ಅಮೆರಿಕದ ಅರ್ಕಾನ್ಸಾಸ್ನಲ್ಲಿರುವ ಕಿರಾಣಿ ಅಂಗಡಿಯೊಂದರಲ್ಲಿ ಗುಂಡಿನ ದಾಳಿ ನಡೆದಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಅವರಲ್ಲಿ, ಓರ್ವ ಆಂಧ್ರಪ್ರದೇಶ ಮೂಲದವರು ಎಂದು ಗುರುತಿಸಲಾಗಿದೆ.
ಆಂಧ್ರದ ಬಾಪಟ್ಲಾ ಜಿಲ್ಲೆಯ ದಾಸರಿ ಗೋಪಿಕೃಷ್ಣ ಅವರು ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಅವರು 8 ತಿಂಗಳ ಹಿಂದೆಯಷ್ಟೇ ಅಮೆರಿಕಕ್ಕೆ ತೆರಳಿದ್ದರು.
ದಾಸರಿ ಅವರು ಅರ್ಕಾನ್ಸಾಸ್ನ ಸಣ್ಣ ಪಟ್ಟಣ ಫೋರ್ಡೈಸ್ನಲ್ಲಿ ಮ್ಯಾಡ್ ಬುಚರ್ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಬಂದೂಕುಧಾರಿಯೊಬ್ಬ ಅಂಗಡಿ ಮತ್ತು ಪಾರ್ಕಿಂಗ್ ಸ್ಥಳದಲ್ಲಿ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾನೆ. ನಾಲ್ವರು ಮೃತಪಟ್ಟಿದ್ದು, ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಬಿಲ್ಲಿಂಗ್ ಕೌಂಟರ್ ನಲ್ಲಿದ್ದ ದಾಸರಿ ಅವರಿಗೆ ಗಂಭೀರ ಗಾಯಗಳಾಗಿದ್ದವು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರೆ, ಚಿಕಿತ್ಸೆ ಫಲಿಸದೆ ಮರುದಿನ ಅವರು ಸಾವನ್ನಪ್ಪಿದ್ದಾರೆ.
ದುಷ್ಕರ್ಮಿ ಗುಂಡಿನ ದಾಳಿ ನಡೆಸಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಕ್ಯಾಶ್ ಕೌಂಟರ್ನಲ್ಲಿದ್ದ ಸಂತ್ರಸ್ತ ಕುಸಿದು ಬೀಳುತ್ತಿದ್ದಂತೆ, ಕೌಂಟರ್ಗೆ ಹಾರಿದ ಬಂಧೂಕುದಾರಿ, ಏನನ್ನೋ ಎತ್ತಿಕೊಂಡು ಪಾರಾರಿಯಾಗಿರುವುದು ಸೆರೆಯಾಗಿದೆ.