ಐದೇ ದಿನದಲ್ಲಿ ಭರ್ಜರಿ ಏರಿಕೆ ಕಂಡ ಚಂದ್ರಬಾಬು ನಾಯ್ದು ಕುಟುಂಬದ ಆಸ್ತಿ!

Date:

Advertisements

ಜೂನ್ 4ರಂದು ಲೋಕಸಭಾ ಚುನಾವಣೆ ಹಾಗೂ ಆಂಧ್ರಪ್ರದೇಶ ವಿಧಾನಸಭೆಯ ಫಲಿತಾಂಶ ಹೊರಬಿದ್ದ ಬಳಿಕ ಚಂದ್ರಬಾಬು ನಾಯ್ದು ಕುಟುಂಬದ ಆಸ್ತಿಯಲ್ಲಿ ಭರ್ಜರಿ ಏರಿಕೆ ಕಂಡಿದೆ.

ಆಂಧ್ರ ಪ್ರದೇಶದ ನಿಯೋಜಿತ ಸಿಎಂ ಚಂದ್ರಬಾಬು ನಾಯ್ಡು ಕುಟುಂಬವು ‘ಹೆರಿಟೇಜ್ ಫುಡ್ಸ್ ಲಿಮಿಟೆಡ್‌’ ಎಂಬ ಕಂಪನಿಯಲ್ಲಿ ಭಾರೀ ಹೂಡಿಕೆ ಹೊಂದಿದೆ. ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಮೈತ್ರಿಕೂಟ ಭರ್ಜರಿ ಜಯ ದಾಖಲಿಸಿದ್ದು, ಕೇಂದ್ರದಲ್ಲೂ ನಾಯ್ಡು ಕಿಂಗ್‌ಮೇಕರ್‌ ಆಗಿ ಮೂಡಿ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಐದು ವರ್ಷ ರಾಜ್ಯ ಮತ್ತು ಆಂಧ್ರ ರಾಜಕಾರಣದಲ್ಲಿ ನಾಯ್ಡು ಪ್ರಭಾವ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಹೆರಿಟೇಜ್‌ ಷೇರುಗಳು ಒಂದೇ ಸಮನೆ ಏರಿಕೆ ಕಾಣುತ್ತಿವೆ ಎಂದು ವರದಿಯಾಗಿದೆ.

ಲೋಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದ ದಿನ ಷೇರು ಮಾರುಕಟ್ಟೆ ತೀವ್ರ ಕುಸಿತ ದಾಖಲಿಸಿತ್ತು. ಇದರ ನಡುವೆಯೂ ಹೆರಿಟೇಜ್ ಫುಡ್ಸ್ ಲಿಮಿಟೆಡ್‌ ಷೇರುಗಳು ಗಟ್ಟಿಯಾಗಿ ನಿಂತಿದ್ದವು. ಬಳಿಕ ಭಾರೀ ಏರಿಕೆಗೆ ಸಾಕ್ಷಿಯಾಗಿದ್ದವು.

Advertisements

ಕಳೆದ ಐದು ದಿನಗಳಲ್ಲಿ ಈ ಕಂಪನಿಯ ಷೇರುಗಳು ಶೇ. 55ರಷ್ಟು ಭಾರೀ ಏರಿಕೆ ಕಂಡಿವೆ. 2024ರ ಮೇ 31ರಂದು ಕಂಪನಿಯ ಷೇರಿನ ಬೆಲೆ 402.90 ರೂ. ಆಗಿತ್ತು. ಇದೀಗ ಸತತ ಏರಿಕೆಯ ಬಳಿಕ ಶುಕ್ರವಾರದ ದಿನದಂತ್ಯಕ್ಕೆ 661.25 ರೂ.ನಲ್ಲಿ ವಹಿವಾಟು ಮುಗಿಸಿದೆ. ಷೇರು ಶನಿವಾರ ಕೂಡ 60.10 ರೂ. ಅಥವಾ ಶೇ. 10ರಷ್ಟು ಏರಿಕೆ ಕಂಡಿದ್ದಲ್ಲದೆ, ಅಪ್ಪರ್‌ ಸರ್ಕ್ಯೂಟ್‌ನಲ್ಲಿ ಲಾಕ್‌ ಆಗಿತ್ತು.

ಶುಕ್ರವಾರದ ಏರಿಕೆಯೊಂದಿಗೆ ಕಂಪನಿ ಷೇರುಗಳು ಕಳೆದ 5 ದಿನದಲ್ಲಿ 258.35 ರೂ. ಏರಿಕೆಯಾಗಿದ್ದು ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿವೆ.

1992ರಲ್ಲಿ ಸ್ಥಾಪನೆಯಾದ ಹೆರಿಟೇಜ್ ಫುಡ್ಸ್ ಮೌಲ್ಯವರ್ಧಿತ ಮತ್ತು ಬ್ರಾಂಡೆಡ್‌ ಡೈರಿ ಉತ್ಪನ್ನಗಳಿಗೆ ಹೆಸರುವಾಸಿಯಾಗಿದ್ದು, ಈ ವಲಯದಲ್ಲಿ ಭಾರತದ ಪ್ರಮುಖ ಕಂಪನಿಯಾಗಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳಾದ ಮೊಸರು, ತುಪ್ಪ, ಪನೀರ್, ಸುವಾಸನೆಯುಕ್ತ ಹಾಲು ಮತ್ತು ರೋಗನಿರೋಧಕ ಹಾಲು ಮುಂತಾದವುಗಳಿಗೆ ಹೆರಿಟೇಜ್‌ ಜನಪ್ರಿಯವಾಗಿದ್ದು, ಭಾರತದಾದ್ಯಂತ 11 ರಾಜ್ಯಗಳಲ್ಲಿ 15 ಲಕ್ಷಕ್ಕೂ ಹೆಚ್ಚಿನ ಕುಟುಂಬಗಳಿಗೆ ತನ್ನ ಉತ್ಪನ್ನಗಳನ್ನು ಪೂರೈಸುತ್ತಿದೆ.

ಚಂದ್ರಬಾಬು ನಾಯ್ಡು ಪರ ಚುನಾವಣಾ ಫಲಿತಾಂಶ ಬಂದ ದಿನದಿಂದ ಹೆರಿಟೇಜ್ ಫುಡ್ಸ್ ಮಾರುಕಟ್ಟೆ ಮೌಲ್ಯ ಸುಮಾರು 2,400 ಕೋಟಿ ರೂ.ಗಳಷ್ಟು ಏರಿಕೆ ಕಂಡಿದೆ. ಕಂಪನಿ ಮೌಲ್ಯ ಒಂದು ವಾರದ ಹಿಂದೆ ಇದ್ದ 3,700 ಕೋಟಿ ರೂ.ನಿಂದ ಜೂನ್ 7ರ ವೇಳೆಗೆ 6,136 ಕೋಟಿ ರೂ.ಗೆ ಜಿಗಿದಿದೆ.

ಈ ಕಂಪನಿಯಲ್ಲಿ ತೆಲುಗು ದೇಶಂ ಪಕ್ಷ (ಟಿಡಿಪಿ)ದ ಮುಖ್ಯಸ್ಥ ನಾರಾ ಚಂದ್ರಬಾಬು ನಾಯ್ಡು ಅವರ ಪತ್ನಿ ನಾರಾ ಭುವನೇಶ್ವರಿ ಶೇ. 24.37ರಷ್ಟು ಷೇರು ಹೊಂದಿದ್ದಾರೆ. ಕಂಪನಿಯ ಪ್ರಮುಖ ಪ್ರವರ್ತಕರಾಗಿರುವ ಅವರ ಬಳಿ 2,26,11,525 ಷೇರುಗಳು ಇವೆ. ಇನ್ನು ಚಂದ್ರಬಾಬು ನಾಯ್ಡು ಪುತ್ರ, ಶಾಸಕ ನಾರಾ ಲೋಕೇಶ್‌ ಹಾಗೂ ಅವರ ಪತ್ನಿ ಬ್ರಹ್ಮಣಿ ಕ್ರಮವಾಗಿ ಶೇ. 10.82 ಹಾಗೂ ಶೇ. 0.46ರಷ್ಟು ಷೇರುಗಳನ್ನು ಹೊಂದಿದ್ದಾರೆ. ನಾಯ್ಡು ಅವರ ಮೊಮ್ಮಗ ದೇವಾಂಶ್‌ ಹೆಸರಲ್ಲೂ ಶೇ. 0.06ರಷ್ಟು ಷೇರುಗಳು ಇವೆ. ಒಟ್ಟಾರೆ ಹೆರಿಟೇಜ್‌ ಫುಡ್ಸ್‌ ಲಿ.ನಲ್ಲಿ ನಾಯ್ಡು ಅವರ ಕುಟುಂಬವು ಶೇ. 35.7ರಷ್ಟು ಪಾಲನ್ನು ಹೊಂದಿದೆ ಎಂದು ಷೇರು ವಿನಿಮಯ ಕೇಂದ್ರದ ದತ್ತಾಂಶಗಳು ತೋರಿಸುತ್ತಿವೆ.

ಹೆರಿಟೇಜ್ ಫುಡ್ಸ್ ಷೇರು ಬೆಲೆ ಏರಿಕೆಯಿಂದ ನಾರಾ ಭುವನೇಶ್ವರಿ ಅವರ ಸಂಪತ್ತಿನ ನಿವ್ವಳ ಮೌಲ್ಯದಲ್ಲಿ ಕೇವಲ ಐದೇ ದಿನದಲ್ಲಿ 584 ಕೋಟಿ ರೂ. ಏರಿಕೆ ಕಂಡಿದೆ. ಇನ್ನು ನಾರಾ ಲೋಕೇಶ್‌ ಸಂಪತ್ತು 237.8 ಕೋಟಿ ರೂ.ನಷ್ಟು ಹೆಚ್ಚಾಗಿದೆ. ಒಟ್ಟಾರೆಯಾಗಿ, ಚಂದ್ರಬಾಬು ನಾಯ್ಡು ಅವರ ನಿವ್ವಳ ಆಸ್ತಿ ಮೌಲ್ಯ 870 ಕೋಟಿ ರೂ.ಗಳಷ್ಟು ಏರಿಕೆಯಾಗಿದೆ. ಒಂದು ವಾರದ ಹಿಂದೆ ಇದ್ದ 1,319 ಕೋಟಿ ರೂ.ಗಳಿಂದ 2,190 ಕೋಟಿ ರೂ.ಗಳಿಗೆ ತಲುಪಿದೆ.

ಇದನ್ನು ಓದಿದ್ದೀರಾ? ‘ಇಂಡಿಯಾ’ ಒಕ್ಕೂಟದಿಂದ ನಿತೀಶ್ ಕುಮಾರ್‌ಗೆ ಪ್ರಧಾನಿ ಸ್ಥಾನದ ಆಫರ್ ಬಂದಿತ್ತು: ಜೆಡಿಯು ಮುಖಂಡ ಆರೋಪ

ಇತ್ತೀಚೆಗೆ ವಿಧಾನಸಭೆ ಚುನಾವಣೆ ವೇಳೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಮ್ಮ ಹಾಗೂ ಪತ್ನಿ ಆಸ್ತಿ 810 ಕೋಟಿ ರೂ. ಎಂದು ಚಂದ್ರಬಾಬು ನಾಯ್ಡು ಘೋಷಿಸಿದ್ದರು. ಇದರಲ್ಲಿ ಹೆಚ್ಚಿನ ಪಾಲು ಹೆರಿಟೇಜ್‌ ಫುಡ್ಸ್‌ನಲ್ಲಿ ಹೊಂದಿರುವ ಅವರ ಪತ್ನಿಯ ಷೇರುಗಳದ್ದಾಗಿತ್ತು. ಆ ವೇಳೆ ಈ ಷೇರುಗಳ ಮೌಲ್ಯ 764 ಕೋಟಿ ರೂ. ಆಗಿತ್ತು. ಇನ್ನು ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್‌ ಪತ್ನಿ, ಪುತ್ರ ಸೇರಿ 542 ಕೋಟಿ ರೂ. ಆಸ್ತಿ ಇರುವುದಾಗಿ ಘೋಷಿಸಿದ್ದರು. ಹೆರಿಟೇಜ್‌ ಷೇರುಗಳ ನಾಗಾಲೋಟದಿಂದಾಗಿ ಇದೀಗ ಇಬ್ಬರ ಆಸ್ತಿಯಲ್ಲೂ ಭಾರೀ ಏರಿಕೆ ಕಂಡಿದೆ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X