ಲೋಕಸಭೆ ಪ್ರವೇಶಿಸಿದ ಚಂದ್ರಶೇಖರ ಆಜಾದ್ ಎಂಬ ದಲಿತಶಕ್ತಿ

Date:

Advertisements
ಚುನಾವಣಾ ರಾಜಕಾರಣವು ಸೈದ್ಧಾಂತಿಕ ಸಾರವನ್ನು ಕುಂದಿಸಿ ನೀರು ನೀರಾಗಿಸುತ್ತದೆ. ಭ್ರಷ್ಟಗೊಳಿಸುವ ರಾಜಕಾರಣದ ಗುಣ ನನ್ನನ್ನು ಭಯಪಡಿಸುತ್ತದೆ. ರಾಜಕಾರಣದಿಂದ ದೂರ ಉಳಿದರೆ ನನ್ನ ಸಮುದಾಯದ ಒಳಿತಿಗೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲೆ. ಖುದ್ದು ಚುನಾವಣೆಗೆ ನಿಲ್ಲಲಾರೆ. ಸರಿಯಾದ ಜನರನ್ನು ಬೆಂಬಲಿಸುತ್ತೇವೆ ಎಂಬ ಅವರ ನಿಲುವು 2019ರಲ್ಲಿ ಬದಲಾಯಿತು. ಚುನಾವಣೆ ಹಾದಿ ತುಳಿದು ಗೆದ್ದರು.

 

ಅವು 2017ರ ದಿನಗಳು.ದೇಶದ ಭದ್ರತೆಗೆ ಅಪಾಯಕಾರಿ ಎಂದು ಹಣೆಪಟ್ಟಿ ಹಚ್ಚಿ ಯುವ ದಲಿತ ತಲೆಯಾಳುವನ್ನು ಉತ್ತರಪ್ರದೇಶದ ಯೋಗಿ ಸರ್ಕಾರ ಹದಿನೈದು ತಿಂಗಳು ಜೈಲಿನಲ್ಲಿಟ್ಟಿತ್ತು ಆತನ ಹೆಸರು ಚಂದ್ರಶೇಖರ ಆಜಾದ್ ಅಲಿಯಾಸ್ ರಾವಣ. ಈತನ ತಮ್ಮನ ಹೆಸರು ಭಗತ್ ಸಿಂಗ್. ಪಶ್ಚಿಮೀ ಉತ್ತರಪ್ರದೇಶದ ಭೀಮ್ ಆರ್ಮಿ- ಭಾರತ್ ಏಕತಾ ಮಿಷನ್ ಎಂಬ ದಲಿತ ಸಂಘಟನೆಯ ಸ್ಥಾಪಕ. ಚಮ್ಮಾರ ಅಸ್ಮಿತೆಯನ್ನು ಢಾಳಾಗಿ ಧರಿಸಿದವರು. ದಲಿತರ ಮೇಲಿನ ಅತ್ಯಾಚಾರಗಳ ವಿರುದ್ಧ ಪ್ರತಿಭಟನೆಗಳನ್ನು ಸಂಘಟಿಸಿದವರು. ಅಂಬೇಡ್ಕರ್ ಪ್ರತಿಮೆಗೆ ಮೇಲೆ ಬುಲ್ಡೋಜರ್ ಹರಿಸುವುದಕ್ಕೆ ಅಡ್ಡ ನಿಂತವರು. ದಲಿತ-ಮುಸ್ಲಿಮ್ ಒಗ್ಗಟ್ಟಿಗೆ ದುಡಿಯುತ್ತಿರುವವರು.

37ರ ಹರೆಯದ ಈ ಯುವಕ ಆಜಾದ್ ಸಮಾಜ್ ಪಾರ್ಟಿಯನ್ನು ಸ್ಥಾಪಿಸಿ ಮೊನ್ನೆ ನಗೀನ ಕ್ಷೇತ್ರದಿಂದ ಲೋಕಸಭೆಯನ್ನು ಪ್ರವೇಶಿಸಿದ್ದಾರೆ. ಬಿ.ಎಸ್.ಪಿ. ಭದ್ರಕೋಟೆ ನಗೀನ. ಒಂದೂವರೆ ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ. ಸಹಾರಣಪುರ ಸೀಮೆಯಲ್ಲಿ ದಲಿತರ ಮೇಲೆ ರಜಪೂತರು ನಡೆಸಿದ ದಾಳಿಯ ವಿರುದ್ಧದ ಆಂದೋಲನದ ನಾಯಕತ್ವವನ್ನು ಚಂದ್ರಶೇಖರ್ ವಹಿಸಿದ್ದರು. ‘ಜೈ ಗ್ರೇಟ್ ರಜಪುತಾನಾ’ ಘೋಷಣೆಗೆ ಪ್ರತಿಯಾಗಿ ‘ಜೈ ಗ್ರೇಟ್ ಚಮಾರ್’ ಪ್ರತಿರೋಧ ಎಬ್ಬಿಸಿದ್ದರು.

ಸಹಾರಣಪುರ ಸನಿಹದ ಶಬ್ಬೀರ್ ಪುರ್ ಗ್ರಾಮದ ರಜಪೂತರು ರಾಣಾಪ್ರತಾಪ ಉತ್ಸವದ ಮೆರವಣಿಗೆ ತೆಗೆದಿದ್ದರು. ಮೆರವಣಿಗೆ ದಲಿತ ವಸತಿ ಪ್ರದೇಶಗಳನ್ನು ಹಾಯುತ್ತಲಿತ್ತು. ಕಿವಿ ಗಡಚಿಕ್ಕುವ ಡಿ.ಜೆ.ಸಂಗೀತದ ಅಬ್ಬರವನ್ನು ತಗ್ಗಿಸಬೇಕೆಂಬ ದಲಿತರ ಮನವಿಗೆ ಬೆಲೆ ಸಿಗಲಿಲ್ಲ. ಪೊಲೀಸ್ ಮಧ್ಯಪ್ರವೇಶದ ನಂತರ ಸಂಗೀತದ ಅಬ್ಬರ ಅಡಗಿತು. ಅವಮಾನವೆಂದು ಬಗೆದ ರಜಪೂತರು ತಲವಾರುಗಳು, ಬಂದೂಕುಗಳು, ಕಲ್ಲುಗಳನ್ನು ಹಿಡಿದು ದಲಿತರ ಮನೆಗಳ ಮೇಲೆ ದಾಳಿ ನಡೆಸಿದರು. ಅಂಬೇಡ್ಕರ್ ಪ್ರತಿಮೆ ಭಗ್ನವಾಯಿತು. ಸಂತ ರವಿದಾಸರ ದೇವಾಲಯಕ್ಕೆ ನುಗ್ಗಿ ಪ್ರತಿಮೆ ಉರುಳುಸಿ ಮೂತ್ರ ವಿಸರ್ಜಿಸಿದರು. ಮನೆಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟರು. ಅಂಬೇಡ್ಕರ್ ಪಟಗಳು, ಪುಸ್ತಕಗಳು, ಒಲೆ ಮೇಲಿನ ಅಡುಗೆ, ಕಾಳು ಕಡ್ಡಿಗಳು, ಮೋಟರ್ ಸೈಕಲ್, ಟೀವಿ ಸೆಟ್ಟುಗಳನ್ನು ಸುಟ್ಟು ಹಾಕಿದರು. ನಗನಾಣ್ಯ ದೋಚಿದರು. ಪಾತ್ರೆ ಪಡಗಗಳನ್ನೂ ಬಿಡದೆ ಕೊಚ್ಚಿ ಹಾಕಿದರು. ಅಡ್ಡ ಬಂದವರ ಮೇಲೆ ತಲವಾರುಗಳ ಬೀಸಿದರು. ಬಂದೂಕಿನ ಗುಂಡುಗಳು ಸಿಡಿದವು ಕೂಡ.

Advertisements

ಮೂಕ ಜಾನುವಾರುಗಳನ್ನೂ ಬಿಡದೆ ಥಳಿಸಿದರು. ಹೆಣ್ಣುಮಕ್ಕಳ ಬಟ್ಟೆ ಹರಿದರು. ಸ್ತನ ಕತ್ತರಿಸುವ ಪ್ರಯತ್ನಗಳಲ್ಲಿ ಗಾಯಗೊಂಡವರ ಗಾಯಗಳು ಇನ್ನೂ ಹಸಿ ಹಸಿ. ಹಲ್ಲೆಕೋರರಿಂದ ರಕ್ಷಿಸಲು ಮಕ್ಕಳನ್ನು ಮಂಚಗಳೊಳಗೆ ಮುಚ್ಚಿಡಲಾಯಿತು. ದಾಳಿಕೋರರಿಗೆ ಪೊಲೀಸರ ಸಂಪೂರ್ಣ ‘ಸಹಕಾರ’ವಿತ್ತು. ಅಂಬೇಡ್ಕರ್ ಗೆ ಧಿಕ್ಕಾರ, ಜೈ ಶ್ರೀರಾಮ್, ಜೈ ರಾಣಾ ಪ್ರತಾಪ್ ಘೋಷಣೆಗಳು ಮೊಳಗಿದವು. ದಲಿತ ಹೆಣ್ಣುಮಕ್ಕಳನ್ನು ಬೆದರಿಸಿ ಅವರಿಂದ ‘ಜೈ ಬೋಲೋ ರಾಜಪುತಾನಾ’ ಘೋಷಣೆ ಕೂಗಿಸಲಾಯಿತು. ಕೊಳವೆ ಬಾವಿಗಳ ಹ್ಯಾಂಡ್ ಪಂಪುಗಳನ್ನು ಕಡಿದು ಹಾಕಲಾಯಿತು. ಹಲ್ಲೆಕೋರರ ಮೇಲೆ ಎಫ್.ಐ.ಆರ್. ದಾಖಲಿಸಿ ಕ್ರಮ ಜರುಗಿಸಬೇಕೆಂಬ ದಲಿತರ ಆಗ್ರಹಕ್ಕೆ ಜಿಲ್ಲಾಡಳಿತ ಕಿವುಡಾಯಿತು. ”ಭೀಮ್ ಆರ್ಮಿ”ಯ ಮುಂದಾಳಾತ್ವದಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ರಜಪೂತ ದಲಿತ ಯುವಕರಿಬ್ಬರು ಮಡಿದಿದ್ದರು.

ತಮ್ಮ ಬಿಡುಗಡೆಗೆ ಮಾಯಾವತಿ ರಾಜಕೀಯ ಒತ್ತಡ ಹೇರಲಿಲ್ಲ ಎಂಬ ಕುರಿತು ಬೇಸರ ಇದೆಯೇ ಎಂಬ ಪ್ರಶ್ನೆಗೂ ಚಾಕಚಕ್ಯತೆಯ ಉತ್ತರ ನೀಡಿದ್ದರು.

– ‘ಸಾಮಾಜಿಕ ಒತ್ತಡವನ್ನು ಮಾತ್ರವೇ ನಾನು ಬಲ್ಲೆ. ರಾಜಕೀಯ ಒತ್ತಡ ನನಗೆ ಗೊತ್ತಿಲ್ಲ’. ಚಂದ್ರಶೇಖರ್ ಮತ್ತು ಭೀಮ್ ಆರ್ಮಿಯನ್ನು ಮಾಯಾವತಿಯವರು ‘ಬಿಜೆಪಿಯ ಬಿ ಟೀಮ್’ ಎಂದು ಜರೆದದ್ದು ಉಂಟು. ಈ ಟೀಕೆಯಿಂದ ಚಂದ್ರಶೇಖರ್ ವಿಚಲಿತರಾಗಿಲ್ಲ. ಕಾಲ ಕೆಳಗಿನ ಹಾದಿಯ ನಿಜನೋಟವನ್ನು ಕಳೆದುಕೊಂಡಿಲ್ಲ. ಬುವಾಜಿಯನ್ನು (ತಂದೆ ಅಥವಾ ತಾಯಿಯ ಸೋದರಿಯನ್ನು ಹಿಂದಿಯಲ್ಲಿ ಬುವಾ ಅಥವಾ ಬುವಾಜಿ ಎಂದು ಕರೆಯುತ್ತಾರೆ) ಬೆಂಬಲಿಸದೆ ಹೋದರೆ ಭೀಮ್ ಆರ್ಮಿಗೆ ಅರ್ಥವೇ ಇಲ್ಲ. ಕಾಂನ್ಶೀರಾಮ್ ಸಾಹೇಬರೊಂದಿಗೆ ಮತ್ತು ಅವರು ತೀರಿಕೊಂಡ ನಂತರವೂ ಆಕೆ ದಲಿತ ಸಮುದಾಯಗಳಿಗಾಗಿ ಬಹುವಾಗಿ ಕಷ್ಟಪಟ್ಟಿದ್ದಾರೆ. ಜನರ ನೈತಿಕಸ್ಥೈರ್ಯವನ್ನು ಹೆಚ್ಚಿಸಲು, ಅವರಿಗೆ ಓದು ಬರೆಹ ಕಲಿಸಿ ಸಬಲರಾಗಿಸಲು, ಸಮಾಜವನ್ನು ಕಟ್ಟಲು ಶ್ರಮಿಸುವುದು ಇದೀಗ ನಮ್ಮ ಸರದಿ. ಆಕೆ ಚುನಾವಣಾ ರಾಜಕಾರಣ ಮುಂದುವರೆಸಲಿ. ನಮ್ಮಿಬ್ಬರದು ಒಂದೇ ರಕ್ತ. ಆಕೆಗೆ ನನ್ನ ಮೇಲೆ ದೂರುಗಳಿದ್ದಾವು. ಆದರೆ ನನಗೆ ಯಾವ ಮುನಿಸೂ ಇಲ್ಲ. ನನ್ನ ‘ಬುವಾ’ ಕುರಿತು ಕೆಟ್ಟ ಮಾತಾಡುವ ಸಂಸ್ಕಾರ ನನ್ನದಲ್ಲ. ಬಿಜೆಪಿಯ ಸೋಲು ನಮ್ಮ ಸಮಾನ ಗುರಿ. ಬಿಜೆಪಿಯನ್ನು ಸೋಲಿಸಿದ ನಂತರ ಭೀಮ್ ಆರ್ಮಿ ಮತ್ತು ಬಿ.ಎಸ್.ಪಿ. ಒಂದಾಗಲಿವೆಯೇ ಎಂಬ ಪ್ರಶ್ನೆಗೆ ಅವರ ಉತ್ತರ ಸ್ಪಷ್ಟ- ನನ್ನ ದಾರಿ ಬಹುಜನರದು. ಸರ್ವಜನರ ರಾಜಕಾರಣಕ್ಕೆ (ದಲಿತರಲ್ಲದ ಇತರೆಲ್ಲ ಸಾಮಾನ್ಯ ವರ್ಗಗಳನ್ನು ಒಳಗೊಂಡ ರಾಜಕಾರಣ) ಬುವಾಜಿ ಧುಮುಕಬಹುದು. ಆದರೆ ನನ್ನ ಹಾದಿ ಬದಲಾಗದು ಎಂದಿದ್ದರು.

ಚುನಾವಣಾ ರಾಜಕಾರಣವು ಸೈದ್ಧಾಂತಿಕ ಸಾರವನ್ನು ಕುಂದಿಸಿ ನೀರು ನೀರಾಗಿಸುತ್ತದೆ. ಭ್ರಷ್ಟಗೊಳಿಸುವ ರಾಜಕಾರಣದ ಗುಣ ನನ್ನನ್ನು ಭಯಪಡಿಸುತ್ತದೆ. ರಾಜಕಾರಣದಿಂದ ದೂರ ಉಳಿದರೆ ನನ್ನ ಸಮುದಾಯದ ಒಳಿತಿಗೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲೆ. ಖುದ್ದು ಚುನಾವಣೆಗೆ ನಿಲ್ಲಲಾರೆ. ಸರಿಯಾದ ಜನರನ್ನು ಬೆಂಬಲಿಸುತ್ತೇವೆ ಎಂಬ ಅವರ ನಿಲುವು 2019ರಲ್ಲಿ ಬದಲಾಯಿತು. ಚುನಾವಣೆ ಹಾದಿ ತುಳಿದು ಗೆದ್ದರು.

ಧರ್ಮದ ಹೆಸರಿನಲ್ಲಿ ಸಮಾಜವನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ. ಈ ಧಾರ್ಮಿಕ ಕಥಾನಕದ ಬಲೆಗೆ ಬೀಳದೆ ಹೋಗಿದ್ದರೆ, ದಲಿತರಿಗೆ ತಮ್ಮ ಶಕ್ತಿಯ ಅರಿವು ಆಗಿರುತ್ತಿತ್ತು. ಆಂದೋಲನಗಳು ನಾಯಕರನ್ನು ಹುಟ್ಟಿಸುತ್ತವೆ ಅಷ್ಟೇ. ಆದರೆ ನಮ್ಮ ಗುರಿ ಶೋಷಿತ ಜನರಿಗೆ ಶಕ್ತಿ ತುಂಬುವುದು ಎನ್ನುವ ಆಜಾದ್ ಉತ್ತರದಲ್ಲಿ ಹೊಸ ಚಿಂತನೆಯನ್ನು ಗುರುತಿಸಬಹುದು. ಅತ್ಯಂತ ಪ್ರಭಾವಿಯಾಗಿ ಹೊರಹೊಮ್ಮಿದರೂ ಅಲ್ಪಾಯು ಆಗಿದ್ದ ಮಹಾರಾಷ್ಟ್ರದ ದಲಿತ ಪ್ಯಾಂಥರ್ ಪಕ್ಷದ ನಂತರ ಮತ್ತೊಂದು ಆಕ್ರಮಣಕಾರಿ ಸಂಘಟನೆಯನ್ನು ಭೀಮ್ ಆರ್ಮಿಯ ಹುಟ್ಟಿನ ತನಕ ರಾಜಕಾರಣ ಕಂಡಿರಲಿಲ್ಲ

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X