.ಡಿಸಾಲ ಪಡೆದು ಬ್ಯಾಂಕ್‌ಗಳಿಗೆ ಇಪ್ಪತ್ತು ಸಾವಿರ ಕೋಟಿ ರೂ.ಗೂ ಅಧಿಕ ಹಣವನ್ನು ವಂಚಿಸಿದ ಆರೋಪದ ಮೇಲೆ ಏಮ್‌ಟೆಕ್ ಗ್ರೂಪ್ ಸಂಸ್ಥೆಗಳು ಹಾಗೂ ಅವರ ಪ್ರವರ್ತಕ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ ಸಂಸ್ಥೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದೆಹಲಿ-ಎನ್‌ಸಿಆರ್, ಮುಂಬೈ, ನಾಗ್ಪುರದ 35 ಕಚೇರಿಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಪರಿಶೋಧನೆಯಲ್ಲಿ ತೊಡಗಿದ್ದಾರೆ.
ಏಮ್‌ಟೆಕ್ ಗ್ರೂಪಿನ ನಿರ್ದೇಶಕರಾದ ಅರವಿಂದ್ ಧಾಮ್, ಗೌತಮ್ ಮಲ್ಹೋತ್ರಾ ಹಾಗೂ ಇತರರ ನಿವಾಸದ ಮೇಲೆಯೂ ದಾಳಿ ನಡೆಸಲಾಗಿದೆ. ಸಂಸ್ಥೆಯ ದೆಹಲಿ, ಗುರುಗ್ರಾಮ, ನೋಯ್ಡಾ, ಮುಂಬೈ ಹಾಗೂ ನಾಗ್ಪುರದ ವಾಣಿಜ್ಯ ಹಾಗೂ ವಸತಿ ಆವರಣಗಳ ಮೇಲೆ ಇಂದು ಬೆಳಿಗ್ಗೆಯಿಂದಲೇ ದಾಳಿ ನಡೆಸಲಾಗಿದೆ.
ಏಮ್‌ಟೆಕ್-ಎಸಿಐಎಲ್ ಸಂಸ್ಥೆ ಸಾಲ ಪಡೆದು ಬ್ಯಾಂಕ್‌ಗಳಿಗೆ 20 ಸಾವಿರ ಕೋಟಿ ರೂ. ವಂಚಿಸಿದ ನಂತರ ಸಿಬಿಐ ತನಿಖೆ ಕೈಗೊಂಡು ಎಫ್‌ಐಆರ್ ದಾಖಲಿಸಿತ್ತು. ನಂತರದಲ್ಲಿ ರಾಷ್ಟ್ರೀಯ ಕಂಪನಿಗಳ ಕಾನೂನು ಪ್ರಾಧಿಕಾರ ವಿಚಾರಣೆ ನಡೆಸಿ ಕೆಲವು ಕಂಪನಿಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಬಿಎಂಪಿಗೆ ಬೇಕಿರುವುದು ವಿಭಜನೆಗೂ ಮುಖ್ಯವಾಗಿ ಚುನಾವಣೆ
ಸುಪ್ರೀಂ ಕೋರ್ಟ್ ಕೂಡ ಇ.ಡಿ ತನಿಖೆ ನಡೆಸುವಂತೆ ಸೂಚನೆ ನೀಡಿದೆ. ಜಾರಿ ನಿರ್ದೇಶನಾಲಯಗಳ ಪ್ರಕಾರ ಏಮ್‌ಟೆಕ್ ಸಂಸ್ಥೆಗಳ ಬೊಕ್ಕಸಕ್ಕೆ 10 ರಿಂದ 15 ಸಾವಿರ ಕೋಟಿ ರೂ. ನಷ್ಟ ಉಂಟಾಗಿದೆ.
ಏಮ್‌ಟೆಕ್ ಕಂಪನಿಯು ರಿಯಲ್ ಎಸ್ಟೇಟ್, ವಿದೇಶಿ ಹೂಡಿಕೆ ಹಾಗೂ ನೂತನ ಕಂಪನಿಗಳಲ್ಲಿ ಹೂಡಿಕೆ ಮಾಡಲು ಸಾಲದ ಹಣವನ್ನು ತೊಡಗಿಸಿಕೊಂಡಿದೆ ಎಂದು ಇ.ಡಿ ಶಂಕಿಸಿದೆ.
ಏಮ್‌ಟೆಕ್ ಸಂಸ್ಥೆಯು ಅದೇ ರೀತಿ ಹುಸಿ ಮಾರಾಟ, ಆಸ್ತಿ ಗಳಿಕೆ, ಸಾಲ ತೀರಿಕೆ ಹಾಗೂ ಲಾಭ ಗಳಿಸಲು ಸಾಲದ ಹಣವನ್ನು ಬಳಸಿಕೊಂಡಿದೆ. ಅಲ್ಲದೆ ಸಾವಿರಾರು ಕೋಟಿ ಆಸ್ತಿಗಳನ್ನು ನಕಲಿ ಕಂಪನಿಗಳು, ವಿದೇಶಿ ಹೂಡಿಕೆ ಹಾಗೂ ನಿರ್ದೇಶಕರು ಹಾಗೂ ಷೇರುದಾರರ ಮೂಲಕ ಬೇನಾಮಿ ಹೆಸರಿನಲ್ಲಿ ತೊಡಗಿಸಿದೆ ಎಂದು ಇ.ಡಿ ಆರೋಪಿಸಲಾಗಿದೆ.
