ಬೆಂಗಳೂರು | ಮಹಿಳೆಯ ಬರ್ಬರ ಹತ್ಯೆ; ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿ ಬಂಧನ

Date:

Advertisements

ದುಷ್ಕರ್ಮಿಯೊಬ್ಬ ಮಹಿಳೆಯೊಬ್ಬರನ್ನು ವಿವಾಹವಾಗುವುದಾಗಿ ನಂಬಿಸಿ ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಕರೆಸಿ ಆಕೆಗೆ ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ನಡೆದಿದೆ. ಅಲ್ಲದೆ, ಆರೋಪಿಯೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೇಮಾವತಿ ಕೊಲೆಯಾದ ಮಹಿಳೆ. ಆರೋಪಿ ವೇಣು ಆತ್ಮಹತ್ಯೆಗೆ ಯತ್ನಿಸಿದ ಆರೋಪಿ. ಕೊಲೆಯಾದ ಮಹಿಳೆ ಮೂಲತಃ ಆಂಧ್ರಪ್ರದೇಶದವರಾಗಿದ್ದು, ಹೊಸಕೋಟೆಯ ಪೆಟ್ರೋಲ್ ಬಂಕ್​ನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಯೇ ಬಾಡಿಗೆ ಮನೆ ಪಡೆದು ವಾಸವಾಗಿದ್ದರು.

ಹೇಮಾವತಿ ಹಾಗೂ ವೇಣು ಇಬ್ಬರು ವಿವಾಹೇತರ ಸಂಬಂಧ ಹೊಂದಿದ್ದರು. ಆದರೆ, ಆರೋಪಿ ವೇಣು ಹೇಮಾವತಿ ಮನೆಗೆ ಬಂದು ಹೋಗುವುದನ್ನು ಕಂಡು ಸ್ಥಳೀಯರು ಇವರನ್ನು ದಂಪತಿ ಎಂದು ಭಾವಿಸಿದ್ದರು.

Advertisements

ಎಂದಿನಂತೆ ಆರೋಪಿ ವೇಣು ಜೂ.24ರ ರಾತ್ರಿ ಹೇಮಾವತಿ ಮನೆಗೆ ಬಂದಿದ್ದಾನೆ. ಜೂ.25ರ ನಸುಕಿನ ಜಾವ 3 ಗಂಟೆವರೆಗೆ ಇದ್ದು ಬಳಿಕ ಚಿಂತಾಮಣಿಯಲ್ಲಿರುವ ತನ್ನ ಪತ್ನಿಯ ಮನೆಗೆ ಹೋಗಿದ್ದಾನೆ. ಮನೆಗೆ ತೆರಳಿದ ಕೂಡಲೇ ತನ್ನ ಮಾವನಿಗೆ ಕರೆ ಮಾಡಿ ‘ನಾನು ವಿಷ ಸೇವಿಸಿದ್ದೇನೆ. ಹೊಸಕೋಟೆಯಲ್ಲಿ ಓರ್ವ ಮಹಿಳೆ ಚಾಕುವಿನಿಂದ ಇರಿದುಕೊಂಡಿದ್ದಾಳೆ’ ಎಂದು ಹೇಳಿದ್ದಾನೆ.

ವಿಚಾರ ತಿಳಿದ ವೇಣು ಮಾವ ಬೆಂಗಳೂರು ಪೊಲೀಸರಿಗೆ ಕರೆ ಮಾಡಿ ಹೊಸಕೋಟೆಯಲ್ಲಿ ಮಹಿಳೆ ಚಾಕುವಿನಿಂದ ಇರಿದುಕೊಂಡ ಬಗ್ಗೆ ತಿಳಿಸಿದ್ದಾನೆ. ಕೂಡಲೇ ಪೊಲೀಸರು ತಂಡಗಳಾಗಿ ಹುಡುಕಾಡಿದ್ದಾರೆ. ಸತತ ನಾಲ್ಕು ಗಂಟೆಗಳ ಶೋಧದ ನಂತರ ಕೊಲೆಯಾದ ಮಹಿಳೆಯ ಮನೆ ಸಿಕ್ಕಿದೆ. ಈ ವೇಳೆ, ಪೊಲೀಸರು ಮನೆ ಒಳಗೆ ತೆರಳಿ ನೋಡಿದಾಗ ಮಹಿಳೆಯ ಗುಪ್ತಾಂಗ ಸೇರಿದಂತೆ ಮೂರು ಕಡೆ ಚಾಕುವನಿಂದ ಇರಿದು ಆಕೆಯನ್ನು ಕೊಲೆ ಮಾಡಲಾಗಿದೆ ಎಂಬುದು ಗೊತ್ತಾಗಿದೆ.

ಮೃತದೇಹವಿದ್ದ ಮನೆಯಲ್ಲಿ ಪರಿಶೀಲನೆ ನಡೆಸಿ ಸಾಕ್ಷ್ಯಗಳನ್ನ ಕಲೆ ಹಾಕಿದ ಪೊಲೀಸರು ನಂತರ ಮಹಿಳೆಯ ಮೃತದೇಹವನ್ನ ಹೊಸಕೋಟೆಯ ಶವಾಗಾರಕ್ಕೆ ರವಾನಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಆಟೋ ಪ್ರಯಾಣ ದರ ಏರಿಕೆಗೆ ಚಾಲಕರ ಸಂಘಟನೆಗಳ ಒತ್ತಾಯ

ಇತ್ತ ಆತ್ಮಹತ್ಯಗೆ ಯತ್ನಿಸಿದ ಆರೋಪಿ ವೇಣು ಅನ್ನು ಚಿಕ್ಕಬಳ್ಳಾಪುರ ಆಸ್ವತ್ರೆಗೆ ದಾಖಲಿಸಲಾಗಿದೆ. ಪೊಲೀಸರು ತನಿಖೆ ನಡೆಸಿದಾಗ ಸತ್ಯ ಬಯಲಾಗಿದ್ದು, ಜೂ.24ರ ರಾತ್ರಿ ಹೇಮಾವತಿ ಮನೆಗೆ ಬಂದ ವೇಣು ಆಕೆಯನ್ನು ಕೊಲೆ ಮಾಡಿ, ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಪೊಲೀಸರು ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿ ವೇಣು ಅನ್ನು ಚಿಕ್ಕಬಳ್ಳಾಪುರ ಆಸ್ವತ್ರೆಯಲ್ಲಿ ಬಂಧಿಸಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಹೊಸಕೋಟೆ ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ವಿಚಾರಣೆ ಬಳಿಕ ಕೊಲೆ ಹಿಂದಿನ ರಹಸ್ಯ ಬೆಳಕಿಗೆ ಬರಲಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಟ್ರಾಫಿಕ್ ದಂಡಗಳಿಗೆ ಶೇ. 50 ರಿಯಾಯಿತಿ: ಬೆಂಗಳೂರು ಸಂಚಾರ ಪೊಲೀಸರ ಘೋಷಣೆ

ಬೆಂಗಳೂರು ಸಂಚಾರ ಪೊಲೀಸರು (ಬಿಟಿಪಿ) ಗುರುವಾರ ಬಾಕಿ ಇರುವ ಟ್ರಾಫಿಕ್ ದಂಡಗಳ...

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

Download Eedina App Android / iOS

X