ಬಾಗಲಕೋಟೆ | ಶಾಂತಿ-ಸೌಹಾರ್ದವಾಗಿ ಬಕ್ರಿದ್ ಆಚರಿಸಲು ಪಿಎಸ್‌ಐ ನೇತೃತ್ವದಲ್ಲಿ ಸಭೆ

Date:

ಭಾರತವು ವಿವಿಧತೆಯಲ್ಲಿ ಏಕತೆ ಕಂಡ ದೇಶವಾಗಿದೆ. ಹಿಂದು ಮುಸ್ಲಿಮರು ಶಾಂತಿ ಮತ್ತು ಸೌಹಾರ್ದದಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಕ್ರಿದ್ ಹಬ್ಬ ಆಚರಿಸಬೇಕು ಎಂದು ಪಿಎಸ್‌ಐ ಲಕ್ಕಪ್ಪ ಜೋಡಹಟ್ಟಿ ಹೇಳಿದರು.

ಬಾಗಲಕೋಟೆ ಜಿಲ್ಲೆಯ ಹುನಗುಂದ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ಅಂಗವಾಗಿ ಪಿಎಸ್‌ಐ ನೇತೃತ್ವದಲ್ಲಿ ಸಭೆ ನಡೆದಿದೆ. ಸಭೆಯಲ್ಲಿ ಮಾತನಾಡಿದ ಪಿಎಸ್‌ಐ ಲಕ್ಕಪ್ಪ, “ಎಲ್ಲ ಹಬ್ಬಗಳನ್ನು ಸೌಹಾರ್ದ ಭಾವದಿಂದ ಆಚರಿಸುತ್ತಾರೆ. ಅದು ಈ ಮಣ್ಣಿನ ಗುಣವಾಗಿದೆ. ಇದಕ್ಕೆಲ್ಲ ಹಿರಿಯರ ಮಾರ್ಗದರ್ಶನ ಕಾರಣ” ಎಂದರು.

“ಪ್ರತಿಯೊಬ್ಬರು ಯಾವುದೇ ಧರ್ಮಕ್ಕೆ ತೊಂದರೆಯಾಗದಂತೆ ತಮ್ಮ ತಮ್ಮ ಧರ್ಮದ ಪದ್ಧತಿಯಂತೆ ಹಾಗೂ ಕೋರ್ಟ್ ನೀಡಿದ ಮಾರ್ಗಸೂಚಿಯಂತೆ ಬಕ್ರೀದ್ ಹಬ್ಬವನ್ನು ಆಚರಿಸಬೇಕು” ಎಂದು ತಿಳಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮುಸ್ಲಿಂ ಸಮುದಾಯದ ಮುಖಂಡ ಶಬ್ಬೀರ್ ಮೌಲ್ವಿ ಮಾತನಾಡಿ, “ಪಟ್ಟಣದಲ್ಲಿ ನಾವೆಲ್ಲರೂ ಅಣ್ಣತಮ್ಮಂದಿರಂತೆ ಬಾಳು ಬದುಕುತ್ತಿದ್ದೇವೆ. ನಮ್ಮ ಪಟ್ಟಣವು ಸಾಮರಸ್ಯಕ್ಕೆ ಹೆಸರಾಗಿದೆ ಅನೇಕ ವರ್ಷಗಳಿಂದ ಹಿಂದು-ಮುಸ್ಲಿಮರು ಅಣ್ಣ ತಮ್ಮಂದಿರಂತೆ ಬಾಳಿದ್ದು ಮುಂದೆಯೂ ಕೂಡ ಅದೇ ಮಾರ್ಗದಲ್ಲಿ ನಡೆಯುತ್ತೇವೆ” ಎಂದರು.

ಸಭೆಯಲ್ಲಿ ಸ್ಥಳೀಯ ನ್ಯಾಯವಾದಿ ಮಹಾಂತೇಶ ಅವಾರಿ, ರೈತ ಮುಖಂಡ ಅಮರೇಶ ನಾಗೂರ, ಅಪ್ಪು ಆಲೂರ ಶಾಂತಿ ಸಭೆ ಕುರಿತು ಮಾತನಾಡಿದರು. ಸಭೆಯಲ್ಲಿ ಮುನ್ನಾ ಭಗವಾನ, ಮಹಾಂತೇಶ ಮದುರಿ, ಪರ್ವೀಜ್ ಖಾಜಿ, ಫಕ್ರುದ್ದೀನ್ ತಾಳಿಕೋಟಿ, ಶಿವಾನಂದ ಕಂಠಿ, ಇತರರು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜು. 19: ಬ್ಯಾರಿ ಅಕಾಡೆಮಿ ಅಧ್ಯಕ್ಷ-ಸದಸ್ಯರ ಪದಗ್ರಹಣ; ‘ಪಿರ್ಸಪ್ಪಾಡ್‌’ ಬ್ಯಾರಿ ಸಾಂಸ್ಕೃತಿಕ ಸಂಭ್ರಮ

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಪಿರ್ಸಪ್ಪಾಡ್‌ (ಬ್ಯಾರಿ ಸಾಂಸ್ಕೃತಿಕ ಸಂಭ್ರಮ)...

ಧಾರವಾಡ | ಸಂಶೋಧನೆಗೆ ಜನಸಂಖ್ಯಾ ಅಧ್ಯಯನದಲ್ಲಿ ವಿಪುಲ ಅವಕಾಶಗಳಿವೆ -ಡಾ. ಎಂ. ಎನ್.ಮೇಗೇರಿ

"ಜನಸಂಖ್ಯಾ ಅಧ್ಯಯನದಲ್ಲಿ ಸಂಶೋಧನೆಗೆ ಸಾಕಷ್ಟು ಅವಕಾಶಗಳಿವೆ. ವಿದ್ಯಾರ್ಥಿಗಳು ಸಂಶೋಧನೆಗೆ ಹೆಚ್ಚಿನ ಮಹತ್ವ...

ಧಾರವಾಡ | ಕರ್ನಾಟಕ ಕಾಲೇಜಿನ ಪ್ರವೇಶಾತಿಯಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯ: ಮುತ್ತಪ್ಪ ಎಸ್ ಆಕ್ರೋಶ

ಕರ್ನಾಟಕ ಕಾಲೇಜಿನ ಪ್ರವೇಶಾತಿಯಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯ ಎಸಗುತ್ತಿದ್ದು, ಪ್ರವೇಶ ಶುಲ್ಕದ ಹೆಸರಿನಲ್ಲಿ...

ಗದಗ | ನೂತನ ಡಿಸಿಯಾಗಿ ಗೋವಿಂದ ರೆಡ್ಡಿ ನೇಮಕ; ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸುವರೇ?

ಗದಗ ಜಿಲ್ಲೆಯ ನೂತನ ಡಿಸಿಯಾಗಿ ಗೋವಿಂದ ರೆಡ್ಡಿ ಅವರು ನಿರ್ಗಮಿತ ಜಿಲ್ಲಾಧಿಕಾರಿ...