ಉತ್ತರ ಕರ್ನಾಟಕದ ಭಾಗದಲ್ಲಿ ಹುಟ್ಟಿಕೊಂಡಿದ್ದ ಗಮಕ ಕಾವ್ಯ ಇಂದು ದಕ್ಷಿಣ ಕರ್ನಾಟಕದಲ್ಲಿ ಬೆಳೆಯುತ್ತಿದೆ. ಈ ಭಾಗದಲ್ಲಿಯೇ ಪಂಪ, ಕುಮಾರವ್ಯಾಸರು ಕಾವ್ಯ ರಚನೆ ಮಾಡಿದ್ದು, ಈ ಭಾಗದಲ್ಲಿ ಗಮಕ ಕಾವ್ಯ ಬೆಳಕಿಗೆ ಬರುತ್ತಿಲ್ಲ. ಹಾಗಾಗಿ ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಮಕ ಕಾವ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಕರ್ನಾಟಕ ಗಮಕ ಕಲಾ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ ಎ ವಿ ಪ್ರಸನ್ನ ಹೇಳಿದರು.
ರಾಯಚೂರು ನಗರದ ಕರ್ನಾಟಕ ಸಂಘದಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು ಮತ್ತು ಜಿಲ್ಲಾ ಘಟಕ ಸಂಯುಕ್ತ ಆಶ್ರಯದಲ್ಲಿ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಗಮಕವನ್ನು ಹಿಂದಿನಿಂದಲೂ ಕಟ್ಟಿ ಬೆಳೆಸಿ ಉಳಿಸಿಕೊಂಡು ಬರಲಾಗುತ್ತಿದೆ. ಗಮಕ ಕಾವ್ಯವನ್ನು ಎತ್ತರಕ್ಕೆ ಬೆಳೆಸುವ ಕೆಲಸ ನಿರಂತರವಾಗಿ ಬೆಳೆಯಬೇಕಿದೆ. ಆದರೆ ಇಂದು ಗಮಕವನ್ನು ಯಾರು ಕೇಳುತ್ತಿದ್ದಾರೆಂದು ಪ್ರಶ್ನೆ ಮಾಡುತ್ತಿದ್ದಾರೆ. ಈ ಭಾಗದ ಕವಿಗಳಾದ ಪಂಪ, ಕುಮಾರವ್ಯಾಸರಿಂದ ಹುಟ್ಟಿಕೊಂಡಿದ್ದ ಗಮಕವನ್ನು ದಕ್ಷಿಣ ಕರ್ನಾಟಕ ಭಾಗದಲ್ಲಿ ಪ್ರತಿದಿನ ಕುಮಾರವ್ಯಾಸರ ಕುರಿತು ಉಪನ್ಯಾಸ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮ ನಡೆಸಲಾಗುತ್ತಿದೆ. ಆದರೆ ಈ ಭಾಗದಲ್ಲಿ ಮಾತ್ರ ಗಮಕ ಹೆಸರಿಗೆ ಎಂಬುದಾಗಿವೆ” ಎಂದರು.
“ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿಗಳು, ಸರಸ್ವತಿ ಸಮ್ಮಾನ್ ಪ್ರಶಸ್ತಿಗಳು ಲಭಿಸಿವೆ. ಪಂಪ, ಕುಮಾರವ್ಯಾಸರ ಕಾಲದಲ್ಲಿ ಪ್ರಶಸ್ತಿಗಳು ಇದ್ದಿದ್ದರೆ ಅವರಿಗೆ ಲಭಿಸುತ್ತಿದ್ದವು. ಹಾಗಾಗಿ ಈಗಿನ ಈ ಪ್ರಶಸ್ತಿಗಳು ಅವರಿಗೆ ಸಲ್ಲುತ್ತವೆ. ಈ ಭಾಗದಲ್ಲಿ ಅನೇಕ ದಾಳಿ ನಡೆದ ಸಂದರ್ಭದಲ್ಲಿಯೂ ತಾಳೆಗರಿಗಳ ಗ್ರಂಥಗಳನ್ನು ಕಾಪಾಡಿಕೊಂಡು ಬಂದಿದೆ. ಗಮಕವನ್ನು ಉಳಿಸಿ ಬೆಳೆಸಬೇಕಾಗಿದೆ” ಎಂದರು.
“ಗಮಕವನ್ನು ಉಳಿಸಿ ಬೆಳೆಸುವ ಕೆಲಸ ಸರ್ಕಾರ ಮತ್ತು ವಿಶ್ವ ವಿದ್ಯಾಲಯಗಳು ಮಾಡಬೇಕು. ಆದರೆ, ಕೆಲಸ ಮಾಡುತ್ತಿಲ್ಲ. ನಾವು ನೀವೆಲ್ಲರೂ ಉಳಿಸಬೇಕಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಪೆಟ್ರೋಲ್ ಡಿಸೇಲ್ ದರ ಹೆಚ್ಚಳ; ದರ ಇಳಿಕೆಗೆ ಡಿವೈಎಫ್‌ಐ ಆಗ್ರಹ
ಈ ಸಂದರ್ಭದಲ್ಲಿ ದಾಸ ಸಾಹಿತ್ಯ ವಿದ್ವಾಂಸರು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಡಾ ಜಯಲಕ್ಷ್ಮಿ ಮಂಗಳಮೂರ್ತಿ, ಅಂತರಾಷ್ಟ್ರೀಯ ಕ್ಲಾರಿಯೋನೆಟ್ ವಾದಕ ಡಾ. ನರಸಿಂಹಲು ವಡವಾಟಿ, ಕನ್ನಡ ಸಂಘದ ಅಧ್ಯಕ್ಷ ಪಲಗುಲು ನಾಗರಾಜ, ಗಮಕ ಕಲಾ ಪರಿಷತ್ ಕಾರ್ಯದರ್ಶಿ ದಕ್ಷಿಣ ಮೂರ್ತಿ, ಹೊಸಪೇಟೆ ಗಮಕ ಕಲಾ ಜಿಲ್ಲಾಧ್ಯಕ್ಷ ಪಲ್ಲವಿ ಭಟ್, ಅರುಣಾ ಹಿರೇಮಠ, ವೆಂಕಟೇಶ ನವಲಿ, ಸಾಹಿತಿ ವೀರ ಹನುಮಾನ್, ಪ್ರಾಣೇಶ ಕುಲಕರ್ಣಿ ವಿಜತರಾಜೇಂದ್ರ, ಕೊಪ್ರೇಶ ದೇಸಾಯಿ, ಮಂಜುನಾಥ, ಗಾಯತ್ರಿ ಸಲವಾಡಿ ಸೇರಿದಂತೆ ಬಹುತೇಕರು ಇದ್ದರು.
ವರದಿ : ಹಫಿಜುಲ್ಲ
