ಗಂಗಾವತಿ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿ ಶರಣಪ್ಪ ಸಜ್ಜೀಹೊಲ ಪರವಾಗಿ ಕ್ಷೇತ್ರದ ಇರಕಲ್ಗಡ, ಯಲಮಗೇರಿ, ಹನುಮನ ಹಟ್ಟಿ, ಇತ್ಯಾದಿ ಹಳ್ಳಿಗಳಲ್ಲಿ ಪಕ್ಷದ ಮಹಿಳಾ ಮುಖಂಡರು ಮತ ಬೇಟೆ ಆರಂಭಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಎಲ್ಲ ಹಳ್ಳಿಗಳಲ್ಲಿ ಪಕ್ಷದ ಮುಖಂಡರು ದೆಹಲಿ ಎಎಪಿ ಸರ್ಕಾರದ ಸಾಧನೆಗಳ ಕುರಿತು ಸಂವಾದ ಮತ್ತು ಚರ್ಚೆ ನಡೆಸುವ ಮೂಲಕ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ. ರಾಜ್ಯದಲ್ಲಿ ದೆಹಲಿ ಮಾದರಿ ಸರ್ಕಾರ ತರಲು ಎಎಪಿಗೆ ಮತ ನೀಡಬೇಕೆಂದು ಮನವಿ ಮಾಡುತ್ತಿದ್ದಾರೆ.
ದೆಹಲಿ ಸರ್ಕಾರದಲ್ಲಿ ಮಹಿಳೆಯರಿಗೆ ವಿಶೇಷವಾಗಿ ದೊರೆಯುವ ಸೌಲಭ್ಯಗಳು ಕರ್ನಾಟಕದಲ್ಲಿ ಮತ್ತು ಗಂಗಾವತಿಯಲ್ಲಿ ತಮಗೂ ಬೇಕು ಎಂದು ಆಶಯ ವ್ಯಕ್ತಪಡಿಸಿರುವ ಗ್ರಾಮಸ್ಥರು ಎಎಪಿಯನ್ನು ಬೆಂಬಲಿಸುವುದಾಗಿ ಹೇಳಿದ್ದಾರೆಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಲೋಕಾಯುಕ್ತ ದಾಳಿ | ಬಿಜೆಪಿ ಸೇರಿದ್ದ ನಿವೃತ್ತ ಅಧಿಕಾರಿ ಬಳಿ ಕೋಟಿ ಆಸ್ತಿ, ಆನೆ ದಂತ ಪತ್ತೆ
ಪಕ್ಷದ ಮಹಿಳಾ ಮುಖಂಡರಲ್ಲಿ ರೇಣುಕಾ ಬಸುರಾಜ್, ಜ್ಯೋತಿ ಲಕ್ಷ್ಮಿ ಸಜ್ಜಿ ಹೊಲ, ಬಸಮ್ಮ, ಸಲ್ಮಾ ಇತರರು ಇದ್ದರು. ಅಲ್ಲದೆ ವಿರೂಪಣ್ಣ, ಚಂದ್ರಶೇಖರ್ ವರ್ಗ, ಗೋವಿಂದಪ್ಪ, ನಜೀರ್ ಅಹ್ಮದ್ ಇತರೆ ಕಾರ್ಯಕರ್ತರು ಹಾಜರಿದ್ದರು.