ಯಾದಗಿರಿ ಜಿಲ್ಲೆಯ ಗುರಮಠಕಲ್ ಕ್ಷೇತ್ರದ ಕಾಕಲವಾರ ಮತ್ತು ಕೋಟಿಗೆರ ಗ್ರಾಮದ ಹಲವರು ಬಿಜೆಪಿ, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದಾರೆ.
ಗುರಮಠಕಲ್ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಯಾದಗಿಜಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಸರೆಡ್ಡಿ ಎಂ ಪಾಟೀಲ್ ಅನಪುರ ಅವರ ಸಮ್ಮುಖದಲ್ಲಿ ಗ್ರಾಮಗಳ ಹಲವಾರು ಜನರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.
ಗುರಮಠಕಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ ಚಿಂಚನಸೂರ ಅವರ ಕೈ ಬಲಪಡಿಸಲು ಮತ್ತು ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು ಎಂದು ಹಲವರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸರೆಡ್ಡಿ ಎಂ ಪಾಟೀಲ್ ಅನಪುರ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಯಿಬಣ್ಣ ಬೋರಬಂಡ ವಿಜಯ್ ಕುಮಾರ್ ಚಿಂಚನಸೂರ, ಪುರಸಭೆ ಸದಸ್ಯ ಕೃಷ್ಣ ಚೆಪೆಟ್ಲಾ ಮುಖಂಡರಾದ ಖಾಜಾ ಮೈನುದ್ದಿನ್, ಸಂಜೀವ್ ಚಂದಾಪುರ್, ಆನಂದ್ ಭೋಯಿನ್ ಚಾಂದ್, ಪಾಷಾ ಮಾಣಿಕ್ ಮುಕುಡಿ ಸೇರಿದಂತೆ ಹಿರಿಯ ನಾಯಕರು ಯುವ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಕಾಂಗ್ರೆಸ್‌ಗೆ ಮತ ಹಾಕಿ ಎಂದ ಜೆಡಿಎಸ್ ಬೋಜೆಗೌಡ; ವಿಡಿಯೋ ವೈರಲ್