ಅಮೆರಿಕದ ಫೈನಾನ್ಷಿಯಲ್ ಟೈಮ್ಸ್ ವಿಶ್ಲೇಷಣೆ | ಮೋದಿ ‘ಪರಾಭವ’ಕ್ಕೆ ಆರ್ಥಿಕ ಪ್ರತಿರೋಧ ಕಾರಣವೇ ವಿನಾ, ಸರ್ವಾಧಿಕಾರಿ ಪ್ರವೃತ್ತಿ ಅಲ್ಲ

Date:

Advertisements
ತಮ್ಮ ಧರ್ಮಾಂಧ ಕಾರ್ಯಸೂಚಿಯನ್ನು ಎತ್ತಿ ಹಿಡಿಯಲು ಒಲ್ಲದ ಸೆಕ್ಯೂಲರ್ ಮಿತ್ರಪಕ್ಷಗಳ ನೆರವು ಪಡೆದು ಸರ್ಕಾರ ರಚಿಸುವ ಅನಿವಾರ್ಯಕ್ಕೆ ಸಿಲುಕಿದ್ದಾರೆ ಮೋದಿ ಎಂದು ಪತ್ರಕರ್ತ ಎಡ್ವರ್ಡ್ ಲ್ಯೂಸ್ ದೀರ್ಘ ಲೇಖನ ಬರೆದಿದ್ದಾರೆ. ಅವರ ವಿಶ್ಲೇಷಣೆಯ ಕನ್ನಡ ಅನುವಾದ ಇಲ್ಲಿದೆ.


ಮೋದಿ
ಅಲೆ ಈಗಾಗಲೇ ತುತ್ತತುದಿಗೇರಿದೆ. ಇನ್ನು ಏರಲು ಸಾಧ್ಯವೇ ಎಂಬ ಪ್ರಶ್ನೆಯನ್ನು ನಮ್ಮ ಜಾನ್ ರೀಡ್ ಎತ್ತಿದ್ದರು. ಈ ಸುಳಿವು ನೀಡಿದ್ದ ಅವರಿಗೆ ಧನ್ಯವಾದಗಳು. ಆದರೆ ಮಂಗಳವಾರ (ಜೂನ್ 4) ನಿದ್ರೆಯಿಂದ ಎದ್ದ ನಮಗೆ ಸಕಾರಾತ್ಮಕ ಆಘಾತ ಕಾದಿತ್ತು. ಭಾರತದ ಚುನಾವಣೆಗಳಲ್ಲಿ ನರೇಂದ್ರ ಮೋದಿಯವರ ಭಾರತೀಯ ಜನತಾ ಪಾರ್ಟಿ ಬಹುಮತ ಕಳೆದುಕೊಂಡಿತ್ತು. ಹೀಗಾಗುವುದೆಂದು ಮತಗಟ್ಟೆ ಸಮೀಕ್ಷೆಗಳು, ಮಾರುಕಟ್ಟೆಗಳು ಅಥವಾ ಪರಮ ಪಂಡಿತರು ಕೂಡ ಊಹಿಸಿರಲಿಲ್ಲ.

ಅಂಕಣಕಾರ ಪ್ರತಾಪ್ ಭಾನು ಮೆಹ್ತಾ ಅವರೂ ಇಂತಹ ಸೂಚನೆ ನೀಡಿದ್ದರು. ತಮ್ಮ ಧರ್ಮಾಂಧ ಕಾರ್ಯಸೂಚಿಯನ್ನು ಎತ್ತಿ ಹಿಡಿಯಲು ಒಲ್ಲದ ಸೆಕ್ಯೂಲರ್ ಮಿತ್ರಪಕ್ಷಗಳ ನೆರವು ಪಡೆದು ಸರ್ಕಾರ ರಚಿಸುವ ಅನಿವಾರ್ಯಕ್ಕೆ ಸಿಲುಕಿದ್ದಾರೆ ಮೋದಿ ಎಂದು ಪತ್ರಕರ್ತ ಎಡ್ವರ್ಡ್ ಲ್ಯೂಸ್ ದೀರ್ಘ ಲೇಖನ ಬರೆದಿದ್ದಾರೆ. ಅವರ ವಿಶ್ಲೇಷಣೆಯ ಕನ್ನಡ ಅನುವಾದ ಇಲ್ಲಿದೆ.

ಈ ವಿದ್ಯಮಾನವು ಇತರೆ ಜನಪ್ರಿಯ ಜನತಂತ್ರಗಳಿಗೆ ಕೈಮರವಾದೀತೇ ಎಂಬುದು ಕಾದು ನೋಡಬೇಕಿರುವ ಕುತೂಹಲಕರ ಸಂಗತಿ. ತುರ್ಕಿಯ ಸರ್ವಾಧಿಕಾರಿ ಎರ್ಡೋಗನ್ ಅವರ ರೆಕ್ಕೆ ಪುಕ್ಕಗಳನ್ನು ಅಲ್ಲಿನ ಮತದಾರರು ಇತ್ತೀಚೆಗಷ್ಟೇ ಕತ್ತರಿಸಿದ್ದಾರೆ. ತುರ್ಕಿಯ ನಾಲ್ಕು ದೊಡ್ಡ ರಾಜ್ಯಗಳಿಗೆ ನಡೆದ ಚುನಾವಣೆಯಲ್ಲಿ ಜನ ಪ್ರತಿಪಕ್ಷಗಳನ್ನು ಗೆಲ್ಲಿಸಿದ್ದರು. ಯೂರೋಪಿಯನ್ ಒಕ್ಕೂಟದಿಂದ ಹೊರಬೀಳಬೇಕೆಂದು ವಾದಿಸುವವರು (ದಿ ಬ್ರೆಕ್ಸಿಟೀಯರ್ಸ್) ಜುಲೈ ನಾಲ್ಕರಂದು ಜರುಗಲಿರುವ ಬ್ರಿಟನ್ ಚುನಾವಣೆಯಲ್ಲಿ ಹೊಡೆತ ತಿನ್ನುವರೇ? ಟ್ರಂಪ್ ಅವರ ಕೃತ್ಯವನ್ನು ನ್ಯಾಯಾಲಯ ಇತ್ತೀಚೆಗಷ್ಟೇ ಶಿಕ್ಷಾರ್ಹ ಅಪರಾಧ ಎಂದು ಸಾರಿದೆ.

Advertisements

ಮುಂಬರುವ ನವೆಂಬರ್ ನಲ್ಲಿ ನಡೆಯಲಿರುವ ಅಮೆರಿಕೆಯ ಚುನಾವಣೆಗಳಿಗೆ ಭಾರತೀಯ ಶಕುನಗಳೇನಾದರೂ ಇದ್ದಲ್ಲಿ ಅವು ನೇತ್ಯಾತ್ಮಕ (ನಗೆಟಿವ್) ಆಗಿರಲೂಬಹುದು. ಮೋದಿಯವರ ಹಿನ್ನಡೆಗೆ ಆರ್ಥಿಕ ಪ್ರತಿರೋಧವೇ ಮುಖ್ಯ ಕಾರಣ. ಅವರ ಸರ್ವಾಧಿಕಾರಿ ಕಾರ್ಯಸೂಚಿಯ ಕುರಿತು ಹಠಾತ್ತನೆ ಉಂಟಾದ ಅಸಹ್ಯ ಅಲ್ಲ.

ಭಾರತದ ಭಾರೀ ನಗರಗಳ ಅರ್ಥಸ್ಥಿತಿ ಉಬ್ಬರ ಕಂಡಿದೆ. ಮೋದಿ ಮತ್ತು ಭಾರತದ ಗಣ್ಯವರ್ಗಗಳನ್ನು ಕುರುಡು ಮಾಡಿದ ಸಂಗತಿಯಿದು. ವಿಶ್ವದಲ್ಲೇ ಅತಿವೇಗದಿಂದ ಬೆಳೆಯುತ್ತಿರುವ ಅರ್ಥವ್ಯವಸ್ಥೆ ಭಾರತ. ಚೀನಾವನ್ನೂ ಮೀರಿಸತೊಡಗಿದೆ. ಭಾರತದ ಷೇರು ಮಾರುಕಟ್ಟೆ ಝೇಂಕರಿಸುತ್ತಿದೆ. ಅಮೆರಿಕೆಯ ಷೇರು ಮಾರುಕಟ್ಟೆಯೂ ಅಷ್ಟೇ. ಆದರೆ ತಮಗೆ ತೃಪ್ತಿಯಿಲ್ಲವೆಂದು ಅಮೆರಿಕೆಯ ಮತದಾರರು ಮತ ಸಮೀಕ್ಷರ ಮುಂದೆ ಹೇಳುತ್ತಲೇ ಬಂದಿದ್ದಾರೆ.

ದೇಶದ ಜನಮನ ತಾವು ನಿರೀಕ್ಷಿಸಿದಷ್ಟು ತಮ್ಮ ಪರವಾಗಿಲ್ಲವೆಂದು ಮೋದಿಗೆ ನಿಚ್ಚಳವಾಗಿ ಗ್ರಹಿಸಿದ್ದರು. ಹೀಗಾಗಿಯೇ ಚುನಾವಣಾ ಪ್ರಚಾರದಲ್ಲಿ ಮಾಮೂಲಿನಂತೆ ಮುಸಲ್ಮಾನ ನಿಂದೆಯನ್ನು ಉತ್ತುಂಗಕ್ಕೆ ಒಯ್ದರು. ಆದರೆ ಅದು ಕೆಲಸ ಮಾಡಲಿಲ್ಲ. ಇಲ್ಲಿ ಬೈಡನ್ (ಅಮೆರಿಕ ಅಧ್ಯಕ್ಷ) ಕಲಿಯಬೇಕಾದ ಪಾಠವಿದೆ. ಟ್ರಂಪ್ ಕಾರ್ಯಸೂಚಿಯಿಂದಾಗಿ ಸಂಭವಿಸಿದ ಆರ್ಥಿಕ ಸಾಧಕಬಾಧಕಗಳನ್ನು ಸತತವಾಗಿ ಎತ್ತಿ ಹೇಳಬೇಕು.

‘ಚುನಾವಣಾ ಸರ್ವಾಧಿಕಾರ’ ಎಂಬ ಪದಪುಂಜ ರಷ್ಯಾ, ಹಂಗರಿಯಂತಹ ದೇಶಗಳಿಗೂ ಅನ್ವಯಿಸುತ್ತದೆ. ಆದರೆ ಅದು ಅಸಲಿಗೆ ಸೃಷ್ಟಿಯಾದದ್ದು ಭಾರತಕ್ಕಾಗಿಯೇ. ಮತಎಣಿಕೆಯ ವ್ಯವಸ್ಥೆ ಈವರೆಗೆ ಘಾಸಿಗೆ ಒಳಗಾಗದಿರುವ ಜನತಾಂತ್ರಿಕ ಮುಖವಾಡ. ಜನತಾಂತ್ರಿಕ ಅಡೆತಡೆಗಳು ಮತ್ತು ಉದಾರವಾದಿ ಲಂಗು ಲಗಾಮುಗಳು ಉದಾರವಾದಿ ಜನತಂತ್ರದ ಅವಿಭಾಜ್ಯ ಅಂಶಗಳು. ಇವುಗಳನ್ನು ತುಳಿದಿಟ್ಟ ನಂತರವೂ ತನ್ನ ತಂತ್ರ ಜನತಂತ್ರವೆಂದು ಕರೆದುಕೊಳ್ಳುವ ಅವಕಾಶವನ್ನು ಪ್ರಬಲರು- ಪ್ರಚಂಡರಿಗೆ ನೀಡುತ್ತದೆ.

ಸ್ವತಂತ್ರ ನ್ಯಾಯಾಂಗ, ಜೀವಂತ ನಾಗರಿಕ ಸಮಾಜ, ಹಾಗೂ ಸದ್ದುಗದ್ದಲದ- ಸಮತೂಕದ ಮೀಡಿಯಾದ ವಾತಾವರಣದಲ್ಲಿ ಭಾರತದ ಚುನಾವಣೆಗಳು ನಡೆದಿದ್ದರೆ ಮೋದಿ ಸೋಲುತ್ತಿದ್ದರು. ಮತಯಂತ್ರಗಳ ವಿನಾ ಉಳಿದೆಲ್ಲವನ್ನೂ ವಂಚಿಸಿದರೂ ಮೋದಿಯವರಿಗೆ ಬಹುಮತದ ಗೆಲುವು ದಕ್ಕಲಿಲ್ಲ. ಈ ವಿದ್ಯಮಾನ ಎರಡು ಸನ್ನಿವೇಶಗಳನ್ನು ಹುಟ್ಟಿ ಹಾಕಬಹುದು. ಒಂದನೆಯದಾಗಿ ಮೋದಿಯವರು ಹೆಚ್ಚು ಮಾಮೂಲಾದ ಜನತಾಂತ್ರಿಕ ಸನ್ನಿವೇಶದ ರಾಜಕಾರಣಿಯಾಗಿ ತಮ್ಮ ಕೌಶಲ್ಯ ಪ್ರದರ್ಶಿಸಬಹುದು. ಇಲ್ಲವೇ ಮತದಾನ ವ್ಯವಸ್ಥೆಯು ಅತಿಯಾಗಿ ಮುಕ್ತ ಮತ್ತು ನ್ಯಾಯಯುತವಾಗಿದೆ ಎಂದು ಪ್ರಶ್ನಿಸಬಹುದು. ಎರಡನೆಯದಾಗಿ ಬಿಜೆಪಿ ಮುಂಬರುವ ದಿನಗಳಲ್ಲಿ ಇನ್ನಷ್ಟು ಹೊಲಸಾಗಿಯೂ ಕಠೋರವಾಗಿಯೂ ನಡೆದುಕೊಳ್ಳಬಹುದು.

ಬಿಜೆಪಿಯ ಪರವಾಗಿರುವ ಆದಾಯ ತೆರಿಗೆ ಇಲಾಖೆ ಮತ್ತು ಕಾನೂನು ಜಾರಿ ಶಕ್ತಿಗಳ ಕಿರುಕುಳಕ್ಕೆ ಗುರಿಯಾದ ಅನೇಕ ಭಾರತೀಯ ಪತ್ರಕರ್ತರಲ್ಲಿ ಒಬ್ಬರು ರಾಣಾ ಅಯೂಬ್. ಅವರ ಬ್ಯಾಂಕ್ ಖಾತೆಗಳನ್ನು ನಿಶ್ಚಲಗೊಳಿಸಲಾಗಿದೆ. ಅವರ ಮೇಲೆ ಹಲವಾರು  ಹುಸಿ ಕೇಸುಗಳನ್ನು ಹೂಡಲಾಗಿದೆ. ಆದರೆ ಇದಾವುದೂ ಅವರ ದಿಟ್ಟತನವನ್ನು ಕುಂದಿಸಿಲ್ಲ, ಅವರ ವರದಿಗಾರಿಕೆಯ ಮೊನಚನ್ನು ಕಸಿದುಕೊಂಡಿಲ್ಲ.

ರಾಣಾ ಹೇಳುತ್ತಾರೆ- ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ದಿನಗಳಿಂದಲೂ ಅವರ ಕುರಿತು ವರದಿಗಳನ್ನು ಬರೆದಿದ್ದೇನೆ. ಮುಸ್ಲಿಮರ ನರಮೇಧದ ಮುಂದಾಳತ್ವ ವಹಿಸಿದ ಆಪಾದನೆ ಆಗ ಅವರ ಮೇಲಿತ್ತು. ಆಗಲೂ ಅವರ ಭಾಷಣಗಳು ವಿಷ ಕಕ್ಕುತ್ತಿದ್ದವು.

ಮುಸಲ್ಮಾನರ ಮೇಲೆ ಹಿಂದೂಗಳನ್ನು ಛೂ ಬಿಡುವಂತಿರುತ್ತಿದ್ದವು. ಈ ಚುನಾವಣೆಗಳ ಪ್ರಚಾರ ಭಾಷಣಗಳಲ್ಲಿ ಮುಸಲ್ಮಾನರನ್ನು ನುಸುಳುಕೋರರು ಮತ್ತು ದರೋಡೆಕೋರರು ಎಂದು ಅವರು ಕರೆದರು. 145 ಚುನಾವಣಾ ರ್ಯಾಲಿಗಳಲ್ಲಿ ಮುಸಲ್ಮಾನ ಪದವನ್ನು ಅವರು 200 ಸಲ ಬಳಸಿದರು. ಮತದಾರರ ಮೇಲೆ ಅವರ ಹಿಡಿತ ತಪ್ಪುತ್ತಿದ್ದ ಇಂಗಿತಗಳಿವು. ಮೋದಿ ಎಂಬ ಮಹಾಪಂಥ ಛಿನ್ನಭಿನ್ನವಾಗಲು ಶುರುವಾಯಿತು ಎಂಬುದರ ಸೂಚನೆ. ತಾವು ಪ್ರಭು ಶ್ರೀರಾಮಚಂದ್ರನ ಅವತಾರ, ಅಜೇಯ ನಾಯಕ, ದೈವಾಂಶ ಸಂಭೂತನೇ ವಿನಾ ಸಾಧಾರಣ ನರಮಾನವ ಅಲ್ಲ ಎಂದು ಘೋಷಿಸಿ ಈ ಚುನಾವಣೆಯನ್ನು ಎದುರಿಸಿದರು.

ಮೋದಿಯವರ ಮತಬೆಂಬಲದ ಆಧಾರ ಜಾತ್ಯತೀತವಾಗಿ ಬದಲಾಗಿದೆ ಮತ್ತು  ಮೋದಿಯವರ ಸರ್ವಾಧಿಕಾರಿ ಕೇಸರಿ ರೇಖೆಯ ಪ್ರಭಾವದಿಂದ ಮತದಾರರು ಮುಕ್ತರಾಗಿದ್ದಾರೆ ಎಂಬ ವಿಶ್ಲೇಷಣೆಯನ್ನು ನಾನು ಒಪ್ಪಲಾರೆ. ಜನವರಿಯಲ್ಲಿ ಜರುಗಿದ ರಾಮಮಂದಿರದ ಪ್ರಾಣಪ್ರತಿಷ್ಠಾಪನೆಯ ಸಂದರ್ಭದಲ್ಲಿ ದೇಶಕ್ಕೆ ದೇಶವೇ ಕೇಸರಿ ರಂಗಿನಲ್ಲಿ ಮುಳುಗೆದ್ದಿತ್ತು. ‘ಮುಸ್ಲಿಮರಿಗೆ ಅವರ ಜಾಗ ತೋರಿಸಿದ್ದಾರೆ, ಅವರನ್ನು ಎಲ್ಲಿ ಇಡಬೇಕೋ ಅಲ್ಲಿ ಇಟ್ಟಿದ್ದಾರೆ’  ಎಂಬ ಕಾರಣಕ್ಕಾಗಿಯೇ ಅವರು 2014ರಲ್ಲಿ ಪ್ರಧಾನಿಯಾದರು.

ಆದರೆ ಮೋದಿಯವರ ಪರಮ ಅಭಿಮಾನಿಗೂ ಎರಡು ಹೊತ್ತಿನ ಊಟ ಬೇಕು, ಮಕ್ಕಳಿಗೆ ಉದ್ಯೋಗ ಬೇಕೇ ಬೇಕು. ಮೋದಿ ಮಹಾಪರಾಧವಿದು. ನೆಲಮಟ್ಟದ ಪ್ರತಿರೋಧ ಕಣ್ಣಿಗೆ ಕಾಣದಷ್ಟು ಕುರುಡಾದರು. ಮದೋನ್ಮತ್ತರಾದರು. ಮೋದಿಯವರನ್ನಲ್ಲದೆ ಬೇರೆ ಯಾರಾದರೂ ಪ್ರಧಾನಿ ಅಭ್ಯರ್ಥಿ ಆಗಿದ್ದಲ್ಲಿ, ಬಿಜೆಪಿಯ ಸಂಸದ ಬಲ ಎರಡಂಕಿಗಳಿಗೆ ಕುಸಿಯುತ್ತಿತ್ತು.

ತಗ್ಗಿದ ಬಹುಮತವು ಮೋದಿಯವರ ಹಿಂದೂ ರಾಷ್ಟ್ರವಾದ ರಾಜಕಾರಣಕ್ಕೆ ಮೂಗುದಾರ ತೊಡಿಸುವುದೇ ಎಂಬ ಫೈನಾನ್ಷಿಯಲ್ ಟೈಮ್ಸ್ ಪತ್ರಿಕೆಯ ಪ್ರಶ್ನೆಗೆ ನನ್ನ ಉತ್ತರ- ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಅವರು ರಾಜಕೀಯ ಮಹತ್ವಾಕಾಂಕ್ಷಿಗಳು. ಅವರ ಸೆಕ್ಯೂಲರಿಸಂ ನ  ಹಿಂದಿರುವ ಚಾಲಕ ಶಕ್ತಿ ರಾಜಕೀಯ ಮಹತ್ವಾಕಾಂಕ್ಷೆಯೇ ವಿನಾ ಇನ್ನೇನೂ ಅಲ್ಲ. ಆಂಧ್ರದಲ್ಲಿ ನಾಯ್ಡು ಮುಸಲ್ಮಾನ ಮೀಸಲಾತಿಯ ಭರವಸೆ ನೀಡಿದ್ದರು. ಬಿಹಾರದಲ್ಲಿ ನಿತೀಶ್ ಅವರಿಗೆ ಪ್ರಬಲ ಮುಸ್ಲಿಮ್ ಮತಬೆಂಬಲವಿದೆ. ಈ ಅನಿವಾರ್ಯವು ಮೋದಿಯವರ ಹಿಂದೂ ರಾಷ್ಟ್ರವಾದಿ ಮಹತ್ವಾಕಾಂಕ್ಷೆಗೆ ಮೂಗುದಾರ ತೊಡಿಸಲೂಬಹುದು.

ಆದರೆ ಮೋದಿ ಮತ್ತು ಅಮಿತ್ ಶಾ ಅವರ ಕತೆ 2010ರಲ್ಲಿ ಮುಗಿದೇ ಹೋಯಿತು ಎನ್ನಲಾಯಿತು. 2010ರಲ್ಲಿ ಮುಸಲ್ಮಾನರ ನ್ಯಾಯಾಂಗ ಪ್ರಕ್ರಿಯೆಯ ಆಚೆಗೆ ಮುಸಲ್ಮಾನರ ಹತ್ಯೆಗಳ ಸಂಬಂಧ ಶಾ ಅವರನ್ನು ಬಂಧಿಸಲಾಗಿತ್ತು. ಆದರೆ ಇಬ್ಬರೂ ಪಾರಾದರು ಮತ್ತು ಅತ್ಯಂತ ಶಕ್ತಿಯುತ ನಾಯಕರಾಗಿ ಹೊರಹೊಮ್ಮಿದರು ನಾಗರಿಕ ಕಾಯಿದೆಯಂತಹ ಅತ್ಯಂತ ಕರಾಳ ಕಾಯಿದೆಗಳನ್ನು ಜಾರಿ ಮಾಡಿದರು.

ಆದರೆ ಈಗ ತಗ್ಗಿದ ಬಹುಮತದ ಹಿನ್ನೆಲೆಯಲ್ಲಿ ಮೋದಿಯವರು ಸಂವಿಧಾನ ತಿದ್ದುಪಡಿಗೆ ಕೈ ಹಾಕಲಾರರು. ಆರೆಸ್ಸೆಸ್ ಗೆ ನೂರು ವರ್ಷ ತುಂಬಲಿರುವ ಸಂಭ್ರಮಾಚರಣೆಯ ಭಾಗವಾಗಿ ‘ಹಿಂದೂ ರಾಷ್ಟ್ರ’ದ ಉಡುಗೊರೆ ನೀಡುವರೆಂದು ನಿರೀಕ್ಷಿಸಲಾಗಿತ್ತು. ಚುನಾವಣೆಯ ಫಲಿತಾಂಶಗಳು ಈ ಆಕಾಂಕ್ಷೆಗೆ ‘ಬ್ರೇಕ್’  ಹಾಕಿರಬಹುದು. ಸದ್ಯಕ್ಕೆ ಮುಸಲ್ಮಾನರಿಗೆ ಉಸಿರಾಡುವ ಅವಕಾಶ ಸಿಕ್ಕಿರಬಹುದು. ಪ್ರತಿರೋಧಕ್ಕೆ ಮರುಜೀವ ನೀಡುವ ಅವರ ಬಯಕೆಗೆ ನೀರೆರೆದಿರಬಹುದು. ಕತ್ತಲಿನಿಂದ ಬೆಳಕಿನತ್ತ ಹೆಜ್ಜೆ ಇರಿಸುವ ಧೈರ್ಯ ತುಂಬಬಹುದು. ಭಾರತದ ಮುಸ್ಲಿಮ್ ಪ್ರಜೆಯಾಗಿ ನನ್ನ ಸ್ವಾತಂತ್ರ್ಯದ ಆವರಣವನ್ನು ಮತ್ತೆ ದಕ್ಕಿಸಿಕೊಳ್ಳುವ ಕನಿಷ್ಠ ಆಶಾಭಾವನೆ ನನ್ನದು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

Download Eedina App Android / iOS

X