ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಇಂದಿನ ಕಾಂಗ್ರೆಸ್ ಸರ್ಕಾರದಷ್ಟು ಜನ ವಿರೋಧಿ ಸರ್ಕಾರವನ್ನು ರಾಜ್ಯದ ಜನತೆ ಎಂದೂ ಕಂಡಿಲ್ಲ. ಪೆಟ್ರೋಲ್-ಡೀಸೆಲ್ ದರ ಆರಂಭವಷ್ಟೇ ಇನ್ನು ಈ ರಾಜ್ಯದಲ್ಲಿ ಪ್ರತಿಯೊಂದು ವಸ್ತುಗಳ ಬೆಲೆಗಳೂ ಗಗನಕ್ಕೇರಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಕಿಡಿಕಾರಿದ್ದಾರೆ.
ಎಕ್ಸ್ ತಾಣದಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು, “ಸುಳ್ಳು ಭರವಸೆಗಳು ಹಾಗೂ ಯೋಜನೆಗಳನ್ನು ಪೂರೈಸಲಾಗದೇ ರಾಜ್ಯದ ಖಜಾನೆಯನ್ನು ಬರಿದು ಮಾಡಿಕೊಂಡಿರುವ ಈ ಸರ್ಕಾರ ಜನಕಲ್ಯಾಣವನ್ನು ಮರೆತು ಭ್ರಷ್ಟಾಚಾರದಲ್ಲಿ ತೊಡಗಿ ರಾಜ್ಯದ ಜನತೆಯನ್ನು ಸಂಕಷ್ಟಕ್ಕೆ ತಳ್ಳುತ್ತಿದೆ” ಎಂದಿದ್ದಾರೆ.
“ಜನಸಾಮಾನ್ಯರು, ಕಾರ್ಮಿಕರು, ಬಡವರು ಹಾಗೂ ಮಧ್ಯಮ ವರ್ಗದವರು ಬೆಲೆ ಏರಿಕೆಯ ಚಕ್ರವ್ಯೂಹದಲ್ಲಿ ಸಿಲುಕಿ ನಲುಗುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಈ ಬೆಲೆ ಏರಿಕೆಯ ಬಿಸಿ ಪಂಪ್ ಸೆಟ್, ಟ್ರಾಕ್ಟರ್ ಸೇರಿದಂತೆ ಇತರ ಕೃಷಿ ಉಪಕರಣಗಳನ್ನು ಬಳಸುವ ರೈತರ ಕೈ ಸುಡಲಿದೆ” ಎಂದು ಹೇಳಿದ್ದಾರೆ.
“ವಾಹನವನ್ನು ಆಶ್ರಯಿಸಿ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೂ ಕೂಡ ಇದರ ಬಿಸಿ ತಟ್ಟಲಿದೆ. ಒಟ್ಟಾರೆಯಾಗಿ ಎಲ್ಲ ಕ್ಷೇತ್ರಗಳಿಗೂ ಬೆಲೆ ಏರಿಕೆಯ ಬಿಸಿತಟ್ಟಿಸುವ ನಿರ್ಧಾರವನ್ನು ಈ ಕೂಡಲೇ ಕೈಬಿಡಬೇಕೆಂದು ಒತ್ತಾಯಿಸುತ್ತೇವೆ” ಎಂದಿದ್ದಾರೆ.
“ರಾಜ್ಯದ ಸಂಪನ್ಮೂಲವನ್ನು ಬಳಸಿಕೊಳ್ಳುವ ಯಾವ ಕಾಳಜಿಯೂ ಸರ್ಕಾರಕ್ಕಿಲ್ಲ, ಬದಲಾಗಿ ರಾಜ್ಯದ ಸಂಪನ್ಮೂಲವನ್ನು ಕೊಳ್ಳೆ ಹೊಡೆಯುವವರಿಗೆ ಆಥಿತ್ಯ ನೀಡುವ ತಾಣವನ್ನಾಗಿಸುತ್ತಿದೆ, ಕಾಂಗ್ರೆಸ್ ಕರ್ನಾಟಕದಲ್ಲಿ ಅರಾಜಕತೆ ಸೃಷ್ಟಿ ಮಾಡಿಯೇ ಅಧಿಕಾರದಿಂದ ಕೆಳಗಿಳಿಯುವ ಶಪಥ ಮಾಡಿದಂತೆ ಕಾಣುತ್ತಿದೆ, ಈ ಕೂಡಲೇ ಪೆಟ್ರೋಲ್ – ಡೀಸೆಲ್ ಗಳ ಮೇಲೆ ಹೆಚ್ಚಿಸಿರುವ ದರವನ್ನು ವಾಪಾಸ್ ಪಡೆಯದಿದ್ದರೆ ಹೋರಾಟವನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ”ಎಂದು ಎಚ್ಚರಿಸಿದ್ದಾರೆ.

ಸರ್ ಬಿಜೆಪಿ ಅಧಿಕಾರ ದಲ್ಲಿ ಇದ್ದಿದ್ರೆ ಅದು ಆಗ್ಲೇ 120 ದಾಟಿರ ತಿತ್ತು ಆದ್ರೆ ಈಗ ಕೇಂದ್ರ ದಲ್ಲಿ ಅವ್ರ್ದೆ ಸರ್ಕಾರ ಇದೆ ಕಡಿಮೆ ಮಾಡೋಕೆ ಬೀದಿಗೆ ಇಳಿಯ ಲಿಲ್ಲಾ ಯಾಕೆ
ಕೋಟ್ಯಾಧಿಪತಿ ರಾಜ್ಯಾಧ್ಯಕ್ಷರು ಧಾರವಾಡದ ಕೇಂದ್ರ ಮಂತ್ರಿಗಳು ವಿರೋಧಕ್ಕಾಗಿ ವಿರೋಧ ಪಕ್ಷದ ನಾಯಕರಿಗೆ ವಯಸ್ಸಿನ ಮರೆವೋ ಅಥವಾ ಜಾಣ ಮರೆವೋ,,,2014 ರಲ್ಲಿ ನೀವು ಅಧಿಕಾರಕ್ಕೆ ಬರುವ ಮೊದಲು ಈಗಿನ ಕಾಂಗ್ರೆಸ್ ಸರ್ಕಾರ ಸರ್ಚಾರ್ಜ್ ಹೆಚ್ಚಿಸುವ ಮೊದಲು ಇದ್ದ ಡೀಸೆಲ್ ಪೆಟ್ರೋಲ್ ದರಗಳನ್ನು ಒಮ್ಮೆ ಕಂಪೇರ ಮಾಡಿ ನೋಡಿ,,, ಬಹುಶಃ ವಾಸ್ತವ ತಿಳಿದುಕೊಳ್ಳುವ ಸಾಮರ್ಥ್ಯ ಇದ್ದರೆ,,ನೀವುಗಳು ಗರ್ಭಗುಡಿಯನ್ನು ಬಿಟ್ಟು ಹೊರಗೆ ಬಂದು ಪ್ರತಿಭಟನೆ ಮಾಡುವ ನೈತಿಕತೆ ಬರಲಿಕ್ಕಿಲ್ಲ,,