ಚುನಾವಣೆ ಯುದ್ಧವಲ್ಲ ಸ್ಪರ್ಧೆ. ಚುನಾವಣೆಗಳು ಮುಗಿದಿವೆ. ಈಗ ರಾಷ್ಟ್ರ ನಿರ್ಮಾಣದತ್ತ ಗಮನ ಹರಿಸಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಮಧ್ಯಪ್ರದೇಶದ ನಾಗ್ಪುರದಲ್ಲಿ ಆರ್‌ಎಸ್‌ಎಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಚುನಾವಣೆಯು ಒಮ್ಮತ ಮೂಡಿಸುವ ಪ್ರಕ್ರಿಯೆಯಾಗಿದೆ. ಸಂಸತ್ತಿಗೆ ಎರಡು ಬದಿಗಳಿವೆ. ಆದ್ದರಿಂದ ಯಾವುದೇ ಪ್ರಶ್ನೆಯ ಎರಡೂ ಅಂಶಗಳನ್ನು ಪರಿಗಣಿಸಬಹುದು. ಪ್ರತಿಯೊಂದು ಸಮಸ್ಯೆಯು ಎರಡು ಆಯಾಮಗಳನ್ನು ಹೊಂದಿರುತ್ತದೆ. ಒಂದು ಪಕ್ಷವು ಒಂದು ಆಯಾಮವನ್ನು ತಿಳಿಸಿದರೆ, ವಿರೋಧ ಪಕ್ಷವು ಇನ್ನೊಂದು ಆಯಾಮವನ್ನು ತಿಳಿಸಬೇಕು. ಆದ್ದರಿಂದ ನಾವು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ” ಎಂದರು.
“ಸಂಘವು ಪ್ರತಿ ಚುನಾವಣೆಯಲ್ಲಿ ಸಾರ್ವಜನಿಕ ಅಭಿಪ್ರಾಯವನ್ನು ಪರಿಷ್ಕರಿಸಲು ಕೆಲಸ ಮಾಡುತ್ತದೆ. ಈ ಬಾರಿಯೂ ಆ ಕೆಲಸವನ್ನು ಮಾಡಿದೆ. ಆದರೆ, ಫಲಿತಾಂಶದ ವಿಶ್ಲೇಷಣೆಯಲ್ಲಿ ಸಿಕ್ಕಿಹಾಕಿಕೊಳ್ಳುವುದಿಲ್ಲ. ವಿವಿಧ ವಿಷಯಗಳಲ್ಲಿ ಜಮ್ಮತವನ್ನು ರೂಪಿಸಲು ಜನರು ಸಂಸತ್ತಿಗೆ ಆಯ್ಕೆಯಾಗುತ್ತಾರೆ? ಚುನಾಔಣೆಯು ಯುದ್ಧವಲ್ಲ ಸ್ಪರ್ಧೆ” ಎಂದಿದ್ದಾರೆ.
“ಚುನಾವಣಾ ಪ್ರಚಾರದಲ್ಲಿ ಬಂದ ವಿಷಯಗಳು ಎರಡೂ ಬದಿಯಿಂದ ತುಚ್ಚಮಟ್ಟದಲ್ಲಿತ್ತು. ಪರಸ್ಪರರ ವಿರುದ್ಧದ ದಾಳಿಯು ವಿಭಜನೆಗೆ ಕಾರಣವಾಗುವ ತಂತ್ರಗಳ ಪ್ರಭಾವವನ್ನು ಸಂಪೂರ್ಣ ನಿರ್ಲಕ್ಷಿಸಿತ್ತು. ಸಾಮಾಜಿಕ ಮತ್ತು ಮಾನಸಿಕವಾಗಿ ಪ್ರಭಾವಿಸುವ ಅಂಶಗಳನ್ನು ಬಳಸಿಕೊಂಡು ಆರ್‌ಎಸ್ಎಸ್‌ನಂತಹ ಸಂಸ್ಥೆಗಳನ್ನು ಅಗತ್ಯವಾಗಿ ಚರ್ಚೆಗೆ ತರಲಾಯಿತು. ಸುಳ್ಳುಗಳನ್ನು ಹರಡಲಾಯಿತು” ಎಂದು ದೂರಿದ್ದಾರೆ.
“ಮಣಿಪುರದಲ್ಲಿ ಹಿಂಸಾಚಾರವನ್ನು ಆದ್ಯತೆಯ ಆಧಾರದ ಮೇಲೆ ಕೊನೆಗೊಳಿಸಬೇಕಾಗಿದೆ. ಮಣಿಪುರವು ಒಂದು ವರ್ಷದಿಂದ ಶಾಂತಿಗಾಗಿ ಕಾಯುತ್ತಿದೆ. ಹಿಂಸಾಚಾರವನ್ನು ನಿಲ್ಲಿಸಬೇಕು” ಎಂದಿದ್ದಾರೆ.