ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೊದಲ ಎನ್‌ಡಿಎ ಸರ್ಕಾರದಲ್ಲಿ ಸಂಪುಟದ ಸಚಿವರಾಗಿ ಕರ್ನಾಟಕದಿಂದ ನಿರ್ಮಲಾ ಸೀತಾರಾಮನ್, ಕುಮಾರಸ್ವಾಮಿ ಸೇರಿ ಐವರು ಸಂಸತ್ ಸದಸ್ಯರು ಪ್ರಮಾಣವಚನ ಸ್ವೀಕರಿಸಿದರು.
ಕೇಂದ್ರ ಸಚಿವರಾಗಿ ಹೆಚ್ ಡಿ ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿ, ವಿ ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮೊದಲಿಗೆ ದೇವರ ಹೆಸರಲ್ಲಿ ಹೆಚ್‌ಡಿಕೆ ಕೇಂದ್ರ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಪ್ರಲ್ಹಾದ್ ಜೋಶಿ ಜೋಶಿ ಹಾಗೂ ಶೋಭಾ ಕರಂದ್ಲಾಜೆ ಅವರು ಎರಡನೇ ಬಾರಿಗೆ ಮೋದಿ ಸಂಪುಟ ಸಚಿವರಾಗಿದ್ದಾರೆ. ವಿ ಸೋಮಣ್ಣ ಅವರು ಕೂಡ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿರುವ ನಿರ್ಮಲಾ ಸೀತಾರಾಮನ್ ಕೂಡ ಮೂರನೇ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಈ ಐವರು ಕೇಂದ್ರ ಸಚಿವರುಗಳ ಪೈಕಿ ನಿರ್ಮಲಾ ಸೀತಾರಾಮನ್, ಪ್ರಲ್ಹಾದ್ ಜೋಶಿ, ಹೆಚ್ ಡಿ ಕುಮಾರಸ್ವಾಮಿ ಕ್ಯಾಬಿನೆಟ್ ದರ್ಜೆಯ ಸಚಿವರುಗಳಾದರೆ, ಶೋಭಾ ಕರಂದ್ಲಾಜೆ ಹಾಗೂ ವಿ ಸೋಮಣ್ಣ ರಾಜ್ಯ ಖಾತೆ ಸಚಿವರಾಗಿದ್ದಾರೆ.
ಪ್ರಧಾನಿ ಶ್ರೀ @narendramodi ಅವರ ನೇತೃತ್ವದ ಕೇಂದ್ರ ಸರಕಾರದ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಮಾಜಿ ಮುಖ್ಯಮಂತ್ರಿಗಳು ಹಾಗು ಜನತಾದಳ ಜಾತ್ಯತೀತ ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ @hd_kumaraswamy ಅವರಿಗೆ ಅಭಿನಂದನೆಗಳು.💐 pic.twitter.com/rvPZMqd4MB
— Janata Dal Secular (@JanataDal_S) June 9, 2024
ಹೆಚ್ ಡಿ ಕುಮಾರಸ್ವಾಮಿ
ಕರ್ನಾಟಕ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ನಿಂದ ಗೆದ್ದು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಹೆಚ್ ಡಿ ಕುಮಾರಸ್ವಾಮಿ ಅವರು ಈ ಬಾರಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಮಂಡ್ಯದಿಂದ ಕಣಕ್ಕಿಳಿದು ಗೆದ್ದಿದ್ದರು. ಇದೀಗ ಮೊದಲ ಬಾರಿಗೆ ಮೋದಿ ನೇತೃತ್ವದಲ್ಲಿ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಇವರಿಗೆ ಕೃಷಿ ಇಲಾಖೆ ಸಿಗುವ ಸಾಧ್ಯತೆ ಇದೆ.
It is a matter of great pride and joy for me to become the Union Minister for the second time in the government led by Shri Narendra Modi. Heartfelt thanks to the party, Prime Minister Shri @narendramodi, party leaders, workers and all my fellow voters for allowing me to serve as… pic.twitter.com/x4dGtfvHIw
— Pralhad Joshi (Modi Ka Parivar) (@JoshiPralhad) June 9, 2024
ಪ್ರಲ್ಹಾದ್ ಜೋಶಿ
ಧಾರವಾಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಐದನೇ ಬಾರಿ ಗೆಲ್ಲುವ ಮೂಲಕ ಹಿಡಿತ ಸಾಧಿಸಿರುವ ಪ್ರಲ್ಹಾದ್ ಜೋಶಿ, ಕಳೆದ ಬಾರಿಯ ಮೋದಿ ಸರ್ಕಾರದಲ್ಲೂ ಕೂಡ ಕ್ಯಾಬಿನೆಟ್ ದರ್ಜೆಯ ಸಚಿವರಾಗಿದ್ದರು. ಸಂಸದೀಯ ವ್ಯವಹಾರಗಳ ಖಾತೆಯನ್ನು ನಿಭಾಯಿಸಿದ್ದರು. ನರೇಂದ್ರ ಮೋದಿಯವರ ಆಪ್ತರಲ್ಲಿ ಓರ್ವರಾಗಿ ಇವರು ಗುರುತಿಸಿಕೊಂಡಿದ್ದಾರೆ. ಈ ಬಾರಿ ಯಾವ ಖಾತೆ ಸಿಗಲಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ.
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್, ಮೂಲತಃ ಆಂಧ್ರದವರಾಗಿದ್ದರೂ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. 2014ರಲ್ಲಿ ಮೋದಿ ಸರ್ಕಾರ ಮೊದಲ ಬಾರಿಗೆ ಗದ್ದುಗೆ ಏರಿದಾಗ ಇವರಿಗೆ ರಾಜ್ಯ ಖಾತೆಯ ಸಚಿವರನ್ನಾಗಿ ಮಾಡಲಾಯಿತು. ಇವರ ಕೆಲಸ ನೋಡಿದ ಬಿಜೆಪಿ ವರಿಷ್ಠರು ಇವರಿಗೆ 2017ರಲ್ಲಿ ಭಡ್ತಿ ನೀಡಿದ್ದರು. ಅಲ್ಲದೇ, ರಕ್ಷಣಾ ಇಲಾಖೆಯ ಕೆಲಸವನ್ನು ಇವರ ಹೆಗಲಿಗೆ ಹೊರಿಸಿದರು. ಈ ಮೂಲಕ ಈ ಖಾತೆಯನ್ನು ನಿರ್ವಹಿಸಿದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾದರು. ಇದಕ್ಕೂ ಮೊದಲು ಇಂದಿರಾ ಗಾಂಧಿ ಈ ಖಾತೆಯನ್ನು ನಿರ್ವಹಿಸಿದ್ದರು.
ಕಳೆದ ಮೋದಿ ಸರ್ಕಾರದ ಅವಧಿಯಲ್ಲಿ ಹಣಕಾಸು ಸಚಿವೆಯಾಗಿ ಕಾರ್ಯ ನಿರ್ವಹಿಸಿದ್ದರು. ಈ ಬಾರಿ ಯಾವ ಖಾತೆ ಸಿಗಲಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ.
V. Somanna sworn-in as Union Minister of State at @rashtrapatibhvn #OathCeremony #ShapathGrahan pic.twitter.com/8Kre1TBHG1
— PIB India (@PIB_India) June 9, 2024
ವಿ ಸೋಮಣ್ಣ
ಸತತ ಸೋಲಿನ ಬಳಿಕ ವಿ ಸೋಮಣ್ಣ ಅವರಿಗೆ ಬಿಜೆಪಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಎನ್‌ಡಿಎ ಮೈತ್ರಿಕೂಟ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ನೀಡಿತ್ತು. ಕಾಂಗ್ರೆಸ್‌ನ ಮುದ್ದಹನುಮೇಗೌಡರನ್ನು ಸೋಲಿಸಿ, ಸಂಸದರಾಗಿದ್ದಾರೆ.
ಹಿಂದಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಶೋಭಾ ಕರಂದ್ಲಾಜೆ
ಬೆಂಗಳೂರು ಉತ್ತರದಿಂದ ಮೊದಲ ಬಾರಿಗೆ ಸ್ಫರ್ಧಿಸಿ ಗೆದ್ದಿರುವ ಶೋಭಾ ಕರಂದ್ಲಾಜೆ ಅವರು ಮೋದಿ ಅವರ ಸಚಿವ ಸಂಪುಟದಲ್ಲಿ ಮತ್ತೊಮ್ಮೆ ಮಂತ್ರಿಯಾಗಿ ಹಿಂದಿಯಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಕಳೆದ ಬಾರಿ ಉಡುಪಿ-ಚಿಕ್ಕಮಗಳೂರಿನಿಂದ ಗೆದ್ದು ಮಂತ್ರಿಯಾಗಿದ್ದರು.
ಬಿಜೆಪಿ ಕಾರ್ಯಕರ್ತರೇ ‘ಗೋ ಬ್ಯಾಕ್ ಶೋಭಕ್ಕ’ ಅಭಿಯಾನ ನಡೆಸಿದ್ದರಿಂದ ಈ ಬಾರಿ ಉಡುಪಿ-ಚಿಕ್ಕಮಗಳೂರಿನ ಬದಲಿಗೆ, ಬೆಂಗಳೂರು ಉತ್ತರದಿಂದ ಮೊದಲ ಬಾರಿಗೆ ಸ್ಫರ್ಧಿಸಿದ್ದರು.
#WATCH | BJP leader Shobha Karandlaje sworn-in as Union Minister in the Prime Minister Narendra Modi-led NDA government pic.twitter.com/HpMF901TiG
— ANI (@ANI) June 9, 2024
