ನವದೆಹಲಿಯಲ್ಲಿರುವ ಎಎಪಿ ಮುಖ್ಯ ಕಚೇರಿಯನ್ನು ಖಾಲಿ ಮಾಡುವ ಗಡುವಿನ ದಿನಾಂಕವನ್ನು ಸುಪ್ರೀಂ ಕೋರ್ಟ್ ಆಗಸ್ಟ್ 10ರವರೆಗೂ ವಿಸ್ತರಿಸಿದೆ. ಈ ಮೊದಲು ಜೂನ್ 15ರೊಳಗೆ ಕಚೇರಿ ತೆರವುಗೊಳಿಸುವ ದಿನಾಂಕವನ್ನು ನಿಗದಿಪಡಿಸಲಾಗಿತ್ತು. ಎಎಪಿ ಹೆಚ್ಚುವರಿ ಸಮಯ ಕೇಳಿ ಮನವಿ ಸಲ್ಲಿಸಿದ ಹಿನ್ನೆಲೆ ಗಡುವನ್ನು ವಿಸ್ತರಿಸಲಾಗಿದೆ.
ರಜಾಕಾಲದ ನ್ಯಾಯಾಧೀಶರಾದ ವಿಕ್ರಮ್ ನಾಥ್ ಹಾಗೂ ಸಂದೀಪ್ ಮೆಹ್ತಾ ಅವರಿದ್ದ ಪೀಠ ಎಎಪಿ ಪರ ಹಾಜರಾಗಿದ್ದ ಸಲ್ಲಿಕೆಗಳನ್ನು ಗಮನಿಸಿ ಗಡುವಿನ ಅವಧಿಯನ್ನು ಆಗಸ್ಟ್ 10ಕ್ಕೆ ವಿಸ್ತರಿಸಿ ಆದೇಶ ನೀಡಿದರು.
“ಪ್ರಕರಣದ ವಾಸ್ತವ ಮತ್ತು ಸಂದರ್ಭಗಳನ್ನು ಪರಿಗಣಿಸಿ ಕೊನೆಯ ಅವಕಾಶಗಳನ್ನು ನೀಡಲಾಗುತ್ತಿದ್ದು, ಆಗಸ್ಟ್ 10ಕ್ಕೆ ಗಡುವನ್ನು ವಿಸ್ತರಿಸಲಾಗಿದೆ. ಅರ್ಜಿದಾರರು ಶಾಂತಿಯುತವಾಗಿ ಆಸ್ತಿಯನ್ನು ಹಸ್ತಾಂತರಿಸಬೇಕು” ಎಂದು ಪೀಠವು ಆದೇಶಿಸಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದುಬಾರಿ ಚುನಾವಣೆಗಳು, ಸಾಮಾನ್ಯರ ಸ್ಪರ್ಧೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ
ನಮ್ಮದು ರಾಷ್ಟ್ರೀಯ ಪಕ್ಷವಾದ ಕಾರಣ ನ್ಯಾಯಾಲಯದಿಂದ ಹೆಚ್ಚುವರಿ ಜಾಗವನ್ನು ನೀಡುವುದಕ್ಕೆ ಅನುಮತಿಸಬೇಕು ಎಂದು ಈ ಹಿಂದೆ ಎಎಪಿ ಮಾಡಿದ ಮನವಿಗೆ ಸುಪ್ರೀಂ ಕೋರ್ಟ್ ಸಮ್ಮತ್ತಿಸಿರಲಿಲ್ಲ.
“ಪ್ರತೀ ವರ್ಷವು ನಮ್ಮ ಕಟ್ಟಡದ ವೆಚ್ಚವು ಹೆಚ್ಚಾಗುತ್ತಿದೆ.ಆಗಸ್ಟ್‌ವರೆಗೆ ನ್ಯಾಯಾಲಯ ಪರಿಗಣಿಸಬಹುದು. ಅದಕ್ಕಿಂತ ಹೆಚ್ಚು ಸಾಧ್ಯವಿಲ್ಲ.ಕೇಂದ್ರ ಮತ್ತು ಅವರ ನಡುವೆ ಯಾವುದೇ ರಾಜಕೀಯವಿರಬಹುದು. ಆದರೆ ನಮಗೆ 90 ಕೋರ್ಟ್ ಕೊಠಡಿಗಳ ಕೊರತೆಯಿದೆ” ಎಂದು ದೆಹಲಿ ಹೈಕೋರ್ಟ್ ಪರ ಹಾಜರಿದ್ದ ನ್ಯಾಯಾಧೀಶರು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿದರು.
