ದೆಹಲಿಯಲ್ಲಿ ತೀವ್ರ ನೀರಿನ ಬಿಕ್ಕಟ್ಟು ಉಂಟಾಗಿದ್ದು, ದೆಹಲಿ ಸರ್ಕಾರದ ಸಚಿವೆ, ಎಎಪಿ ನಾಯಕಿ ಅತಿಶಿ ಶುಕ್ರವಾರ ದಕ್ಷಿಣ ದೆಹಲಿಯ ಭೋಗಲ್‌ನಲ್ಲಿ ತನ್ನ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಹರಿಯಾಣದಿಂದ ದಿನಕ್ಕೆ 100 ಮಿಲಿಯನ್ ಗ್ಯಾಲನ್ ನೀರು ಪಡೆಯಲು ಒತ್ತಡ ಹೇರಲು ಈ ಮುಷ್ಕರ ಆರಂಭಿಸಿದ್ದಾರೆ.
ವೇದಿಕೆಯಲ್ಲಿ ಅತಿಶಿ ಅವರೊಂದಿಗೆ ಸುನಿತಾ ಕೇಜ್ರಿವಾಲ್, ಸಂಜಯ್ ಸಿಂಗ್ ಮತ್ತು ಇತರ ಪಕ್ಷದ ಶಾಸಕರು ಕೂಡಾ ಭಾಗಿಯಾಗಿದ್ದಾರೆ. ಉಪವಾಸವನ್ನು ಪ್ರಾರಂಭಿಸುವ ಮೊದಲು, ಅತಿಶಿ ಸುನೀತಾ ಕೇಜ್ರಿವಾಲ್, ಸಂಜಯ್ ಸಿಂಗ್ ಮತ್ತು ಇತರರೊಂದಿಗೆ ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಸಮಾಧಿಗೆ ಗೌರವ ಸಲ್ಲಿಸಿದರು.
ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸುವ ಮುನ್ನ ಇಂದು ಮುಂಜಾನೆ ಅತಿಶಿ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. “ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಹರಿಯಾಣದ ಬಿಜೆಪಿ ಸರ್ಕಾರವು ದೆಹಲಿಯ ಬಾಕಿ ನೀರನ್ನು ಬಿಡುಗಡೆ ಮಾಡುತ್ತಿಲ್ಲ” ಎಂದು ಅತಿಶಿ ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಅಬಕಾರಿ ನೀತಿ ಪ್ರಕರಣ| ಅರವಿಂದ್ ಕೇಜ್ರಿವಾಲ್ ಬಿಡುಗಡೆಗೆ ದೆಹಲಿ ಹೈಕೋರ್ಟ್ ತಡೆ
“ಅನ್ಯಾಯದ ವಿರುದ್ಧ ಹೋರಾಡಬೇಕಾದರೆ ಸತ್ಯಾಗ್ರಹದ ಮಾರ್ಗವನ್ನು ಅಳವಡಿಸಿಕೊಳ್ಳಬೇಕು ಎಂದು ಮಹಾತ್ಮ ಗಾಂಧೀಜಿ ಬೋಧಿಸಿದ್ದಾರೆ” ಎಂದೂ ಬರೆದಿದ್ದಾರೆ.
ಬುಧವಾರ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅತಿಶಿ ಪತ್ರ ಬರೆದು, ರಾಷ್ಟ್ರ ರಾಜಧಾನಿಯಲ್ಲಿರುವ ನೀರಿನ ಬಿಕ್ಕಟ್ಟನ್ನು ಪರಿಹರಿಸಲು ಮಧ್ಯಪ್ರವೇಶಿಸಬೇಕೆಂದು ಕೋರಿದರು.
#WATCH | Delhi Water Minister Atishi begins indefinite hunger strike for water crisis
Delhi CM Arvind Kejriwal’s wife Sunita Kejriwal says, ” Kejriwal says that ‘when I see on tv, the way Delhi people are suffering due to water scarcity, it hurts me. I hope Atishi’s ‘tapasya’… pic.twitter.com/faQepXdv5y
— ANI (@ANI) June 21, 2024
ಇನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ರವನ್ನು ಪತ್ನಿ ಸುನೀತಾ ಕೇಜ್ರಿವಾಲ್ ಓದಿದ್ದಾರೆ. “ದೆಹಲಿಯ ಜನರು ನೀರಿನ ಬಿಕ್ಕಟ್ಟಿನಿಂದ ಬಳಲುತ್ತಿರುವುದನ್ನು ಟಿವಿಯಲ್ಲಿ ನೋಡಿ ನನಗೆ ಭಾರೀ ನೋವಾಗುತ್ತದೆ. ಅತಿಶಿಯ ತಪ್ಪಸ್ಸು ಯಶಸ್ವಿಯಾಗುತ್ತದೆ, ದೆಹಲಿ ಜನರಿಗೆ ನೆಮ್ಮದಿ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ. ನಾನು ಅತಿಶಿಗೆ ಶುಭವಾಗಲಿ” ಎಂದು ತಿಳಿಸಿದರು.
ಈ ನಡುವೆ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಅರವಿಂದ್ ಕೇಜ್ರಿವಾಲ್ ಅವರಿಗೆ ರೂಸ್ ಅವೆನ್ಯೂ ಕೋರ್ಟ್ ನೀಡಿದ ಜಾಮೀನು ತೀರ್ಪಿಗೆ ದೆಹಲಿ ಹೈಕೋರ್ಟ್ ಶುಕ್ರವಾರ ತಡೆಯೊಡ್ಡಿದೆ.
हरियाणा सरकार से दिल्लीवालों के हक़ का पानी दिलवाने के लिए ‘पानी सत्याग्रह’ की शुरुआत पर, जनता से संबोधन | LIVE https://t.co/ctZfz0CtuO
— Atishi (@AtishiAAP) June 21, 2024
“ಹೈಕೋರ್ಟ್ ಈ ವಿಷಯವನ್ನು ಕೈಗೆತ್ತಿಕೊಳ್ಳುವವರೆಗೆ ತೀರ್ಪಿಗೆ ತಡೆ ನೀಡಲಾಗುತ್ತದೆ. ದೆಹಲಿ ಹೈಕೋರ್ಟ್ ಪ್ರಕರಣವನ್ನು ವಿಚಾರಣೆ ಮಾಡುವವರೆಗೆ ವಿಚಾರಣಾ ನ್ಯಾಯಾಲಯದ (ರೂಸ್ ಅವೆನ್ಯೂ) ಮುಂದೆ ಯಾವುದೇ ಪ್ರಕ್ರಿಯೆಗಳು ಇರುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.