ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಹೊಸ ಸಂಪುಟದ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದ ಇಂಡಿಯಾ ಒಕ್ಕೂಟದ ಏಕೈಕ ವಿರೋಧ ಪಕ್ಷದ ನಾಯಕ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಆಗಿದ್ದರು. ಇದು “ಸಾಂವಿಧಾನಿಕ ಕರ್ತವ್ಯ” ಎಂದು ಖರ್ಗೆ ಹೇಳಿದ್ದಾರೆ.
“ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿರುವ ನನ್ನ ಸಾಂವಿಧಾನಿಕ ಕರ್ತವ್ಯ ಇದಾಗಿರುವುದರಿಂದ ನಾನು ಈ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದೇನೆ” ಎಂದು ಖರ್ಗೆ ಸುದ್ದಿಗಾರರಿಗೆ ತಿಳಿಸಿದ್ದಾರೆ. ಹಾಗೆಯೇ ಮೋದಿ ಅವರನ್ನು ಅಭಿನಂದಿಸುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ನಾನು ಭೇಟಿಯಾದರೆ ನೋಡುತ್ತೇನೆ” ಎಂದರು.
ಇದನ್ನು ಓದಿದ್ದೀರಾ? ಮೋದಿ ಮಂತ್ರಿಮಂಡಲದಲ್ಲಿ 71 ಸಚಿವರ ಪ್ರಮಾಣ ವಚನ: 24 ರಾಜ್ಯಗಳಿಗೆ, ಮಿತ್ರಪಕ್ಷಗಳ 11 ಮಂದಿಗೆ ಸ್ಥಾನ
ಭಾನುವಾರ ನಡೆದ ಸಮಾರಂಭದಲ್ಲಿ ಇಂಡಿಯಾ ಒಕ್ಕೂಟದ ಖರ್ಗೆ ಮಾತ್ರ ಮೋದಿ ಪ್ರಮಾಣ ವಚನ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಇನ್ನು ಸಮಾರಂಭಕ್ಕೂ ಮುನ್ನವೇ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕ್ರಮದಿಂದ ಹೊರಗುಳಿಯುವುದಾಗಿ ಘೋಷಿಸಿತ್ತು.
#WATCH | On attending the oath ceremony of the new government, Congress chief Mallikarjun Kharge says, “I am attending this event because of the constitutional duty. I being the LoP in the Rajya Sabha, this is my duty…”
When asked if he would congratulate PM-designate Narendra… pic.twitter.com/BzTjKkYw87
— ANI (@ANI) June 9, 2024
ಶನಿವಾರ ಹೊಸದಾಗಿ ಚುನಾಯಿತ ಸಂಸದರನ್ನು ಭೇಟಿ ಮಾಡಿದ ನಂತರ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭಾನುವಾರದ ಪ್ರಧಾನಿ ಮೋದಿಯವರ ಪ್ರಮಾಣವಚನ ಸಮಾರಂಭದಲ್ಲಿ ಟಿಎಂಸಿ ಭಾಗವಹಿಸುವುದಿಲ್ಲ ಎಂದು ಹೇಳಿದರು.
“ನಮಗೆ ಇನ್ನೂ ಆಹ್ವಾನ ಬಂದಿಲ್ಲ. ಒಂದು ವೇಳೆ ಬಂದರೂ ನಾವು ಸಮಾರಂಭಕ್ಕೆ ಹಾಜರಾಗುವುದಿಲ್ಲ. ಈ ಸರ್ಕಾರವು ಪ್ರಜಾಸತ್ತಾತ್ಮಕವಾಗಿ ಮತ್ತು ಅಸಾಂವಿಧಾನಿಕವಾಗಿ ರಚನೆಯಾಗುತ್ತಿದೆ. ಈ ಸರ್ಕಾರಕ್ಕೆ ನಮ್ಮ ಶುಭ ಹಾರೈಕೆಗಳನ್ನು ನೀಡಲು ಸಾಧ್ಯವಿಲ್ಲ. ನಾವು ದೇಶಕ್ಕೆ ಮತ್ತು ದೇಶದ ಜನರಿಗೆ ನಮ್ಮ ಶುಭ ಹಾರೈಕೆಗಳನ್ನು ನೀಡುತ್ತೇವೆ” ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದರು.
ಇದನ್ನು ಓದಿದ್ದೀರಾ? ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ
ಇನ್ನು ರಾಜ್ಯಸಭಾ ಸದಸ್ಯ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು, “ವಿದೇಶಿ ನಾಯಕರಿಗೆ ಮಾತ್ರ ಆಹ್ವಾನಗಳನ್ನು ಕಳುಹಿಸಲಾಗಿದೆ. ಇಲ್ಲಿಯವರೆಗೆ ನಮ್ಮ ನಾಯಕರಿಗೆ ಆಹ್ವಾನ ಬಂದಿಲ್ಲ. ಇಂಡಿಯಾ ಒಕ್ಕೂಟದ ನಾಯಕರಿಗೆ ಆಹ್ವಾನ ಬಂದಾಗ ಹಾಜರಾಗುವುದೋ ಬೇಡವೋ ನಿರ್ಧರಿಸಲಾಗುವುದು” ಎಂದು ಹೇಳಿದ್ದರು.
ಇನ್ನು ಸಮಾಜವಾದಿ ಪಕ್ಷ (ಎಸ್‌ಪಿ), ಆರ್‌ಜೆಡಿ, ಸಿಪಿಐ (ಎಂಎಲ್), ಸಿಪಿಐ, ಸಿಪಿಐ, ಎಎಪಿ, ಜೆಎಂಎಂ, ಡಿಎಂಕೆ, ಶಿವಸೇನೆ (ಯುಬಿಟಿ), ಎನ್‌ಸಿಪಿಯಂತಹ ಇತರೆ ಇಂಡಿಯಾ ಒಕ್ಕೂಟದ ನಾಯಕರು ಭಾನುವಾರದ ಪ್ರಮಾಣ ವಚನ ಸಮಾರಂಭದಲ್ಲಿ ಭಾಗಿಯಾಗಿಲ್ಲ.