ಚಿಕ್ಕ ವಯಸ್ಸಿನಲ್ಲಿಯೇ ಉನ್ನತ ಸಾಧನೆಗೈದ ವಿ ಉದಯ ಕಡಕೋಳ ಅವರ ವ್ಯಕ್ತಿತ್ವ ಸ್ಪೂರ್ಥಿದಾಯಕವಾದದ್ದು. ಉದಯ ಅವರಂತಹ ಯುವಕರು ರಾಜ್ಯದ ನೆಲದಲ್ಲಿ ಹುಟ್ಟಿಬರಬೇಕು ಎಂದು ರಾಜ್ಯ ಸಂಘಟನಾ ಸಂಚಾಲಕ ಶ್ಯಾಮರಾವ ಘಾಟಗೆ ಹೇಳಿದರು.
ಇತ್ತೀಚೆಗೆ ಸಾವನ್ನಪ್ಪಿದ ಉದಯ ಕೊಡಕೋಳ ಅವರ ನೆನಪಿನಲ್ಲಿ ಬಾಗಲಕೋಟೆಯ ಜಮಖಂಡಿಯಲ್ಲಿ ನುಡಿನಮನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಓರ್ವ ಅವಿರತ ಹೋರಾಟಗಾರ ಉದಯ ಅವರು ಅತೀ ಚಿಕ್ಕ ವಯಸ್ಸಿನಲ್ಲಿ ನಮ್ಮನ್ನಗಲಿದ್ದಾರೆ. ಅವರ ಕುಟುಂಬಕ್ಕೆ ನೆರವಾಗುವುದು ಸಂಘಟನೆಯ ಕರ್ತವ್ಯವಾಗಿದೆ. ಅವರ ಕುಟುಂಬಸ್ಥರಿಗೆ ದಸಂಸದ ಹಲವಾರು ಮುಖಂಡರು ಆರ್ಥಿಕ ನೆರವು ನೀಡಿದ್ದಾರೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸಂಚಾಲಕಿ ಶೋಭಾ ಕಟ್ಟಿಮನಿ, ರಾಜ್ಯ ಸಂಘಟನಾ ಸಂಚಾಲಕ ಕೆಂಪಣ್ಣ ಸಾಗ್ಯ, ರಾಜು ಮೇಲಿನಕೇರಿ, ಹಿರಿಯ ಸಂಪಾದಕ ಅನೀಲ ಹೊಸಮನಿ, ಸಲ್ಮಾನ ಪಾರ್ಥನಳ್ಳಿ .ವೆಂಕಟೇಶ ಆನೇಕಲ ಮಾತನಾಡಿದರು.
ನುಡಿನಮನ ಕಾರ್ಯಕ್ರಮದಲ್ಲಿ ವರ್ಧಮಾನ ನ್ಯಾಮಗೌಡ, ಎಫ್.ವೈ. ದೊಡಮನಿ, ಈಶ್ವರ ವಾಳೆಣ್ಣವೆ, ಕಿರಣ ಪಿಸಾಳೆ, ದಾನೇಶ ಘಾಟಗೆ, ರಾಜ್ಯ ಸಮೀತಿ ಸದಸ್ಯ ಪ್ರಭುಲಿಂಗ ಮೇಲಿನಮನಿ, ಚಂದ್ರು ಚಕ್ರವರ್ತಿ, ರಾವುತ ತಳಕೇರಿ, ದೇವೇಂದ್ರ ಹಾದಿಮನಿ, ಮಹೇಶ ಕೋಳಿ, ಮುತ್ತಣ್ಣಾ ಮೇತ್ರಿ, ಆನಂದ ಬೆಳ್ಳಾರೆ, ಚನ್ನು ಕಟ್ಟಿಮನಿ, ರಮೇಶ ಸಣ್ಣಕ್ಕಿ, ತೌಫಿಕ ಪಾರ್ತನಳ್ಳಿ ಇದ್ದರು
ಚಂದ್ರಕಾಂತ ಶಿಂಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರಿತಾ ಶಿರಗುಪ್ಪಿ ನಿರೂಪಿಸಿದರು. ಹನುಮಂತ ಚಿಮ್ಮಲಗಿ ಸ್ವಾಗತಿಸಿದರು.ಮುತ್ತಣ್ಣಾ ಮೇತ್ರಿ ವಂದಿಸಿದರು.