ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಲ್ಲ – ಪ್ರಜಾಪ್ರಭುತ್ವದ ಕಗ್ಗೊಲೆ

Date:

Advertisements

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ. ಆದರೆ, ನಾನು ಅದನ್ನು ಗೆಲುವು ಎಂದು ಭಾವಿಸುವುದಿಲ್ಲ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಪರಾಜಿತ ಪಕ್ಷೇತರ ಅಭ್ಯರ್ಥಿ ಜಿ.ಬಿ ವಿನಯ್ ಕುಮಾರ್ ಹೇಳಿದರು.

ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “2 ಪಕ್ಷಗಳು ಹಣದ ಹೊಳೆಯನ್ನು ಹರಿಸಿ ಮತಗಳನ್ನು ಖರೀದಿ ಮಾಡಿದ್ದಾರೆ. ನನಗೆ ಸಿಗಬೇಕಾದ ಟಿಕೆಟ್ ಅನ್ನು ತಪ್ಪಸಿದರು. ನಾನು ಪಕ್ಷೇತರನಾಗಿ ಚುನಾವಣೆಗೆ ನಿಂತಾಗ ನನ್ನ ಜೊತೆಗಿದ್ದ ಮುಖಂಡರನ್ನು ದುಡ್ಡುಕೊಟ್ಟು ಹಣಬಲ ತೋಳ್ಬಲದಿಂದ ಹೆದರಿಸಿ ಬೆಂಬಲಿಸದಂತೆ, ಮತ ಹಾಕದಂತೆ ನೋಡಿಕೊಂಡಿದ್ದಾರೆ” ಎಂದು ಆರೋಪಿಸಿದರು.

“ಪ್ರಜಾಪ್ರಭುತ್ವದ ಉಳಿವಿಗಾಗಿ, ಪಾಳೆಗಾರಿಕೆ ವಿರುದ್ಧ ಪಕ್ಷೇತರನಾಗಿ ನಾನು ಸ್ಪರ್ಧಿಸಿದ್ದೆ ನನಗೆ ಹಣ ಹಂಚದಿದ್ದರೂ 42 ಸಾವಿರಕ್ಕೂ ಹೆಚ್ಚು ಮತ ಬಂದಿದೆ. 1 ಲಕ್ಷ 50 ಸಾವಿರ ವೋಟ್ ಸಿಗುವ ನಿರೀಕ್ಷೆಯಲ್ಲಿದ್ದೆ. ಆದರೆ, ಕಡಿಮೆ ಬಂದಿದ್ದು ನನಗೆ ಅಚ್ಚರಿ ಜೊತೆ ನೋವು ತಂದಿದೆ. ಚುನಾವಣೆಯಲ್ಲಿ ಕತ್ತಲು, ರಾತ್ರಿ ಎಂಬುದು ಸಂಸ್ಕೃತಿಯಾಗಿ ಬೆಳೆದಿದೆ” ಎಂದು ಬೇಸರ ವ್ಯಕ್ತಪಡಿಸಿದರು.

“ಈಗ ಸದ್ಯಕ್ಕೆ ರಾಜಕಾರಣದಲ್ಲಿ ಅನಾಥನಾಗಿದ್ದೇನೆ. ಆದರೆ ರಾಜಕಾರಣದಲ್ಲಿಯೇ ಮುಂದುವರೆಯುತ್ತೇನೆ . ನನ್ನ ಕನಸುಗಳು ಯಾವುದೇ ಕಾರಣಕ್ಕೂ ಕಮರುವುದಿಲ್ಲ. ಹೋರಾಟ ನಿಲ್ಲಿಸುವುದಿಲ್ಲ. ಮತ್ತೆ ಮತ್ತೆ ಬರುತ್ತೇನೆ.ಗೆಲ್ಲುತ್ತೇನೆ.ನಾನು ಹಠವಾದಿ ಜನರ ಸೇವೆ ಮಾಡುವುದು ನನ್ನ ಆಸೆ, ಅದಕ್ಕಾಗಿ ರಾಜಕಾರಣದಿಂದ ಹಿಂದೆ ಸರಿಯುವುದಿಲ್ಲ.ಎಂ.ಪಿ ಆಗಲಿಲ್ಲ ಆದರೆ ಎಂಎಲ್ ಎ ಆಗುತ್ತೇನೆಂಬ ಭರವಸೆ ನನಗಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

“ನನ್ನ ಹೋರಾಟಕ್ಕೆ ತಾತ್ಕಲಿಕವಾಗಿ ಹಿನ್ನಡೆಯಾಗಿರಬಹುದು, ನಾನು ಎಲ್ಲಿಯೂ ಹೋಗದೆ ದಾವಣಗೆರೆಯಲ್ಲಿಯೆ ಐಎಎಸ್, ಕೆಎಎಸ್ ಕೊಚಿಂಗ್, ನವೋದಯ ಕೊಚಿಂಗ್ ಪ್ರಾರಂಭಿಸಲಿದ್ದೇನೆ. ಹಾಗೂ ಮುಂದಿನ ವಿಧಾನಸಭಾ ಚುನಾವಣೆಗೆ ದಾವಣಗೆರೆ ಉತ್ತರ, ದಕ್ಷಿಣ, ಹೊನ್ನಾಳಿ, ಹರಿಹರ `ಯಾವುದಾದರು ಒಂದು ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ” ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರಂಗಸ್ವಾಮಿ, ಐಯಣ್ಣ ಮತ್ತಿತರರು ಹಾಜರಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕೊಲೆಗೈದು ಅಸಹಜ ಸಾವು ಎಂದು ಬಿಂಬಿಸಿದ ತಾಯಿ : ಪೊಲೀಸರಿಂದ ಬಂಧನ

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಕಾನಂಗಿಯಲ್ಲಿ ಬೆಚ್ಚಿಬೀಳಿಸುವಂತಹ ಘಟನೆಯೊಂದು...

ಶಿವಮೊಗ್ಗ | ಟೈಮ್ ಪಾಸ್ ಜಾಬ್ ಆಸೆಗೆ 6.78 ಲಕ್ಷ ರುಪಾಯಿ ಕಳೆದುಕೊಂಡ ಮಹಿಳೆ ; ಪ್ರಕರಣ ದಾಖಲು

ಶಿವಮೊಗ್ಗ ನಗರದ ಮಹಿಳೆಯೊಬ್ಬರು ಹೆಚ್ಚು ಹಣ ಗಳಿಸುವ ಉದ್ದೇಶದಿಂದ ಪಾರ್ಟ್‌ ಟೈಮ್‌...

ದಾವಣಗೆರೆ | ಆವರಗೆರೆ ವಸತಿರಹಿತರ ಪುನರ್ವಸತಿಗಾಗಿ ಸತ್ಯಾಗ್ರಹ: ದಸಂಸ ಸಂಚಾಲಕ ಮಲ್ಲೇಶ್

"ಆವರಗೆರೆ ವಸತಿ, ನಿವೇಶನ ರಹಿತ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಒತ್ತಾಯಿಸಿ ಕರ್ನಾಟಕ...

Download Eedina App Android / iOS

X