ಚುನಾವಣಾ ಫಲಿತಾಂಶಕ್ಕೂ ಪೆಟ್ರೋಲ್, ಡೀಸೆಲ್ ದರ ಏರಿಕೆಗೂ ಸಂಬಂಧವಿಲ್ಲ: ಸಿಎಂ ಸಿದ್ದರಾಮಯ್ಯ

Date:

Advertisements

“ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವು ಇದ್ದದ್ದೇ, ಪೆಟ್ರೋಲ್ ಬೆಲೆ ಏರಿಕೆಗೂ ಚುನಾವಣಾ ಫಲಿತಾಂಶಕ್ಕೂ ಸಂಬಂಧವಿಲ್ಲ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಜೂನ್ 16ರಂದು ವಿಜಯಪುರ ಜಿಲ್ಲೆಯ ಇಂಚಗೇರಿ ಗ್ರಾಮದ ಹೆಲಿಪ್ಯಾಡ್‌ನಲ್ಲಿ ಮಾಧ್ಯಮದವರ ಜತೆಗೆ ಮಾತನಾಡಿದರು.

ಚುನಾವಣೆಯಲ್ಲಿ ಸೋತಿರುವುದಕ್ಕೆ ಸೇಡು ತೀರಿಸಿಕೊಳ್ಳಲು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದಾರೆ ಎಂಬ  ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಿಎಂ, “ವಿಜಯಪುರದಲ್ಲಿ ನಾವು ಸೋತಿದ್ದೇವೆ. ಕರ್ನಾಟಕದಲ್ಲಿ ನಾವು ನಿರೀಕ್ಷೆ ಮಾಡಿದಷ್ಟು ಸ್ಥಾನಗಳು ಬಂದಿಲ್ಲ. ವಿಜಯಪುರದಲ್ಲಿ ಗೆಲ್ಲುತ್ತೇವೆ ಎಂಬ ನಿರೀಕ್ಷೆಯಿತ್ತು. ಕರ್ನಾಟಕದಲ್ಲಿ ಕಳೆದ ಚುನಾವಣೆಗೆ ಹೋಲಿಕೆ ಮಾಡಿದರೆ, ಈ ಬಾರಿ ಒಂಭತ್ತು ಸ್ಥಾನಗಳನ್ನು  ಗಳಿಸಿದ್ದೇವೆ. ಬಿಜೆಪಿ ಕಳೆದ ಬಾರಿ 25 ಇದ್ದನ್ನು ಈ ಬಾರಿ 19ಕ್ಕೆ ಇಳಿದಿದ್ದಾರೆ. ನಮಗೆ 13% ಮತ ಹಂಚಿಕೆಯಾಗಿದೆ. ನಾವು ಸೋತಿದ್ದೇವೆಯೇ, ನಮ್ಮ ಲೆಕ್ಕಾಚಾರದ ಪ್ರಕಾರ, ನಿರೀಕ್ಷೆ ಮಾಡಿದಷ್ಟು ಸ್ಥಾನಗಳು ಬಂದಿಲ್ಲ ಅಷ್ಟೇ” ಎಂದರು.

Advertisements

“ಚುನಾವಣೆಯಲ್ಲಿ ಸೋತಿರುವುದು ಬಿಜೆಪಿ. ಕಳೆದ ಬಾರಿ 303 ಸ್ಥಾನಗಳನ್ನು ಪಡೆದು ಈ ಬಾರಿ 240 ಸ್ಥಾನಗಳನ್ನು ಪಡೆದು ಬಿಜೆಪಿ ಸೋತಿದೆ. ಕಳೆದ ಬಾರಿ 31% ಈ ಬಾರಿ 41% ಮತ ಹಂಚಿಕೆಯಾಗಿದೆ. 15 ಸ್ಥಾನ ಬರಬಹುದೆಂಬ ನಿರೀಕ್ಷೆಯಿತ್ತು. ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಕಡಿಮೆ ಮತ ಬಂದಿದೆ. ಮೋದಿ ಅಲೆ ಕಡಿಮೆಯಾಗಿದೆ” ಎಂದರು.

“ಪೆಟ್ರೋಲ್ ಡೀಸೆಲ್ ದರ ಏರಿಕೆಗೂ ಚುನಾವಣಾ ಫಲಿತಾಂಶಕ್ಕೂ ಸಂಬಂಧವಿಲ್ಲ. 2021ರ ಏಪ್ರಿಲ್ 11ರಂದು  ಪೆಟ್ರೋಲ್ ಮೇಲೆ 35% ತೆರಿಗೆ ಹಾಗೂ ಡೀಸೆಲ್ ಮೇಲೆ 24% ತೆರಿಗೆ ಹಾಕುತ್ತಿದ್ದರು. ನಂತರ ಕೇಂದ್ರದಲ್ಲಿ ಇಳಿಕೆ ಮಾಡಿದ್ದರಿಂದ ಇವರೂ 35 ರಿಂದ 25.92ಕ್ಕೆ ನಂತರ ಇಳಿಸಿದರು. ಡೀಸಲ್ ಮೇಲೆ 14.34ಕ್ಕೆ ಇಳಿಸಿದರು. ಶೇ.7 ರಷ್ಟು ಕಡಿಮೆ ಮಾಡಿದರು. ಏಕೆಂದರೆ, ಕೇರಳ ಆಗಲಿ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ, ತಮಿಳುನಾಡು ಕಡಿಮೆ ಮಾಡಲಿಲ್ಲ. ಈಗ ಕರ್ನಾಟಕದಲ್ಲಿ ₹99.85 ಪೆಟ್ರೋಲ್ ಬೆಲೆಯಿದೆ. ನಿನ್ನೆಯಿಂದ ಮೂರು ರೂಪಾಯಿ ಹೆಚ್ಚು ಮಾಡಿದ್ದೇವೆ. ₹102 ಗೆ ಹೆಚ್ಚಾಗಿದೆ. ಇದು ತಮಿಳುನಾಡಿಗೆ ಸಮವಾಗಿದೆ. ಕೇರಳದ ಕಾಸರಗೋಡಿನಲ್ಲಿ ₹106.66 ಇದೆ. ಆಂಧ್ರದ ಅನಂತಪುರದಲ್ಲಿ ₹109.44, ತೆಲಂಗಾಣದ ಹೈದರಾಬಾದ್‌ನಲ್ಲಿ ₹107.40 ಹಾಗೂ ಮಹಾರಾಷ್ಟ್ರದಲ್ಲಿ ₹104.46 ಇದೆ. ಇವೆಲ್ಲಕ್ಕೆ ಹೋಲಿಸಿದರೆ ನಮ್ಮ ದರ ಕಡಿಮೆ ಇದೆ” ಎಂದು ವಿವರಿಸಿದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸಮಸ್ಯೆಗಳ ಬಗ್ಗೆ ಮನಮುಟ್ಟುವಂತೆ ಬರೆದು ಜನರಿಗೆ ತಲುಪಿಸುವುದು ಅತ್ಯವಶ್ಯಕ; ಕೆ ಸೋಮಶೇಖರ್

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಕರ್ನಾಟಕದ ಇತಿಹಾಸದಲ್ಲಿ ಪೆಟ್ರೋಲ್ ಬೆಲೆ ಇಷ್ಟು ದುಬಾರಿಯಾಗಿರಲಿಲ್ಲ ಎಂದು ಹೇಳಿಕೆ ನೀಡಿರುವ ಬಗ್ಗೆ ಮಾತನಾಡಿದ ಅವರು, “ಕುಮಾರಸ್ವಾಮಿ ಹಿಂದೆ ಇದ್ದಾಗ ಶೇ 35% ಇತ್ತು. ಬಿಜೆಪಿ ಸರ್ಕಾರ ಇರುವ ರಾಜಸ್ಥಾನದಲ್ಲಿ ₹104.86 ಇದೆ. ಮಧ್ಯಪ್ರದೇಶದಲ್ಲಿ ₹106.47 ಇದೆ. ಕರ್ನಾಟದಲ್ಲಿ ಈ ರಾಜ್ಯಗಳಿಗಿಂತ ಕಡಿಮೆ ಇದೆ. ಪಕ್ಕದ ರಾಜ್ಯಗಳಿಗೆ ಸಮವಾಗಿರಲಿ ಎಂಬ ಕಾರಣಕ್ಕೆ ಬೆಲೆ ಏರಿಕೆ ಮಾಡಿರಲಿಲ್ಲ. ಚುನಾವಣೆಯ ನಂತರ ತಲೆಬದ್ಧಗೊಳಿಸಲು ಏರಿಕೆ ಮಾಡಿದ್ದೇವೆ. ಇತರೆ ರಾಜ್ಯಗಳಲ್ಲಿ ಇದಕ್ಕಿಂತ ಹೆಚ್ಚಿದೆ” ಎಂದರು.

ಗ್ಯಾರಂಟಿಗಳ ಬಗ್ಗೆ ಕಾಂಗ್ರೆಸ್ ನಲ್ಲಿ ಕೆಲವರು ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಮಾತನಾಡಿ ಅನುದಾನವನ್ನು ನೀಡಲಾಗಿದೆ. ಗ್ಯಾರಂಟಿಗಳನ್ನು ಬಡವರ ಅನುಕೂಲಕ್ಕಾಗಿ ಜಾರಿಮಾಡಿದೆ ಚುನಾವಣೆಗಾಗಿ ಅಲ್ಲ ಎಂದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಘಟಪ್ರಭಾ ನದಿ ನೀರಿನ ಹರಿವು ಇಳಿದಿದ್ದರೂ ಮುಂದುವರೆದ ಪ್ರವಾಹ ಸ್ಥಿತಿ

ಘಟಪ್ರಭಾ ನದಿ ನೀರಿನ ಹರಿವು ಇಳಿಕೆ ಕಂಡಿದ್ದರೂ ತೀರದ ಕೆಲ ಗ್ರಾಮ...

ಕೋಲಾರ | ‘ವೇಮಗಲ್ – ಕುರುಗಲ್ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ದಲಿತರನ್ನು ಕಡೆಗಣಿಸಿಲ್ಲ’

ಇತ್ತೀಚೆಗೆ ಕೋಲಾರ ಜಿಲ್ಲೆಯ ವೇಮಗಲ್- ಕುರುಗಲ್ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ 6...

ಧಾರವಾಡ | ಬೆಣ್ಣೆಹಳ್ಳ ಸೇತುವೆ ದುರಸ್ತಿಗೆ ಮುಂದಾಗಲು ಸಚಿವ ಸಂತೋಷ್ ಲಾಡ್ ಸೂಚನೆ

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ತಡಹಾಳ ಹತ್ತಿರದ ದೊಡ್ಡಹಳ್ಳ ಹಾಗೂ ಬೆಣ್ಣೆಹಳ್ಳ...

ಧರ್ಮಸ್ಥಳ ಪ್ರಕರಣ | ನನ್ನ ಬಂಧನ ರಾಜಕೀಯ ಪಿತೂರಿಯ ಭಾಗ: ಮಹೇಶ್ ಶೆಟ್ಟಿ ತಿಮರೋಡಿ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

Download Eedina App Android / iOS

X