ತುಮಕೂರು ಜಿಲ್ಲಾಡಳಿತದ ನಿರ್ಲಕ್ಷ್ಯದಿಂದಾಗಿ 70ರ ಇಳಿವಯಸ್ಸಿನಲ್ಲಿ ಗುದ್ದಲಿ ಹಿಡಿದು ರೈತರೊಬ್ಬರು ರಾಜಕಾಲುವೆ ಹೂಳು ತೆಗೆದಿದ್ದು, ಇವರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದಿದೆ.
ತುಮಕೂರು ನಗರದ ಹೊರವಲಯದ ಗಣೇಶ ನಗರದ ರೈತ ಲಕ್ಷ್ಮಯ್ಯ ಗುದ್ದಲಿ ಹಿಡಿದು ಹೂಳು ತೆಗೆಯುವ ಕಾರ್ಯ ಮಾಡಿದ್ದಾರೆ. ಕಳೆದ ಮೂರು ವರ್ಷದಿಂದ ಜಿಲ್ಲಾಡಳಿತ ರಾಜಕಾಲುವೆ ಹೂಳು ತೆಗೆದಿರಲಿಲ್ಲ. ಇದರಿಂದ ಭಾರೀ ಮಳೆಗೆ ರಾಜಕಾಲುವೆ ತುಂಬಿ ಬಡಾವಣೆಗೆ ನೀರು ನುಗ್ಗಿತ್ತು. ಇದರಿಂದ ಬೇಸತ್ತು ಸ್ವತಃ ತಾನೇ ಗುದ್ದಲಿ ಹಿಡಿದು ತಮ್ಮ ತೋಟದ ಪಕ್ಕದಲ್ಲಿ ಹಾದು ಹೋಗಿರುವ ರಾಜಕಾಲುವೆ ಸ್ವಚ್ಛತೆ ಮಾಡಿದ್ದಾರೆ. ಕಳೆದ ಎರಡು ದಿನದಿಂದ ಏಕಾಂಗಿಯಾಗಿ ರಾಜಕಾಲುವೆ ಅಗೆಯುತ್ತಿದ್ದಾರೆ. ಮಳೆ ನೀರು ಸರಾಗವಾಗಿ ಹರಿಯಲು ಶ್ರಮಿಸಿದ್ದಾರೆ.
“ಮಳೆ ಬಂದರೆ ತೋಟಕ್ಕೆ, ಮನೆಗಳಿಗೆ ನೀರು ನುಗ್ಗುತ್ತಿದೆ. ಅಧಿಕಾರಿಗಳಿಗೆ ತಿಳಿಸಿದರೆ ಯಾರೂ ಸ್ಪಂದಿಸುತ್ತಿಲ್ಲ. ರಾಜಕಾಲುವೆ ಹೂಳು ತೆಗೆದು ಮೂರು ವರ್ಷವಾಗಿದೆ. ಪ್ರತಿದಿನ ಎಷ್ಟು ಸಾಧ್ಯವೋ ಅಷ್ಟು ಕೆಲಸ ಮಾಡುತ್ತಿದ್ದೇನೆ. ನಮ್ಮ ಕೆಲಸವನ್ನು ನಾವೇ ಮಾಡಿಕೊಳ್ಳಬೇಕು” ಎನ್ನುತ್ತಾರೆ ರೈತ ಲಕ್ಷ್ಮಯ್ಯ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳ ನೇಮಕಾತಿ ವಿಳಂಬ; ಆದೇಶಪ್ರತಿ, ಗೆಜೆಟ್‌ಗಾಗಿ ಅಭ್ಯರ್ಥಿಗಳ ಪಟ್ಟು
“ಜಿಲ್ಲಾಡಳಿತ ಇನ್ನಾದರೂ ಎಚ್ಚೆತ್ತುಕೊಂಡು ರಾಜಕಾಲುವೆ ಹೂಳು ತೆಗೆಸಲು ಮುಂದಾಗಬೇಕಿದೆ” ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
