ಸೌಹಾರ್ದತೆಯನ್ನು ಹಾಳು ಮಾಡಲು ಪ್ರಯತ್ನಿಸುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಮಕ್ಕಳಿಗೆ ಪರಸ್ಪರ ಹಬ್ಬಗಳ ಬಗ್ಗೆ ತಿಳಿಸಿಕೊಡುವುದು ಅನಿವಾರ್ಯವಾಗಿದೆ. ಪರಸ್ಪರ ಅರಿತಾಗ ಮಾತ್ರ ಸಂಶಯಗಳಿಗೆ ಆಸ್ಪದವಿರುವುದಿಲ್ಲ ಎಂದು ಪತ್ರಕರ್ತ ಶಾರೂಕ್ ತೀರ್ಥಹಳ್ಳಿ ಹೇಳಿದರು.
ಉಡುಪಿ ಜಿಲ್ಲೆಯ ಬ್ರಹ್ಮಾವರದ ನಿರ್ಮಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳೊಂದಿಗೆ ಬಕ್ರೀದ್ ಸೌಹಾರ್ದ ಸಂದೇಶ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
“ತ್ಯಾಗ ಬಲಿದಾನದ ಸಂಕೇತವೇ ಬಕ್ರೀದ್ ಹಬ್ಬದ ಮುಖ್ಯ ಸಂದೇಶ” ಎಂದು ಹಬ್ಬದ ಇತಿಹಾಸವನ್ನು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಬಾರ್ ಸ್ಥಗಿತಗೊಳಿಸುವಂತೆ ರಾತ್ರೋರಾತ್ರಿ ಸಾರ್ವಜನಿಕರ ಪ್ರತಿಭಟನೆ
ಶಾಲೆಯ ಆಡಳಿತಾಧಿಕಾರಿ ಫಾಧರ್ ಲೆನ್‌ಸನ್ ಲೋಬೋ ಮಾತನಾಡಿ, “ಹಬ್ಬಗಳು ಶಾಂತಿಯನ್ನು, ಮಾನವೀಯ ಮೌಲ್ಯಗಳನ್ನು ಸಾರುತ್ತದೆ. ನಮ್ಮ ಶಾಲೆಯಲ್ಲಿ ದೀಪಾವಳಿ, ಕ್ರಿಸ್ಮಸ್, ಬಕ್ರೀದ್ ಹಬ್ಬವನ್ನು ವಿದ್ಯಾರ್ಥಿಗಳೊಂದಿಗೆ ಆಚರಿಸುತ್ತೇವೆ” ಎಂದು ಹೇಳಿದರು.
ವೇದಿಕೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಕನುಕ ಇದ್ದರು.
