ಅಮೆಜಾನ್ನಲ್ಲಿ ‘ಎಕ್ಸ್ ಬಾಕ್ಸ್ ಕಂಟ್ರೋಲರ್’ ಆರ್ಡರ್ ಮಾಡಿದವರಿಗೆ ಅಮೆಜಾನ್ ಕಂಪನಿ ಉಚಿತವಾಗಿ ಜೀವಂತ ಹಾವು ಪಾರ್ಸೆಲ್ ಕಳಿಸಿರುವ ಘಟನೆ ಬೆಂಗಳೂರಿನ ಸರ್ಜಾಪುರದಲ್ಲಿ ನಡೆದಿದೆ.
ಹೌದು, ತಾವು ಆರ್ಡರ್ ಮಾಡಿದ ಪಾರ್ಸೆಲ್‌ನಲ್ಲಿ ಎಕ್ಸ್ ಬಾಕ್ಸ್ ಕಂಟ್ರೋಲರ್ ಜತೆಗೆ ಜೀವಂತ ಹಾವು ಇರುವುದನ್ನು ತನ್ವಿ ಅವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ತನ್ವಿ ಅವರು ಅಮೆಜಾನ್ನಲ್ಲಿ ಎಕ್ಸ್ಬಾಕ್ಸ್ ಕಂಟ್ರೋಲರ್ ಬುಕ್ ಮಾಡಿದ್ದಾರೆ. ಪಾರ್ಸಲ್ ಮನೆಗೆ ಬಂದ ಬಳಿಕ ಅದನ್ನು ತೆರೆಯಲು ಮುಂದಾಗಿದ್ದಾರೆ. ಈ ವೇಳೆ, ಬಾಕ್ಸ್‌ನಿಂದ ಶಬ್ದ ಬರುತ್ತಿತ್ತು. ಮುಂದಾಗಿ ಬಾಕ್ಸ್ ತೆರೆದು ನೋಡಿದಾಗ ಎಕ್ಸ್ಬಾಕ್ಸ್ ಕಂಟ್ರೋಲರ್ ಜತೆಗೆ ಅದರೊಳಗೆ ಜೀವಂತ ಹಾವು ಇರುವುದು ಕಂಡುಬಂದಿದೆ.
ಪ್ಯಾಕೇಜಿಂಗ್ ಟೇಪ್ನಲ್ಲಿ ಸಿಲುಕಿಕೊಂಡಿದ್ದ ಹಾವು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಅಲ್ಲದೇ, ಟೇಪ್‌ಗೆ ಸಿಲುಕಿಕೊಂಡಿರುವ ಹಾವನ್ನು ಬಕೆಟ್‌ನಲ್ಲಿ ಇಟ್ಟು ವಿಡಿಯೋ ಮಾಡಿದ್ದಾರೆ.
ಇದನ್ನು ಕಂಡು ದಂಗಾದ ಅವರು ತಮ್ಮ ಅನುಭವವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಈ ಘಟನೆಯ ಬಳಿಕ ಅಮೇಜಾನ್ ಕಂಪೆನಿ ಗ್ರಾಹಕರಿಗೆ ಎಕ್ಸ್ಬಾಕ್ಸ್ ಕಂಟ್ರೋಲರ್ಗೆ ನೀಡಿದ್ದ ಹಣವನ್ನು ಸಂಪೂರ್ಣವಾಗಿ ಮರುಪಾವತಿ ಮಾಡಿದೆ.
ಈ ಸುದ್ದಿ ಓದಿದ್ದೀರಾ? ಭೀಕರ ಹಲ್ಲೆಯ ಪರಿಣಾಮ, ರೇಣುಕಾಸ್ವಾಮಿ ಸಾವು ; ಮರಣೋತ್ತರ ಪರೀಕ್ಷಾ ವರದಿ
ವಿಡಿಯೊವನ್ನು ಎಕ್ಸ್/ಟ್ವಿಟರ್ನಲ್ಲಿ ಹಂಚಿಕೊಂಡಿರುವ ತನ್ವಿ ಎಂಬವರು, “ಅಮೆಜಾನ್ನಲ್ಲಿ ಎಕ್ಸ್ಬಾಕ್ಸ್ ಕಂಟ್ರೋಲರ್ಗಾಗಿ ಆರ್ಡರ್ ಮಾಡಿದೆ. ಅದರೊಂದಿಗೆ ಹಾವನ್ನು ಉಚಿತವಾಗಿ ಪಡೆದೆ” ಎಂದು ಬರೆದುಕೊಂಡಿದ್ದಾರೆ. ತನ್ವಿ ಅವರ ಖಾತೆಯಲ್ಲಿ ಬೆಂಗಳೂರಿನವರು ಎಂಬ ಮಾಹಿತಿ ಇದೆ.
ವಿಡಿಯೊ ಹಂಚಿಕೊಂಡಿರುವ ಪ್ರಕಾಶ್ ಎಂಬವರು, ‘ಸರ್ಜಾಪುರ ರಸ್ತೆಯಲ್ಲಿರುವ ಕುಟುಂಬವೊಂದು, ಅಮೆಜಾನ್ನಲ್ಲಿ ತಾವು ಆರ್ಡರ್ ಮಾಡಿದ್ದ ಎಕ್ಸ್ಬಾಕ್ಸ್ ಕಂಟ್ರೋಲರ್ ಜೊತೆಗೆ ಜೀವಂತ ಹಾವನ್ನೂ ಸ್ವೀಕರಿಸಿರುವ ಆಘಾತಕಾರಿ ಘಟನೆ ನಡೆದಿದೆ. ಅದೃಷ್ಟವಶಾತ್, ಆ ವಿಷಕಾರಿ ಹಾವು ಪ್ಯಾಕಿಂಗ್ ಟೇಪ್ನಲ್ಲೇ ಸಿಲುಕಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ‘ ಎಂದು ತಿಳಿಸಿದ್ದಾರೆ.
ಅಮೆಜಾನ್ ಆರ್ಡರ್ನಲ್ಲಿ ನಿಮಗೆ ಆದ ಅನಾನುಕೂಲತೆಯ ಬಗ್ಗೆ ವಿಷಾದಿಸುತ್ತೇವೆ. ಈ ಬಗ್ಗೆ ನಾವು ಪರಿಶೀಲನೆ ಮಾಡುತ್ತೇವೆ. ದಯವಿಟ್ಟು ಅಗತ್ಯವಿರುವ ವಿವರಗಳನ್ನು ಹಂಚಿಕೊಳ್ಳಿ. ನಮ್ಮ ತಂಡವು ನವೀಕರಣದೊಂದಿಗೆ ಶೀಘ್ರದಲ್ಲೇ ನಿಮ್ಮನ್ನು ಸಂಪರ್ಕಿಸುತ್ತದೆ” ಎಂದು ಅಮೆಜಾನ್ ಟ್ವೀಟ್ ಮಾಡಿದೆ.
ಆದರೆ, ಅಮೆಜಾನ್ ವಿಷಪೂರಿತ ಹಾವಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬದಲಾಗಿ ತಪ್ಪಾಗಿ ಪಾರ್ಸೆಲ್ ಬಂದಿರುವುದಕ್ಕೆ ವಿಷಾದ ವ್ಯಕ್ತಪಡಿಸುವುದಾಗಿ ಹೇಳಿಕೊಂಡಿದೆ.