಾರೆ” ಎಂದು ಪ್ರಶಾತ್ ಕಿಶೋರ್ ತಿಳಿಸಿದ್ದಾರೆ.
“ಚಾರ್ ಸೌ ಪಾರ್ ಎಂಬ ಮೋದಿಯವರ ಹೇಳಿಕೆಯೇ ಬಿಜೆಪಿಯ ಹಿನ್ನಡೆಗೆ ಕಾರಣ. ಸಂವಿಧಾನ ಬದಲಾವಣೆಯ ಹೇಳಿಕೆ ಕೂಡ ಬಿಜೆಪಿಯ ಸೋಲಿಗೆ ಕಾರಣ. ಈ ಬಾರಿಯ ಲೋಕಸಭಾ ಚುನಾವಣೆ ಹಾಗೂ ವಿಧಾನಸಭೆಯ ಚುನಾವಣೆಯ ಫಲಿತಾಂಶವು ಅಹಂಕಾರದಿಂದ ಮೆರೆಯುತ್ತಿದ್ದವರಿಗೆ ಜನರೇ ಪಾಠ ಕಲಿಸಿದ್ದಾರೆ” ಎಂದು ಪ್ರಶಾಂತ್ ಕಿಶೋರ್ ತಿಳಿಸಿದರು.
ಸಂಪೂರ್ಣ ಸಂದರ್ಶನ ಇಲ್ಲಿದೆ
