ಸ್ಟಾಕ್ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿರುವ ಐಟಿ ಉದ್ಯೋಗಿಯೊಬ್ಬರು ಸುಮಾರು ₹37 ಲಕ್ಷ ಹಣ ಕಳೆದುಕೊಂಡಿರುವ ಕುರಿತು ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಚಿಕ್ಕಬಳ್ಳಾಪುರ ನಗರದ ಶ್ರೀಕಾಂತ್ ಎಂಬಾತ ಹಣ ಕಳೆದುಕೊಂಡಿರುವ ಐಟಿ ಉದ್ಯೋಗಿ. ಇನ್ಸ್‌ಟಾಗ್ರಾಂನಲ್ಲಿ ತೋರಿಸಿದ JEFFERIES WEALTH MULTIFICATION CENTRE-120 ಎಂಬ ಜಾಹಿರಾತಿನ ಮೂಲಕ ಸ್ಟಾಕ್ ಟ್ರೇಡಿಂಗ್ ಬಗ್ಗೆ ಮಾಹಿತಿ ಪಡೆದಿರುವ ಶ್ರೀಕಾಂತ್, ಬಳಿಕ ಅವರು ಹೇಳಿಂದತೆ ಜೆಫ್ ಸಿಪಿ ಎಂಬ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ತುಮಕೂರು | ಸರಗಳ್ಳತನ; ಆರೋಪಿ ಕಾಲಿಗೆ ಗುಂಡೇಟು
ಅಪ್ಲಿಕೇಷನ್ ಡೌನ್‌ಲೋಡ್ ಮಾಡಿದ ಬಳಿಕ ಅಪ್ಲಿಕೇಶನ್ ಮುಖಾಂತರ ಹಣ ಹೂಡಿಕೆ ಮಾಡಿದರೆ ಕಮಿಷನ್ ಕೊಡುವುದಾಗಿ ತಿಳಿಸಿರುವ ವಂಚಕರು ಸುಮಾರು ₹37 ಲಕ್ಷ ಣವನ್ನು ಹಂತ ಹಂತವಾಗಿ ಖಾತೆಗೆ ಹಾಕಿಸಿಕೊಂಡು ಯಾಮಾರಿಸಿದ್ದಾರೆ.
ಈ ಕುರಿತು ನಗರದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
