ದಾವಣಗೆರೆ | ಪ್ರಧಾನಿಯಾಗಿ ನಮೋ ಮುಂದುವರಿಕೆ; ಬೆಂಬಲ ತಿರಸ್ಕರಿಸಲು ಟಿಡಿಪಿ, ಜೆಡಿಯುಗೆ ಮನವಿ

Date:

Advertisements

ಮುಂದಿನ ಪ್ರಧಾನಿಯಾಗಿ ನರೇಂದ್ರಮೋದಿಯವರನ್ನು ನೇಮಕ ಮಾಡಲು ಟಿಡಿಪಿ ಮತ್ತು ಜೆಡಿಯು ಪಕ್ಷದ ಅಧ್ಯಕ್ಷರು ಬೆಂಬಲ ನೀಡದಂತೆ ಉಮತ್ ಚಿಂತಕರ ವೇದಿಕೆಯಿಂದ ಪತ್ರ ಬರೆದು ಮನವಿ ಮಾಡಿದ್ದೇವೆ ಎಂದು ವೇದಿಕೆಯ ಅಧ್ಯಕ್ಷ ಅನೀಸ್ ಪಾಷ ತಿಳಿಸಿದರು.

ದಾವಣಗೆರೆಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ಟಿಡಿಪಿ ಮತ್ತು ಜೆಡಿಯು ಪಕ್ಷಗಳು ನಿರಂತರವಾಗಿ ಕೋಮುವಾದವನ್ನು ಧಿಕ್ಕರಿಸಿ ಜಾತ್ಯತೀತ, ಸಾಮಾಜಿಕ ನ್ಯಾಯ, ಭಾರತದ ಏಕತೆ ಮತ್ತು ಅಖಂಡತೆಗಾಗಿ ಅದರಲ್ಲೂ ಪ್ರಮುಖವಾಗಿ ಧ್ವನಿ ಇಲ್ಲದ ದಲಿತ ಮತ್ತು ಅಲ್ಪಸಂಖ್ಯಾತರ ಪರವಾಗಿ ನಿಂತಿರುವ ಪಕ್ಷಗಳಾಗಿವೆ” ಎಂದರು.

ನಮೋ

ಇತಿಹಾಸವನ್ನು ಗಮನಿಸಿದರೆ, ಬಿಜೆಪಿ ಪಕ್ಷವು ಪ್ರತಿ ಹಂತದಲ್ಲೂ ಕೋಮು ಧೃವೀಕರಣ ಮಾಡುತ್ತಾ ಧ್ವೇಷ ಭಾಷಣಗಳಿಂದ ಮುನ್ನೆಲೆಗೆ ಬಂದಿರುತ್ತದೆ. ದೇಶದ ಒಂದು ಭಾಗವಾಗಿರುವ ಮುಸ್ಲಿಂ ಸಮುದಾಯವನ್ನು, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ದೇಶಪ್ರೇಮಿಗಳನ್ನು ನುಸುಳುಕೋರರು ಎಂದು ನೇರವಾಗಿ ತುಚ್ಛ ಮನೋಭಾವದಿಂದ ಅಪವಾದ ಮಾಡಿದ್ದು ತಪ್ಪೆಂದು ಅರಿವಿದ್ದರೂ ಕೂಡ ಮುಸ್ಲಿಂ ಸಮಾಜದ ಕ್ಷಮೆಯನ್ನೂ ಕೇಳದ ಮುಸಲ್ಮಾನರ ವಿರುದ್ಧ ದ್ವೇಷವನ್ನು ಹೊಂದಿದ ವ್ಯಕ್ತಿ ಮುಂದಿನ ದಿನಗಳಲ್ಲಿ ಪ್ರಧಾನಿಯಾದರೆ, ಯಾವ ರೀತಿ ನಡೆಸಿಕೊಳ್ಳಬಹುದು” ಎಂದು ಆತಂಕ ವ್ಯಕ್ತಪಡಿಸಿದರು.

Advertisements

“ಸಮಾಜವಾದಿ ಚಿಂತನೆಯನ್ನು ಹೊಂದಿರುವ ಎಲ್ಲರನ್ನೂ ಸಮಾನವಾಗಿ ಕಾಣುವ ಎರಡು ಪಕ್ಷದ ಅಧ್ಯಕ್ಷರಾದ ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್‌ರವರು ಯಾವುದೇ ಕಾರಣಕ್ಕೂ ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿ ಆರಿಸಲು ಬೆಂಬಲ ನೀಡಬಾರದು” ಎಂದು ಕಳಕಳಿಯ ಮನವಿ ಮಾಡಿದರು.

ಈ ಸುದ್ದಿ ಓದಿದ್ದೀರಾ? ತುಮಕೂರು | ಡಿ ಕೆ ಸುರೇಶ್ ಸೋಲಿಗೆ ಸಿದ್ದರಾಮಯ್ಯ ಅಂಡ್ ಟೀಮ್ ಕಾರಣ: ಬಿಜೆಪಿ ಶಾಸಕ 

ಸುದ್ದಿಗೋಷ್ಟಿಯಲ್ಲಿ ನಸೀಮಾ ಖಾನ್ ಬಾನು, ಅಲ್ಲಾಭಕ್ಷ, ಆದಿಲ್ ಖಾನ್ ಹಾಗೂ ಇತರ ಪದಾಧಿಕಾರಿಗಳು ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔರಾದ್‌ | ಬಸವಲಿಂಗ ಪಟ್ಟದ್ದೇವರು ಸುದೈವಿ ಮಕ್ಕಳ ಪೋಷಕರು : ನವೀಲಕುಮಾರ್ ಉತ್ಕಾರ್

ಭಾಲ್ಕಿ ಹಿರೇಮಠ ಸಂಸ್ಥಾನದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ತಮ್ಮ ಜೀವನದುದ್ದಕ್ಕೂ ಸಾಮಾಜಿಕ,...

ನಿರ್ಲಕ್ಷ್ಯಕ್ಕೆ ಗುರಿಯಾಗಿ ದುಸ್ಥಿತಿಗೆ ಬಿದ್ದ ರಾಜ್ಯ ಹೆದ್ದಾರಿ; ಶಾಸಕರ ವಿರುದ್ಧ ಸಾರ್ವಜನಿಕರ ಆಕ್ರೋಶ

ಕಲಬುರಗಿ ಜಿಲ್ಲೆಯ ರಾಜ್ಯ ಹೆದ್ದಾರಿ 125, ಶಹಾಬಾದ್ ತಾಲೂಕಿನಿಂದ ಜೇವರ್ಗಿಯ ರಾಷ್ಟ್ರೀಯ...

ಕಲಬುರಗಿ | ಬೆಳೆ ಹಾನಿ: ಎಕರೆಗೆ 25 ಸಾವಿರ ಪರಿಹಾರ ನೀಡುವಂತೆ ಒತ್ತಾಯಿಸಿ ಎಐಕೆಕೆಎಂಎಸ್‌ ಪ್ರತಿಭಟನೆ

ಕಲಬುರಗಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಆಗಿರುವ ಬೆಳೆ ನಷ್ಟಕ್ಕೆ ಕೂಡಲೇ ಪರಿಹಾರವನ್ನು ಬಿಡುಗಡೆ...

Download Eedina App Android / iOS

X